ಸರಗೂರು

ಸರಗೂರು ತಾಲ್ಲೂಕು ಆಡಳಿತ ಶುರು

ಸೋಮವಾರದಿಂದಲೇ ಸರಗೂರು ತಾಲ್ಲೂಕು ಆಡಳಿತ ಪ್ರಾರಂಭವಾಗಿದೆ. ಇಲಾಖೆಯ ನಾಮಫಲಕಗಳಲ್ಲಿ ಸರಗೂರು ತಾಲ್ಲೂಕು ಎಂದು ಬರೆಯಲಾಗಿದೆ.

ಸರಗೂರು: ಹೊಸ ವರ್ಷದಂದು ಹೊಸ ತಾಲ್ಲೂಕು ಉದಯವಾದ್ದರಿಂದ ಸರಗೂರು ತಾಲ್ಲೂಕು ಹೋರಾಟ ಸಮಿತಿಯಿಂದ ಸಂಭ್ರಮಾಚರಣೆ ನಡೆಯಿತು. ಪಟ್ಟಣ ಪಂಚಾಯಿತಿ ಎದುರು ದಡದಹಳ್ಳಿ ಮಠದ ಷಡಕ್ಷರಿ ಸ್ವಾಮೀಜಿ ಅವರೊಂದಿಗೆ ಸಾರ್ವಜನಿಕರಿಗೆ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.

ಇದೇ ಸಂದರ್ಭದಲ್ಲಿ ಸರಗೂರು ತಾಲ್ಲೂಕು ಹೋರಾಟ ಸಮಿತಿ ಅಧ್ಯಕ್ಷ ಎಸ್.ವಿ.ವೆಂಕಟೇಶ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ.11ರಂದು ಅಧೀಕೃತವಾಗಿ ನೂತನ ತಾಲ್ಲೂಕು ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.

ಸೋಮವಾರದಿಂದಲೇ ಸರಗೂರು ತಾಲ್ಲೂಕು ಆಡಳಿತ ಪ್ರಾರಂಭವಾಗಿದೆ. ಇಲಾಖೆಯ ನಾಮಫಲಕಗಳಲ್ಲಿ ಸರಗೂರು ತಾಲ್ಲೂಕು ಎಂದು ಬರೆಯಲಾಗಿದೆ. ಸರ್ಕಾರದ ಕಟ್ಟಡಗಳಲ್ಲಿ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಇಲಾಖಾವಾರು ಅಧಿಕಾರಿಗಳು ಅಧಿಕಾರ ನಡೆಸಲಿದ್ದಾರೆ. ಮುಖ್ಯಮಂತ್ರಿ ಅಧೀಕೃತವಾಗಿ ಉದ್ಘಾಟಿಸಿದ ನಂತರ ಖಾಲಿ ಹುದ್ದೆಗಳಿಗೆ ಅಧಿಕಾರಿಗಳ ನೇಮಕವಾಗಲಿದೆ ಎಂದು ತಿಳಿಸಿದರು.

ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಶ್ರೀನಿವಾಸ್, ತಾಲ್ಲೂಕು ಪಂಚಾಯಿತಿ ಸದಸ್ಯ ಸ್ಟಾನ್ಲಿ ಬ್ರಿಟೋ, ವರ್ತಕರ ಸಂಘದ ಮಾಜಿ ಅಧ್ಯಕ್ಷ ನಾರಾಯಣ್, ಮುಖಂಡರಾದ ಕೆಂಡಗಣ್ಣಸ್ವಾಮಿ, ಎಪಿಎಂಸಿ ಮಹದೇವಸ್ವಾಮಿ, ಪಾಂಡುರಂಗ, ಪರಶಿವ, ಆಟೊ ಚಾಲಕರು, ಸಾರ್ವಜನಿಕರು ಹಾಜರಿದ್ದರು.

ಕಚೇರಿಗಳ ಉದ್ಘಾಟನೆ: ಸರಗೂರು ತಾಲ್ಲೂಕು ಆಡಳಿತ ಸೋಮವಾರದಿಂದ ಕಾರ್ಯಾರಂಭ ಮಾಡಿತು. ಇಲ್ಲಿನ ಸರ್ಕಾರಿ ಬಾಲಕಿಯರ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಉದ್ಘಾಟಿಸಲಾಯಿತು. ನಾಡ ಕಚೇರಿಯೇ ತಾಲ್ಲೂಕು ಕಚೇರಿಯಾಗಿದೆ. ಸಮುದಾಯ ಆರೋಗ್ಯ ಕೇಂದ್ರವು ಸಾರ್ವಜನಿಕ ಆಸ್ಪತ್ರೆಯಾಗಿ ರೂಪುಗೊಂಡಿದೆ.

