ಆಳಂದ

ಬೆಳಮಗಿ: ಬುದ್ಧ, ಬಸವ, ಅಂಬೇಡ್ಕರ್ ಭಾವಚಿತ್ರದ ಫ್ಲೆಕ್ಸ್‌ಗೆ ಅವಮಾನ

ಗ್ರಾಮದ ಏಳು ಜನ ಆರೋಪಿಗಳು ಮದ್ಯ ಕುಡಿದ ಅಮಲಿನಲ್ಲಿ ಈ ಕೃತ್ಯ ಎಸೆಗಿದ್ದಾರೆ ಎಂದು ತಿಳಿದು ಬಂದಿದೆ. ಇದರಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಆಳಂದ: ತಾಲ್ಲೂಕಿನ ಬೆಳಮಗಿಯಲ್ಲಿ ಭಾನುವಾರ ರಾತ್ರಿ ಹೊಸ ವರ್ಷ ಆಚರಣೆ ಸಂದರ್ಭದಲ್ಲಿ ಕಿಡಿಗೇಡಿ ಯುವಕರ ಗುಂಪು ಗ್ರಾಮದ ಸಮುದಾಯ ಭವನದಲ್ಲಿದ್ದ ಬುದ್ಧ, ಬಸವ ಮತ್ತು ಡಾ.ಅಂಬೇಡ್ಕರ್ ಭಾವಚಿತ್ರವಿರುವ ಫ್ಲೆಕ್ಸ್‌ಗೆ ಸೆಗಣಿ ಬಳಿದು ಅವಮಾನ ಮಾಡಿದೆ.

ಗ್ರಾಮದ ಏಳು ಜನ ಆರೋಪಿಗಳು ಮದ್ಯ ಕುಡಿದ ಅಮಲಿನಲ್ಲಿ ಈ ಕೃತ್ಯ ಎಸೆಗಿದ್ದಾರೆ ಎಂದು ತಿಳಿದು ಬಂದಿದೆ. ಇದರಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸಿಪಿಐ ಎಚ್‌.ಬಿ.ಸಣ್ಣಮನಿ, ಪಿಎಸ್ಐ ಸುರೇಶಬಾಬು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಘಟನೆ ಖಂಡಿಸಿ ತಾಲ್ಲೂಕಿನ ದಲಿತಪರ ಸಂಘಟನೆಗಳು ದಿನವಿಡೀ ಗ್ರಾಮದ ಮುಖ್ಯರಸ್ತೆ ಮೇಲೆ ಪ್ರತಿಭಟನೆ ನಡೆಸಿದವು. ‘ಉಳಿದ ಆರೋಪಿಗಳನ್ನು ತಕ್ಷಣ ಬಂಧಿಸಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಅಂಬಾರಾಯ ಬೆಳಮಗಿ, ಅಫ್ಜಲ್ ಅನ್ಸಾರಿ, ಶಿವಪುತ್ರ ನಡಗೇರಿ, ಧರ್ಮಾ ಬಂಗರಗಾ, ರಾಜಕುಮಾರ ಮುದಗಲೆ, ಮಹೇಶ ತಡಕಲ, ಗೋರಖನಾಥ ದೊಡ್ಡಮನಿ, ಸೂರ್ಯಕಾಂತ ಜಿಡಗಾ, ಹಣಮಂತ ಬೆಳಮಗಿ, ಚಿರಂಜೀವಿ ಬೆಳಮಗಿ, ಮಿಥುನ್‌ ಝಳಕಿ, ಅಶೋಕ ಸುತಾರ, ಫಾರೂಖ್ ಮಟಕಿ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು

ಕಲಬುರ್ಗಿ
ಬಿಸಿಲಿಗೆ ಬತ್ತದ ಉತ್ಸಾಹ

ನೆತ್ತಿ ಸುಡುವ ಬಿಸಿಲನ್ನೂ ಲೆಕ್ಕಿಸದೆ ಬಿಜೆಪಿ, ಜೆಡಿಎಸ್ ಹಾಗೂ ಬಿಎಸ್‌ಪಿ ಅಭ್ಯರ್ಥಿಗಳು ಅಪಾರ ಬೆಂಬಲಿಗರು, ಕಾರ್ಯಕರ್ತರ ಜಯ ಘೋಷಗಳ ಮಧ್ಯೆ ಅಂತಿಮ ದಿನವಾದ ಮಂಗಳವಾರ...

25 Apr, 2018

ಕಲಬುರ್ಗಿ
ಇನ್ನೇನಿದ್ದರೂ ‘ಹಿಂದೆ ಸರಿಸುವ’ ಆಟ

ಕಲಬುರ್ಗಿಯ ಒಂಬತ್ತು ವಿಧಾನಸಭೆ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆ ಅವಧಿ ಕೊನೆಗೊಂಡಿದೆ. ಸಲ್ಲಿಕೆಯಾಗಿರುವ ನಾಮಪತ್ರಗಳ ಪರಿಶೀಲನೆ ಏ.25ರಂದು ನಡೆಯಲಿದ್ದು, ನಾಮಪತ್ರಗಳನ್ನು ವಾಪಸ್‌ ಪಡೆಯಲು ಏ.27 ಕೊನೆಯ...

25 Apr, 2018
ಸುಪಾರಿಗೆ ನಾನು ಹೆದರಲ್ಲ: ಖರ್ಗೆ

ಕಲ್ಬುರ್ಗಿ
ಸುಪಾರಿಗೆ ನಾನು ಹೆದರಲ್ಲ: ಖರ್ಗೆ

25 Apr, 2018
ಕೀರ್ತಿ ನಗರದಲ್ಲಿ ನೀರಿನ ಕಿರಿಕಿರಿ

ಕಲಬುರ್ಗಿ
ಕೀರ್ತಿ ನಗರದಲ್ಲಿ ನೀರಿನ ಕಿರಿಕಿರಿ

25 Apr, 2018
ಎತ್ತಿನ ಬಂಡಿಯಲ್ಲಿ ಬಂದು ಬಿ.ಆರ್.ಪಾಟೀಲ ನಾಮಪತ್ರ ಸಲ್ಲಿಕೆ

ಆಳಂದ
ಎತ್ತಿನ ಬಂಡಿಯಲ್ಲಿ ಬಂದು ಬಿ.ಆರ್.ಪಾಟೀಲ ನಾಮಪತ್ರ ಸಲ್ಲಿಕೆ

25 Apr, 2018