ಕಲಬುರ್ಗಿ

ಶರಣ ಸಂಸ್ಕೃತಿ ತೆರೆದಿಟ್ಟ ಚಿಣ್ಣರು

ವಚನ ಗಾಯನ, ವಚನ ನೃತ್ಯ, ರೂಪಕ, ಜಾನಪದ ನೃತ್ಯ, ಕೊರವಂಜಿ ವೇಷ, ಕೋಲಾಟ, ಭಜನೆ, ಭಾವಗೀತೆ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಇಲ್ಲಿನ ಬಸವ ಸಮಿತಿಯು ಭಾನುವಾರ ಸಾಕ್ಷಿಯಾಯಿತು.

ಕಲಬುರ್ಗಿ: ವಚನ ಗಾಯನ, ವಚನ ನೃತ್ಯ, ರೂಪಕ, ಜಾನಪದ ನೃತ್ಯ, ಕೊರವಂಜಿ ವೇಷ, ಕೋಲಾಟ, ಭಜನೆ, ಭಾವಗೀತೆ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಇಲ್ಲಿನ ಬಸವ ಸಮಿತಿಯು ಭಾನುವಾರ ಸಾಕ್ಷಿಯಾಯಿತು.

ದಿ. ಅಣ್ಣಾರಾವ್ ಶರಣಪ್ಪ ಪಾಟೀಲ ಸರಡಗಿ ಸ್ಮರಣಾರ್ಥ ನಡೆದ 534ನೇ ದತ್ತಿ ಕಾರ್ಯಕ್ರಮದಲ್ಲಿ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು. ರೂಪಕ ಮತ್ತು ವಚನ ಗಾಯನ ಮೂಲಕ ಬಾಲ ಕಲಾವಿದರು ಯಕ್ಷ ಲೋಕವನ್ನೇ ಸೃಷ್ಟಿಸಿದರು. ತಮ್ಮ ನೃತ್ಯ, ಅಭಿನಯ ಮೂಲಕ ನೆರೆದಿದ್ದ ಜನರನ್ನು ಮಂತ್ರ ಮುಗ್ಧರನ್ನಾಗಿಸಿದರು.

ಗಿರಿಜಾದೇವಿ ನೃತ್ಯ ಕಲಾಮಂದಿರದ ಬಾಲ ಕಲಾವಿದೆಯರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ‘ಕಲ್ಯಾಣವೆಂಬ ಪ್ರಣತೆಯಲ್ಲಿ’ ವಚನಕ್ಕೆ ನೃತ್ಯ ಪ್ರದರ್ಶಿಸಿದರು. ಅಮರ ಕಲಾ ವೃಂದದವರು ಪ್ರದರ್ಶಿಸಿದ ‘ಮುದನೂರು ದಾಸಿಮಯ್ಯ’ ರೂಪಕ ಅತ್ಯಾಕರ್ಷವಾಗಿತ್ತು. ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆಯ ವಿದ್ಯಾರ್ಥಿಗಳು ಭಾವಗೀತೆ, ಕೊರವಂಜಿ ವೇಷ, ಭಜನೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಕಲಬುರ್ಗಿ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ. ವೀರಣ್ಣ ದಂಡೆ ಅವರನ್ನು ಬಸವ ಸಮಿತಿ ವತಿಯಿಂದ ಗೌರವಿಸಲಾಯಿತು. ಕೇಂದ್ರ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಆಡಳಿತಾಧಿಕಾರಿ ಎಸ್.ಐ. ಬಾವಿಕಟ್ಟಿ, ಬಸವ ಸಮಿತಿ ಅಧ್ಯಕ್ಷೆ ವಿಲಾಸವತಿ ಖೂಬಾ, ಉಪಾಧ್ಯಕ್ಷೆ ಡಾ. ಜಯಶ್ರೀ ದಂಡೆ, ದತ್ತಿ ದಾಸೋಹಿ ನಾಗೇಂದ್ರಪ್ಪ ಅಣ್ಣಾರಾವ ಪಾಟೀಲ ಸರಡಗಿ ಇದ್ದರು. ಎಚ್.ಕೆ.ಉದ್ದಂಡಯ್ಯ ಕಾರ್ಯಕ್ರಮ ನಿರ್ವಹಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು
ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ: ಕುಮಾರಸ್ವಾಮಿ ವಿಶ್ವಾಸ

ಚಿಂಚೋಳಿ
ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ: ಕುಮಾರಸ್ವಾಮಿ ವಿಶ್ವಾಸ

19 Jan, 2018

ಅಫಜಲಪುರ
5 ಸಾವಿರ ಶೌಚಾಲಯ ಯೋಗ್ಯವಲ್ಲ: ಕರವೇ ಆರೋಪ

ಸರ್ಕಾರ ಸ್ವಚ್ಛ ಭಾರತ ಮಿಷನ್‌ ಯೋಜನೆ ಅಡಿಯಲ್ಲಿ ಕೂಸು ಮತ್ತು ಸಿರಿ ಎರಡು ಶೀರ್ಷಿಕೆ ಯೋಜನೆ ಅಡಿಯಲ್ಲಿ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ 2016 –...

19 Jan, 2018

ಸೇಡಂ
ಸೇಡಂ: ಬೇಡಿಕೆ ಈಡೇರಿಕೆಗೆ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಪಟ್ಟಣದ ಪ್ರವಾಸಿ ಮಂದಿರದಿಂದ ಉಪವಿಭಾಗಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ನ್ಯಾಯಕ್ಕಾಗಿ ಘೋಷಣೆ ಕೂಗಿದರು

19 Jan, 2018
ಮಾರ್ಚ್‌ ಅಂತ್ಯದೊಳಗೆ ಅನುದಾನ ಬಳಕೆ

ಕಲಬುರ್ಗಿ
ಮಾರ್ಚ್‌ ಅಂತ್ಯದೊಳಗೆ ಅನುದಾನ ಬಳಕೆ

18 Jan, 2018
ದೌರ್ಜನ್ಯ ಖಂಡಿಸಿ ಚಿಂಚೋಳಿ ಬಂದ್‌ ಯಶಸ್ವಿ

ಚಿಂಚೋಳಿ
ದೌರ್ಜನ್ಯ ಖಂಡಿಸಿ ಚಿಂಚೋಳಿ ಬಂದ್‌ ಯಶಸ್ವಿ

18 Jan, 2018