ಹೊಸನಗರ

‘ಸರ್ಕಾರಿ ಶಾಲೆಗಳ ಬಗ್ಗೆ ಕಡೆಗಣನೆ ಬೇಡ’

ಶೇ 100 ಪಲಿತಾಂಶಕ್ಕೆ ಕಾರಣರಾದ ಎಸ್ಡಿಎಂಸಿ ಸಮಿತಿ ಅಧ್ಯಕ್ಷ ಪ್ರಕಾಶ ಶೆಟ್ಟಿ ಹಾಗೂ ಶಿಕ್ಷಕ ವೃಂದವನ್ನು ಕೂಡ ಸನ್ಮಾನಿಸಿ ಗೌರವಿಸಲಾಯಿತು.

ಹೊಸನಗರ: ಇಂದಿನ ಬದಲಾವಣೆ ಸನ್ನಿವೇಶದಲ್ಲಿ ಮಕ್ಕಳಿಗೆ ಮೌಲ್ಯಯುತ ಶಿಕ್ಷಣದ ಅಗತ್ಯವಿದೆ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಸುರೇಶ ಸ್ವಾಮಿರಾವ್ ಅಭಿಪ್ರಾಯಪಟ್ಟರು. ತಾಲ್ಲೂಕಿನ ಚಿಕ್ಕಪೇಟೆ ನಗರ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಎಸ್ಸೆಸ್ಸೆಲ್ಸಿಯಲ್ಲಿ ಶೇ 100 ಫಲಿತಾಂಶ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.

ಖಾಸಗಿ ಶಿಕ್ಷಣ ಸಂಸ್ಥೆಗಳ ಪೈಪೋಟಿಯ ನಡುವೆ ಕೂಡ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ಹಾಗೂ ಸೌಲಭ್ಯ ದೊರಕುತ್ತಿದೆ. ಅದರ ಕಡೆಗಣನೆ ಎಂದಿಗೂ ಸಲ್ಲದು ಎಂದರು.

ನಗದು ಬಹುಮಾನ: 2016 ಹಾಗೂ 2017ನೇ ಸಾಲಿನ ಎಸ್ಸೆಸೆಲ್ಸಿಯಲ್ಲಿ ಶೇ 100 ಫಲಿತಾಂಶ ಪಡೆದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಶಾಸಕ ಕಿಮ್ಮನೆ ರತ್ನಾಕರ ತಲಾ ₹ 4 ಸಾವಿರ ಮತ್ತು ನಗರ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಕರುಣಾಕರ ಶೆಟ್ಟಿ ತಲಾ ₹ 2 ಸಾವಿರ ನಗದು ಪುರಸ್ಕಾರ ನೀಡಿದ್ದು, ಈ ಸಂದರ್ಭದಲ್ಲಿ ವಿತರಿಸಲಾಯಿತು.

ಶೇ 100 ಪಲಿತಾಂಶಕ್ಕೆ ಕಾರಣರಾದ ಎಸ್ಡಿಎಂಸಿ ಸಮಿತಿ ಅಧ್ಯಕ್ಷ ಪ್ರಕಾಶ ಶೆಟ್ಟಿ ಹಾಗೂ ಶಿಕ್ಷಕ ವೃಂದವನ್ನು ಕೂಡ ಸನ್ಮಾನಿಸಿ ಗೌರವಿಸಲಾಯಿತು. ಪ್ರೌಢಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ತಾಲ್ಲೂಕು ಅಧ್ಯಕ್ಷ ವಾಸಪ್ಪ ಗೌಡ ಉದ್ಘಾಟಿಸಿ ಮಾತನಾಡಿದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಕಾಶ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ನಗರ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಲತಾ ನಾಗೇಶ, ಉಪಾಧ್ಯಕ್ಷ ಕರುಣಾಕರ ಶೆಟ್ಟಿ, ಸದಸ್ಯ ಆದಿರಾಜ, ಪ್ರಮುಖರಾದ ವಿನಾಯಕ ನಾವುಡ, ತೋಟಪ್ಪ ಗೌಡ, ಗೋಪಾಲ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಕುಮಾರ್ ಭಟ್, ಮುಖ್ಯ ಶಿಕ್ಷಕ ಹನುಮಂತಪ್ಪ, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಶಿಕ್ಷಕರು ಹಾಜರಿದ್ದರು. ಮುಖ್ಯ ಶಿಕ್ಷಕ ಹನುಮಂತಪ್ಪ ಸ್ವಾಗತಿಸಿದರು. ರತ್ನಾ ಜಗದೀಶ ಕಾರ್ಯಕ್ರಮ ನಿರೂಪಿಸಿದರು. ನಟರಾಜ ವಂದಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು
ಸ್ಥಳಾವಕಾಶ ಇಲ್ಲದೇ ನನೆಗುದಿಗೆ ಬಿದ್ದ ಸಬ್‌ ಸ್ಟೇಷನ್‌  ಕೇಂದ್ರ

ತೀರ್ಥಹಳ್ಳಿ
ಸ್ಥಳಾವಕಾಶ ಇಲ್ಲದೇ ನನೆಗುದಿಗೆ ಬಿದ್ದ ಸಬ್‌ ಸ್ಟೇಷನ್‌ ಕೇಂದ್ರ

19 Mar, 2018
ಬೋರ್‌ ಬಂಡೆಗಳ ಒಡಲಲ್ಲಿ ಕೇಳದ ಭೋರ್ಗರೆತ

ಕಾರ್ಗಲ್
ಬೋರ್‌ ಬಂಡೆಗಳ ಒಡಲಲ್ಲಿ ಕೇಳದ ಭೋರ್ಗರೆತ

17 Mar, 2018
ಕನಸಿನ ಕಾರ್ಖಾನೆ ಉಳಿಸಲು ಎಲ್ಲರ ಸಂಕಲ್ಪ ಅಗತ್ಯ

ಭದ್ರಾವತಿ
ಕನಸಿನ ಕಾರ್ಖಾನೆ ಉಳಿಸಲು ಎಲ್ಲರ ಸಂಕಲ್ಪ ಅಗತ್ಯ

17 Mar, 2018
ಪ್ರಕರಣ ದಾಖಲು ಹೋರಾಟ ಹತ್ತಿಕ್ಕುವ ತಂತ್ರ: ದೇವೇಂದ್ರಪ್ಪ

ಶಿವಮೊಗ್ಗ
ಪ್ರಕರಣ ದಾಖಲು ಹೋರಾಟ ಹತ್ತಿಕ್ಕುವ ತಂತ್ರ: ದೇವೇಂದ್ರಪ್ಪ

17 Mar, 2018
‘ಬದಲಾವಣೆಯ ಅಲೆಯೊಂದಿಗೆ ನಿಮ್ಮ ನಗರಕ್ಕೆ– ಕಮಲ ಜಾತ್ರೆ’

ಆನವಟ್ಟಿ
‘ಬದಲಾವಣೆಯ ಅಲೆಯೊಂದಿಗೆ ನಿಮ್ಮ ನಗರಕ್ಕೆ– ಕಮಲ ಜಾತ್ರೆ’

17 Mar, 2018