ಕೆಲ ಕಟ್ಟಡಗಳಿಗೆ ಸುಣ್ಣಬಣ್ಣ ಬಳಿಯುವ ಕೆಲಸ ಭರದಿಂದ ಸಾಗುತ್ತಿದೆ. ಈಗ ಕೆಲ ಕಚೇರಿಗಳು ಉದ್ಘಾಟನೆಯಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಜ.11ರಂದು ಪಟ್ಟಣಕ್ಕೆ ಆಗಮಿಸಲಿದ್ದು, ಅಂದು ಬಹುತೇಕ ಸರ್ಕಾರಿಗಳು ಕಚೇರಿಗಳು ಪ್ರಾರಂಭವಾಗಲಿವೆ. ಪಟ್ಟಣದ ಎಲ್ಲಾ ಸರ್ಕಾರಿ ಕಚೇರಿಗಳು ಹಾಗೂ ಅಂಗಡಿ ಮುಂಗಟ್ಟುಗಳು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿವೆ.

ಹೋಬಳಿವಾರು ಗ್ರಾಮಗಳ ಹಂಚಿಕೆ

ಸರಗೂರು: ಸರಗೂರು ತಾಲ್ಲೂಕಿನಲ್ಲಿ ಸರಗೂರು ಮತ್ತು ಕಂದಲಿಕೆ ಎಂಬ ಹೋಬಳಿ ರಚಿಸಲಾಗಿದೆ. ಇವುಗಳ ವ್ಯಾಪ್ತಿಗೆ ಬರುವ ಗ್ರಾಮಗಳು ಈ ಕೆಳಗಿನಂತಿವೆ.

ಸರಗೂರು ಹೋಬಳಿ: ಅಂಕುಪುರ, ಅಡಹಳ್ಳಿ, ಬೀರ್ವಾಳು, ಬಸವನಕೋಟೆ, ಬೆಣ್ಣೆಗೆರೆ, ಬಡಗಿ, ಕೆ.ಬೆಳತ್ತೂರು, ಬಿಡಗಲು, ಚಾಮಲಾಪುರ, ಚಂಗೌಡನಹಳ್ಳಿ, ಚಿಲ್ಲಹಳ್ಳಿ, ಚಿಕ್ಕಕುಂದೂರು, ಚಕ್ಕೂರು, ಜಾಟಗಾತಿಪುರ, ಹಂಚೀಪುರ, ಹುಣಸೂರು, ಹಲಸೂರು, ಹುಣಸಹಳ್ಳಿ, ಹಳೆಮಂಚಹಳ್ಳಿ, ಹಾದನೂರು, ಹಿರೇಹಳ್ಳಿ, ಹುಣಗಹಳ್ಳಿ, ಹೂವಿನಕೊಳ, ಕೊತ್ತೇಗಾಲ, ಕೂಲ್ಯ, ಶಾಂತಿಪುರ, ಕಲ್ಲಂಬಾಳು, ಕಟ್ಟೆಹುಣಸೂರು, ಕುನ್ನಪಟ್ಟಣ, ಕುಂದೂರು, ಲಕ್ಕೂರು, ಲಕ್ಷ್ಮಣಾಪುರ, ಲಕ್ಕಸೋಗೆ, ಲಂಕೆ, ಮಸಹಳ್ಳಿ, ಮುತ್ತಿಗೆಚಿಕ್ಕತಳಲು, ಮೂಗುತನಮೂಲೆ, ಮಂಚಹಳ್ಳಿ, ಮುಳ್ಳೂರು, ಮನುಗನಹಳ್ಳಿ, ಮುದ್ದನಹಳ್ಳಿ, ಮೊಳೆಯೂರು, ನಲ್ಲೂರು, ನಂದಿನಾಥಪುರ, ಪುರದಕಟ್ಟೆ, ಸರಗೂರು, ಶಂಭುಗೌಡನ ಹಳ್ಳಿ, ಸಿದ್ದಾಪುರ, ಶಂಖಹಳ್ಳಿ, ವಡೇರಹಳ್ಳಿ.

