ಉಗ್ರರಿಗೆ ಪಾಕಿಸ್ತಾನ ಸ್ವರ್ಗ

ಪಾಕಿಸ್ತಾನಕ್ಕೆ ₹1624 ಕೋಟಿ ಸೇನಾ ನೆರವಿಗೆ ಅಮೆರಿಕ ತಡೆ; ಭದ್ರತಾ ಸಮಿತಿ ಸಭೆ ಕರೆದ ಪಾಕಿಸ್ತಾನ ಪ್ರಧಾನಿ

ಪಾಕಿಸ್ತಾನಕ್ಕೆ ನೀಡುತ್ತಿದ್ದ ₹1624 ಕೋಟಿ(255 ಮಿಲಿಯನ್‌ ಡಾಲರ್‌) ಸೇನಾ ನೆರವಿಗೆ ಅಮೆರಿಕ ತಾತ್ಕಾಲಿಕ ತಡೆ ನೀಡಿದೆ.

ಪಾಕಿಸ್ತಾನಕ್ಕೆ ₹1624 ಕೋಟಿ ಸೇನಾ ನೆರವಿಗೆ ಅಮೆರಿಕ ತಡೆ; ಭದ್ರತಾ ಸಮಿತಿ ಸಭೆ ಕರೆದ ಪಾಕಿಸ್ತಾನ ಪ್ರಧಾನಿ

ವಾಷಿಂಗ್ಟನ್‌: ಪಾಕಿಸ್ತಾನಕ್ಕೆ ನೀಡುತ್ತಿದ್ದ ₹1624 ಕೋಟಿ(255 ಮಿಲಿಯನ್‌ ಡಾಲರ್‌) ಸೇನಾ ನೆರವಿಗೆ ಅಮೆರಿಕ ತಾತ್ಕಾಲಿಕ ತಡೆ ನೀಡಿದೆ.

2016ನೇ ಸಾಲಿನ ವಿದೇಶಿ ಸೇನಾ ನೆರವಿನ ಅಡಿ ಪಾಕಿಸ್ತಾನಕ್ಕೆ 255 ಮಿಲಿಯನ್ ಡಾಲರ್‌ ಅನುದಾನ ನೀಡುವ ಯೋಚನೆ ಅಮೆರಿಕಕ್ಕೆ ಇಲ್ಲ ಎಂದು ಶ್ವೇತ ಭವನದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

'ಕಳೆದ 15 ವರ್ಷಗಳಿಂದ ಅಮೆರಿಕವು ಮೂರ್ಖತನದಿಂದ ಪಾಕಿಸ್ತಾನಕ್ಕೆ ₹ 2.10 ಲಕ್ಷ ಕೋಟಿ (33ಬಿಲಿಯನ್‌ ಡಾಲರ್‌) ನೆರವು ನೀಡುತ್ತಾ ಬಂದಿದೆ. ಅದಕ್ಕೆ ಪ್ರತಿಯಾಗಿ ಸುಳ್ಳು, ವಂಚನೆ ಬಿಟ್ಟು ಏನನ್ನೂ ನೀಡಿಲ್ಲ. ನಮ್ಮ ನಾಯಕರನ್ನೂ ಮೂರ್ಖರು ಎಂದು ಭಾವಿಸಿದ್ದಾರೆ. ಅಫ್ಗಾನಿಸ್ತಾನದಲ್ಲಿ ನಾವು ಹುಡುಕುತ್ತಿರುವ ಉಗ್ರರಿಗೆ ಪಾಕಿಸ್ತಾನ ಸ್ವರ್ಗವಾಗಿದೆ’ ಎಂದು ಹೊಸ ವರ್ಷದ ದಿನ ಟ್ರಂಪ್‌ ಟ್ವೀಟ್‌ ಮಾಡಿದ್ದರು.

