ಯಾದಗಿರಿ

‘ಕಲೆಗೆ ವಿಶ್ವಕರ್ಮರ ಕೊಡುಗೆ ಅಪಾರ’

‘ಭಾರತದ ಶ್ರೇಷ್ಠ ಕಲೆಗಳಿಗೆ ವಿಶ್ವಕರ್ಮರ ಕೊಡುಗೆ ಅತ್ಯಂತ ಪ್ರಮುಖವಾಗಿದೆ. ಆದರೆ, ಸಮುದಾಯದ ಜನರಿಗೆ ಇಲ್ಲಿಯವರೆಗೆ ಮೂಲಸೌಕರ್ಯ ಸಿಗದೆ ಬಡತನದಲ್ಲಿ ಬೆಂದು ಹೋಗುತ್ತಿದ್ದರೂ, ಯಾವೊಂದು ಸರ್ಕಾರವೂ ಅವರ ಅಭಿವೃದ್ಧಿಗೆ ಸ್ಪಂದಿಸುತ್ತಿಲ್ಲ’

ಯಾದಗಿರಿ: ‘ವಿಶ್ವಕರ್ಮ ಸಮುದಾಯವನ್ನು ವಿಶ್ವಮಟ್ಟದಲ್ಲಿ ಪರಿಚಯಿಸಿದ ಕೀರ್ತಿ ಅಮರಶಿಲ್ಪಿ ಜಕಣಾಚಾರಿ ಅವರಿಗೆ ಸಲ್ಲುತ್ತದೆ’ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಶಿವಣ್ಣ ಹೂನೂರ ಹೇಳಿದರು. ಇಲ್ಲಿನ ತಾಲ್ಲೂಕು ಘಟಕದ ಕಚೇರಿಯಲ್ಲಿ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯಲ್ಲಿ ಮಾತನಾಡಿದರು.

‘ಭಾರತದ ಶ್ರೇಷ್ಠ ಕಲೆಗಳಿಗೆ ವಿಶ್ವಕರ್ಮರ ಕೊಡುಗೆ ಅತ್ಯಂತ ಪ್ರಮುಖವಾಗಿದೆ. ಆದರೆ, ಸಮುದಾಯದ ಜನರಿಗೆ ಇಲ್ಲಿಯವರೆಗೆ ಮೂಲಸೌಕರ್ಯ ಸಿಗದೆ ಬಡತನದಲ್ಲಿ ಬೆಂದು ಹೋಗುತ್ತಿದ್ದರೂ, ಯಾವೊಂದು ಸರ್ಕಾರವೂ ಅವರ ಅಭಿವೃದ್ಧಿಗೆ ಸ್ಪಂದಿಸುತ್ತಿಲ್ಲ’ ಎಂದು ಆರೋಪಿಸಿದರು.

‘ವಿಶ್ವಕರ್ಮ ಸಮುದಾಯದ ಬಾಂಧವರಿಗೆ ಮೂಲಸೌಕರ್ಯ ಕಲ್ಪಿಸಲು ಹೋರಾಟ ಮಾಡಬೇಕಾದ ಅಗತ್ಯವಿದೆ. ಸಮಾಜದ ಪ್ರತಿಯೊಬ್ಬರೂ ಈ ನಿಟ್ಟಿನಲ್ಲಿ ಹೋರಾಟಕ್ಕೆ ರೂಪುರೇಷೆ ಸಿದ್ಧಪಡಿಸಬೇಕಿದೆ’ ಎಂದು ಅವರು ಸಲಹೆ ನೀಡಿದರು.

ಮನೋಹರ ಬಿಳ್ಹಾರ, ಬನ್ನಪ್ಪ ಕಾಳಬೆಳಗುಂದಿ, ರಮೇಶ ಹತ್ತಿಕುಣಿ, ರಾಜಶೇಖರ ಕಾರ್ಪೆಂಟರ್, ಅಯ್ಯಪ್ಪ ಗಾಜರಕೋಟ್, ಜಗದೀಶ ಗಾಜರಕೋಟ್, ಮೋನೇಶ ಎನ್. ಮಾಮನಿ, ವಿಶ್ವನಾಥ ಶಹಾಬಾದ್, ಮಲ್ಲಿಕಾರ್ಜುನ ಕಂಬಾರ, ಸಕ್ರೆಪ್ಪ ಶಿಕ್ಷಕರು, ಶಿವಾನಂದ ಬಡಿಗೇರ್, ಬಸ್ಸಣ್ಣ ರಬೋಗಿ, ಸೂಗಪ್ಪ ಹೊಸಪೇಟೆ, ಸಂಗಣ್ಣ ಕಂಬಾರ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಬರಿದಾದ ಜಲಾಶಯಗಳು; ಬತ್ತಿದ ಕೆರೆಗಳು

ಯಾದಗಿರಿ
ಬರಿದಾದ ಜಲಾಶಯಗಳು; ಬತ್ತಿದ ಕೆರೆಗಳು

26 Apr, 2018

ಯಾದಗಿರಿ
47 ನಾಮಪತ್ರಗಳು ಕ್ರಮಬದ್ಧ, 5 ತಿರಸ್ಕೃತ

ಯಾದಗಿರಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಸಲ್ಲಿಕೆಯಾಗಿದ್ದ ಒಟ್ಟು 93 ನಾಮಪತ್ರಗಳ ಪೈಕಿ 47 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿದ್ದು, 5 ತಿರಸ್ಕೃತವಾಗಿವೆ ಎಂದು ಜಿಲ್ಲಾ...

26 Apr, 2018
ರೈತರ ಪಂಪ್‌ಸೆಟ್‌ಗಳಿಗೆ 12ಗಂಟೆ ಉಚಿತ ವಿದ್ಯುತ್

ಯಾದಗಿರಿ
ರೈತರ ಪಂಪ್‌ಸೆಟ್‌ಗಳಿಗೆ 12ಗಂಟೆ ಉಚಿತ ವಿದ್ಯುತ್

25 Apr, 2018

ಸುರಪುರ
‘ಕ್ಷೇತ್ರದ ಸೇವೆ ಮಾಡಲು ಬೆಂಬಲಿಸಿ’

ಸುರಪುರ: ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನರಸಿಂಹನಾಯಕ (ರಾಜೂಗೌಡ) ಅವರು ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ತೆರಳಿ ಚುನಾವಣಾಧಿಕಾರಿ ಪ್ರವೀಣ ಪ್ರಿಯಾ ಡೆವಿಡ್ ಅವರಿಗೆ ಮಂಗಳವಾರ...

25 Apr, 2018
ಮಕ್ಕಳಲ್ಲಿ ಕುಸಿಯುತ್ತಿರುವ ಪುಸ್ತಕ ಪ್ರೀತಿ

ಯಾದಗಿರಿ
ಮಕ್ಕಳಲ್ಲಿ ಕುಸಿಯುತ್ತಿರುವ ಪುಸ್ತಕ ಪ್ರೀತಿ

25 Apr, 2018