ಉಡುಪಿ

ಅದ್ಧೂರಿ ಸ್ವಾಗತಕ್ಕೆ ಭರದ ಸಿದ್ಧತೆ

ನಗರ ಪ್ರವೇಶಿಸುವ ಸ್ವಾಮೀಜಿ ಅವರಿಗೆ ಅದ್ಧೂರಿ ಸ್ವಾಗತ ಕೋರಲು ಹಾಗೂ ಭವ್ಯ ಮೆರವಣಿಗೆ ಮೂಲಕ ಅವರನ್ನು ಕರೆತರಲು ಸ್ವಾಗತ ಸಮಿತಿ ತೀರ್ಮಾನಿಸಿದೆ

ಉಡುಪಿ: ಭಾವಿ ಪರ್ಯಾಯ ಪೀಠಾಧಿಪತಿ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಅವರ ಪುರಪ್ರವೇಶ ಕಾರ್ಯಕ್ರಮಕ್ಕೆ ಭರದ ಸಿದ್ಧತೆ ನಡೆದಿದೆ. ಪರ್ಯಾಯ ಪೂರ್ವಭಾವಿ ತೀರ್ಥ ಕ್ಷೇತ್ರಗಳ ಯಾತ್ರೆಯಲ್ಲಿ ನಿರತರಾಗಿರುವ ಸ್ವಾಮೀಜಿ ಅವರು ಇದೇ 3ರಂದು ಪುರಪ್ರವೇಶ ಮಾಡುವರು. ಆ ನಂತರ ಪರ್ಯಾಯ ಪೀಠಾರೋಹಣದ ಸಿದ್ಧತೆಗಳು ಇನ್ನಷ್ಟು ವೇಗ ಪಡೆದುಕೊಳ್ಳಲಿವೆ.

ನಗರ ಪ್ರವೇಶಿಸುವ ಸ್ವಾಮೀಜಿ ಅವರಿಗೆ ಅದ್ಧೂರಿ ಸ್ವಾಗತ ಕೋರಲು ಹಾಗೂ ಭವ್ಯ ಮೆರವಣಿಗೆ ಮೂಲಕ ಅವರನ್ನು ಕರೆತರಲು ಸ್ವಾಗತ ಸಮಿತಿ ತೀರ್ಮಾನಿಸಿದೆ. ಹಲವು ಸಭೆಗಳನ್ನು ನಡೆಸಿ ಚರ್ಚಿಸಿ ಕೈಗೊಂಡಿರುವ ತೀರ್ಮಾನಗಳನ್ನು ಅನುಷ್ಠಾನಗೊಳಿಸಲು ಶ್ರಮಿಸುತ್ತಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ದೊಡ್ಡ ಸ್ವಾಗತ ಕಮಾನುಗಳನ್ನು ನಿರ್ಮಾಣ ಮಾಡಲಾಗುತ್ತಿದೆ.

3ರಂದು ಮಧ್ಯಾಹ್ನ 3.30ಕ್ಕೆ ಸರಿಯಾಗಿ ಸ್ವಾಮೀಜಿ ಅವರು ಉಡುಪಿಗೆ ಆಗಮಿಸುವರು. ನಗರದ ಜೋಡುಗಟ್ಟೆಯಲ್ಲಿ ಅವರಿಗೆ ಸ್ವಾಗತ ಕೋರಲಾಗುತ್ತದೆ. ಅಲ್ಲಿಂದ ಮಠದವರೆಗೆ ಅವರನ್ನು ಮೆರವಣಿಗೆ ಮೂಲಕ ಕರೆತರಲಾಗುತ್ತದೆ. ಸುಮಾರು 75 ಕಲಾ ತಂಡಗಳು ಈ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ಅವರು ಇದರ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಸುಮಾರು 2 ಗಂಟೆಗಳ ಕಾಲ ಮೆರವಣಿಗೆ ನಡೆಯಲಿದ್ದು, ಸಾವಿರಾರು ಮಂದಿ ವೀಕ್ಷಿಸುವ ನಿರೀಕ್ಷೆ ಇದೆ.

ಭಾವಿ ಪರ್ಯಾಯ ಮಠಾಧೀಶರಿಗೆ ಪೌರ ಸನ್ಮಾನ ಮಾಡುವುದು ಈವರೆಗೆ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ಅದರಂತೆ ರಥಬೀದಿಯ ವೇದಿಕೆಯಲ್ಲಿ ನಗರದ ನಾಗರಿಕರ ಪರವಾಗಿ ಹಾಗೂ ಸ್ಥಳೀಯ ಆಡಳಿತ ಪರವಾಗಿ ಸನ್ಮಾನ ಮಾಡಲಾಗುತ್ತದೆ. ಹಾಲಿ ಪರ್ಯಾಯ ಪೀಠಾಧೀಶ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹಾಗೂ ಕಿರಿಯ ವಿಶ್ವಪ್ರಸನ್ನ ಸ್ವಾಮೀಜಿ ಉಪಸ್ಥಿತರಿರುವರು.

Comments
ಈ ವಿಭಾಗದಿಂದ ಇನ್ನಷ್ಟು
ಪುಷ್ಪ ಹೂರಣ: ಚಂದಗೊಂಡ ಸಭಾಂಗಣ

ಉಡುಪಿ
ಪುಷ್ಪ ಹೂರಣ: ಚಂದಗೊಂಡ ಸಭಾಂಗಣ

18 Jan, 2018
ಪಲಿಮಾರು ಮಠದಲ್ಲಿದೆ  800 ವರ್ಷಗಳ ಹಿಂದಿನ ಗ್ರಂಥ

ಉಡುಪಿ
ಪಲಿಮಾರು ಮಠದಲ್ಲಿದೆ 800 ವರ್ಷಗಳ ಹಿಂದಿನ ಗ್ರಂಥ

18 Jan, 2018
ಧರ್ಮ ಸಂಸತ್‌ ನಡೆಸಿ ದೇಶವನ್ನೇ ಸೆಳೆದ ಸಂತ

ಉಡುಪಿ
ಧರ್ಮ ಸಂಸತ್‌ ನಡೆಸಿ ದೇಶವನ್ನೇ ಸೆಳೆದ ಸಂತ

18 Jan, 2018
ಎಲ್ಲೆಲ್ಲೂ ಸಂಭ್ರಮದ ವಾತಾವರಣ

ಉಡುಪಿ
ಎಲ್ಲೆಲ್ಲೂ ಸಂಭ್ರಮದ ವಾತಾವರಣ

17 Jan, 2018

ಉಡುಪಿ
ಮನಸ್ಸಿನ ವಿಕಾಸಕ್ಕೆ ಸಾಹಿತ್ಯ ಅಗತ್ಯ: ವೈದೇಹಿ

‘ಸಮಗ್ರ ವಿಶ್ವ ಸಾಹಿತ್ಯದ ಪರಿಚಯವೇ ‘ಕೃತಿ ಜಗತ್ತು’ ಪುಸ್ತಕದಲ್ಲಿದೆ. ದುರಂತ, ದುಃಖ, ಸಂತೋಷವೆಲ್ಲವನ್ನೂ ವಿಶ್ಲೇಷಿಸಿ, ವಿಮರ್ಶಿಸಿ, ಅರ್ಥೈಸಿರುವ ಒಟ್ಟು 26 ಲೇಖನಗಳನ್ನು ಒಳಗೊಂಡಿದೆ.

17 Jan, 2018