ಕಂದಲಿಕೆ ಹೋಬಳಿ: ಐನಾಪುರ, ಆಗತ್ತೂರು, ಆಳಗಂಚಿ, ಅಳಲಹಳ್ಳಿ, ಐನೂರು ಮಾರಿಗುಡಿ ಜಂಗಲ್, ಬಂಕವಾಡಿ, ಬೇಗೂರು, ಬೆಟ್ಟದಾವರೆಹುಂಡಿ, ಬೆದ್ದಲಪುರ, ಬಾಡಗ, ಬಿದರಹಳ್ಳಿ, ಚೌಡಹಳ್ಳಿ, ಚಿಕ್ಕಬೆಸುಗೆ, ಚನ್ನಗುಂಡಿ, ದೇವಲಾಪುರ, ಹಗ್ಗನೂರು, ಹುಲ್ಲೇಮಾಳ, ಹಳೆಯೂರು, ಹೆಗ್ಗುಡಿಲು, ಹುರಳಿಪುರ, ಆಲನಹಳ್ಳಿ, ಹುಸ್ಕೂರು, ಹರಿಯಾಲಪುರ, ಹಿರೇಹಳ್ಳಿ, ಹೊಸಕೋಟೆ, ಕಾಟವಾಳು, ಕಂದೇಗಾಲ, ಕೋಣನಾಲತ್ತೂರು, ಕೆಬ್ಬೆಪುರ, ಕಂದಲಿಕೆ, ಕೂಡಗಿ, ಕುಣರ್ೇಗಾಲ, ತರಣಿಮುಂಟಿ ಕಿತ್ತೂರು, ಲಿಂಗೇನಹಳ್ಳಿ, ಮಲ್ಲರಾಜಪುರ, ಬಿ.ಮಟಕೆರೆ, ಮೊಳೆಯೂರು, ವಲ್ಲಹಳ್ಳಿ, ಮರಬೂಗತನಪುರ, ಮೊಳೆಯೂರು ಕಾವಲ್, ನೆಮ್ಮನಹಳ್ಳಿ, ನಡಹಾಡಿ, ನಂಜನಾಥಪುರ, ನರಸೀಪುರ, ಶಿಂಗಪಟ್ಟಣ, ಸೀಗೆವಾಡಿ, ಸಾಗರೆ, ತೆಲಗುಮಸಹಳ್ಳಿ, ಉಯ್ಯಂಬಳ್ಳಿ.

Comments
ಈ ವಿಭಾಗದಿಂದ ಇನ್ನಷ್ಟು
‘ತಾಲ್ಲೂಕಿನಲ್ಲಿ ಪಕ್ಷ ಸಂಘಟನೆಯೇ ನನ್ನ ಗುರಿ’

ಎಚ್.ಡಿ.ಕೋಟೆ
‘ತಾಲ್ಲೂಕಿನಲ್ಲಿ ಪಕ್ಷ ಸಂಘಟನೆಯೇ ನನ್ನ ಗುರಿ’

23 Jan, 2018

ಎಚ್.ಡಿ.ಕೋಟೆ
‘ದೂರು ಕೊಡಲು ಬಂದವರನ್ನೇ ಜೈಲಿಗಟ್ಟುವ ಸರ್ಕಾರ’

‘ರಾಜ್ಯದಲ್ಲಿ ಜನಸಾಮಾನ್ಯರು ನೆಮ್ಮದಿಯಿಂದ ಜೀವನಮಾಡಲಾಗುತ್ತಿಲ್ಲ, ಅವರ ಸ್ವಕ್ಷೇತ್ರದಲ್ಲಿಯೇ ಅಮಾನವೀಯ ಘಟನೆಗಳು ನಡೆಯುತ್ತಿವೆ. ಪೊಲೀಸರ ನಿಯಂತ್ರಣವನ್ನು ನಿವೃತ್ತ ಪೊಲೀಸ್‌ ಅಧಿಕಾರಿ ಕೆಂಪಯ್ಯ ಮಾಡುತ್ತಿದ್ದಾರೆ

23 Jan, 2018
ಮಹಾರಾಣಿ ವಾಣಿಜ್ಯ ಕಾಲೇಜು ಉದ್ಘಾಟನೆ ಸಜ್ಜು

ಮೈಸೂರು
ಮಹಾರಾಣಿ ವಾಣಿಜ್ಯ ಕಾಲೇಜು ಉದ್ಘಾಟನೆ ಸಜ್ಜು

23 Jan, 2018

ಮೈಸೂರು
ನೈರುತ್ಯ ರೈಲ್ವೆಗೆ ₹ 37 ಸಾವಿರ ದಂಡ

ಟಿಕೆಟ್ ಇದ್ದರೂ ಉಜ್ಜಯಿನಿಯಿಂದ ಮೈಸೂರಿಗೆ ರೈಲಿನಲ್ಲಿ ನಗರದ ಕುಟುಂಬವೊಂದು ನಿಂತು ಪ್ರಯಾಣ ಮಾಡಬೇಕಾಗಿ ಬಂದ ಕಾರಣ ನೈರುತ್ಯ ರೈಲ್ವೆಗೆ ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ...

22 Jan, 2018
29 ಕೆರೆಗೆ ನೀರು ತುಂಬಿಸಲು ₹ 79 ಕೋಟಿ; ಸಂಸದ

ಎಚ್.ಡಿ.ಕೋಟೆ
29 ಕೆರೆಗೆ ನೀರು ತುಂಬಿಸಲು ₹ 79 ಕೋಟಿ; ಸಂಸದ

21 Jan, 2018