ಮುಳಬಾಗಿಲು

ಸರ್ಕಾರಿ ಸೌಲಭ್ಯ ಫಲಾನುಭವಿಗಳಿಗೆ ತಲುಪಿಸಿ

‘ಸರ್ಕಾರಿ ಸೌಲಭ್ಯಗಳು ನೇರವಾಗಿ ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸಲು ಅಧಿಕಾರಿಗಳು ಹೆಚ್ಚಿನ ಆದ್ಯತೆ ನೀಡಬೇಕು’

ಮುಳಬಾಗಿಲು: ‘ಸರ್ಕಾರಿ ಸೌಲಭ್ಯಗಳು ನೇರವಾಗಿ ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸಲು ಅಧಿಕಾರಿಗಳು ಹೆಚ್ಚಿನ ಆದ್ಯತೆ ನೀಡಬೇಕು’ ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ಹೇಳಿದರು.

ನಗರದ ಅಮರಜ್ಯೋತಿ ಶಾಲಾ ಆವರಣದಲ್ಲಿ ದೇವರಾಜು ಅರಸು ಅಭಿವೃದ್ಧಿ ನಿಗಮದಿಂದ ಸೋಮವಾರ ಹಮ್ಮಿಕೊಂಡಿದ್ದ ಕೊಳವಿ ಬಾವಿ ಸಲಕರಣೆಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತಾಡಿದರು.

ದೇವರಾಜು ಅರಸು ಅಭಿವೃದ್ಧಿ ನಿಗಮದಿಂದ 35 ಮಂದಿ ಫಲಾನುಭವಿಗಳಿಗೆ ಕೊಳವೆ ಬಾವಿ ಸಲಕರಣೆ ವಿತರಿಸಲಾಗಿದ್ದು, ಎಲ್ಲ ಫಲಾನುಭವಿಗಳು ಸದುಪಯೋಗ ಪಡಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಇಂತಹ ಅನುದಾನಗಳನ್ನು ದುರುಪಯೋಗ ಮಾಡಿಕೊಳ್ಳಲು ಯಾರೊಬ್ಬರೂ ಅವಕಾಶ ನೀಡಬಾರದು ಎಂದು ತಿಳಿಸಿದರು.

‘ರೈತರು ಲಾಭದಾಯಕ ಕೃಷಿ ಚಟುವಟಿಕೆಗಳನ್ನು ಮಾಡುವ ಮೂಲಕ ಆರ್ಥಿಕವಾಗಿ ಸದೃಢರಾಗಲು ಮುಂದಾಗಬೇಕು’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಸಿ.ನೀಲಕಂಠೇಗೌಡ ಸಲಹೆ ನೀಡಿದರು.

ಗ್ರಾಮೀಣ ಭಾಗದಲ್ಲಿ ರೈತರು ಹಳೆಯ ಕಾಲದ ಕೃಷಿ ಪರಿಕರಗಳನ್ನು ಬಳಸಿಕೊಂಡು ವ್ಯವಸಾಯ ಕ್ಷೇತ್ರದಲ್ಲಿ ಮತ್ತಷ್ಟು ಹಿಂದುಳಿಯುತ್ತಿದ್ದಾರೆ. ರೈತರ ಕೃಷಿ ಹಾಗೂ ವ್ಯವಸಾಯ ಅಭಿವೃದ್ಧಿಗೊಳಿಸುವಲ್ಲಿ ಇವತ್ತಿನ ಸರ್ಕಾರ ರೈತಪರ ಯೋಜನೆ ಜಾರಿಗೊಳಿಸಿದೆ. ಆದ್ದರಿಂದ ರೈತರು ಎಲ್ಲ ಯೋಜನೆಗಳನ್ನು ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದು ಮನವಿ ಮಾಡಿದರು.

ದೇವರಾಜು ಅರಸು ಅಭಿವೃದ್ಧಿ ನಿಗಮ ಇಲಾಖೆ ಅಧಿಕಾರಿ ಗಣೇಶ್, ಕೋಚಿಮುಲ್ ನಿರ್ದೇಶಕ ಆರ್.ಆರ್.ರಾಜೇಂದ್ರಗೌಡ, ಎಪಿಎಂಸಿ ಅಧ್ಯಕ್ಷ ರಘುಪತಿ, ನಗರಸಭೆ ಸದಸ್ಯ ಜಗನ್‍ ಮೋಹನ್‍ರೆಡ್ಡಿ, ಅಂಬ್ಲಿಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನರೆಡ್ಡಿ ಹಾಜರಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು

ಮಾಲೂರು
24 ನಾಮಪತ್ರಗಳು ಊರ್ಜಿತ

ಮಾಲೂರು ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಬುಧವಾರ ನಡೆದ ನಾಮಪತ್ರ ಪರಿಶೀಲನೆ ಪ್ರಕ್ರಿಯೆಯಲ್ಲಿ ಪ್ರಜಾ ಪರಿವರ್ತನ ಪಕ್ಷದ ಟಿ.ರಾಜಶೇಖರ್ ನಾಮಪತ್ರ ಅಸಿಂಧುಗೊಂಡಿದ್ದು, 16 ಮಂದಿ ಉಮೇದುವಾರಿಕೆಯಿಂದ...

26 Apr, 2018

ಕೋಲಾರ
ವರ್ತೂರು ಪ್ರಕಾಶ್‌ಗೆ ನಾಚಿಕೆಯಾಗಲಿ

ಕೋಲಾರ ‘ಕ್ಷೇತ್ರದ ಹಾಲಿ ಶಾಸಕ ವರ್ತೂರು ಪ್ರಕಾಶ್‌ ಹೇಳಿರುವಂತೆ ನಮ್ಮ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಪಕ್ಷ ಎರಡೂ ಒಂದೇ ಆಗಿದ್ದರೆ ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಯನ್ನು...

26 Apr, 2018
ಬಿರುಗಾಳಿಗೆ ಮುರಿದ ಮರ, ಉದುರಿದ ಮಾವು

ಶ್ರೀನಿವಾಸಪುರ
ಬಿರುಗಾಳಿಗೆ ಮುರಿದ ಮರ, ಉದುರಿದ ಮಾವು

26 Apr, 2018
‘ಕೈ’ ಪಾಳಯಕ್ಕೆ ಹೈಕೋರ್ಟ್‌ ಆದೇಶದ ಮರ್ಮಾಘಾತ

ಕೋಲಾರ
‘ಕೈ’ ಪಾಳಯಕ್ಕೆ ಹೈಕೋರ್ಟ್‌ ಆದೇಶದ ಮರ್ಮಾಘಾತ

26 Apr, 2018

ಶ್ರೀನಿವಾಸಪುರ
ಕಾಂಗ್ರೆಸ್‌ಗೆ ದಲಿತರ ಬೆಂಬಲ ಹೇಳಿಕೆ ಸರಿಯಲ್ಲ

ಈಚೆಗೆ ಶ್ರೀನಿವಾಸಪುರದಲ್ಲಿ ಏರ್ಪಡಿಸಿದ್ದ ದಲಿತಪರ ಸಂಘಟನೆಗಳ ಒಕ್ಕೂಟದ ಹಾಗೂ ದಲಿತ ಸಮುದಾಯದ ಮುಖಂಡರ ಸಭೆಯಲ್ಲಿ ಹಿರಿಯ ದಲಿತ ಮುಖಂಡ ಸಿ.ಮುನಿಯಪ್ಪ ಸರ್ವಾನುಮತದಿಂದ ಕಾಂಗ್ರೆಸ್‌ಗೆ ಏಕಪಕ್ಷೀಯವಾಗಿ...

25 Apr, 2018