ಅಮೆರಿಕ ಅಧ್ಯಕ್ಷ ಟ್ರಂಪ್‌ ಅವರ ಟ್ವೀಟ್‌ಗೆ ‘ಶೀಘ್ರದಲ್ಲಿಯೇ ಪ್ರತಿಕ್ರಿಯೆ ನೀಡಲಿದ್ದೇವೆ. ಜಗತ್ತಿನ ಮುಂದೆ ಸತ್ಯದ ಅನಾವರಣ ಆಗಲಿದೆ..’ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಖ್ವಾಜಾ ಅಸೀಫ್‌ ಟ್ವೀಟಿಸಿದ್ದರು.

ಭಯೋತ್ಪಾದನೆಯ ವಿರುದ್ಧ ಪಾಕಿಸ್ತಾನದ ನಡೆಯನ್ನು ಟೀಕಿಸಿ ನೆರವು ಕಡಿತಗೊಳಿಸುವುದಾಗಿ ಅಮೆರಿಕ ಎಚ್ಚರಿಕೆ ನೀಡಿದ ಬೆನ್ನಲೇ ಪಾಕಿಸ್ತಾನದ ಪ್ರಧಾನಿ ಶಾಹಿದ್‌ ಖಾಕನ್‌ ಅಬ್ಬಾಸಿ ಬುಧವಾರ ರಾಷ್ಟ್ರೀಯ ಭದ್ರತಾ ಸಮಿತಿ(ಎನ್ಎಸ್‌ಸಿ) ಸಭೆ ಕರೆದಿರುವುದಾಗಿ ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

Comments
ಈ ವಿಭಾಗದಿಂದ ಇನ್ನಷ್ಟು

ನವದೆಹಲಿ
ಭಾರತದ ರಾಯಭಾರ ಕಚೇರಿ ಮೇಲೆ ದಾಳಿ

ಕಾಬೂಲ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ಮೇಲೆ ರಾಕೆಟ್‌ ದಾಳಿ ನಡೆದಿದೆ. ‘ಭಾರತ–ಟಿಬೆಟ್‌ ಗಡಿ ಪೊಲೀಸ್‌’  ಕಟ್ಟಡಕ್ಕೆ ಸ್ವಲ್ಪ  ಹಾನಿಯಾಗಿದೆ.

16 Jan, 2018

ವಿದೇಶ
ದಾಳಿ: 38 ಸಾವು

ಬಾಗ್ದಾದ್‌ನ ಮಾರುಕಟ್ಟೆ ಪ್ರದೇಶದಲ್ಲಿ ನಡೆದ ಎರಡು ಆತ್ಮಾಹುತಿ ಬಾಂಬ್‌ ಸ್ಫೋಟದಲ್ಲಿ 38 ಮಂದಿ ಮೃತಪಟ್ಟಿದ್ದಾರೆ ಎಂದು ಇರಾಕ್‌ನ ಆರೋಗ್ಯ ಮತ್ತು ಪೊಲೀಸ್‌ ಇಲಾಖೆ ಅಧಿಕಾರಿಗಳು...

16 Jan, 2018
‘ರೋಹಿಂಗ್ಯಾ ಮುಸ್ಲಿಮರ ಶಿಬಿರ ಮುಂದಿನ ವಾರ ಸಿದ್ಧ’

ಬ್ಯಾಂಕಾಕ್
‘ರೋಹಿಂಗ್ಯಾ ಮುಸ್ಲಿಮರ ಶಿಬಿರ ಮುಂದಿನ ವಾರ ಸಿದ್ಧ’

16 Jan, 2018

ಲಂಡನ್
ಮಲ್ಯ ಗಡೀಪಾರು ಪ್ರಕರಣ ಮುಂದುವರಿಸಲು ನಿರ್ಧಾರ

ಉದ್ಯಮಿ ವಿಜಯ ಮಲ್ಯ ಗಡೀಪಾರು ಪ್ರಕರಣವನ್ನು ಮುಂದುವರಿಸಲು ಭಾರತ ಸರ್ಕಾರ ಸಿದ್ಧತೆ ನಡೆಸಿದೆ.

16 Jan, 2018

ವಿದೇಶ
‘ಅಣ್ವಸ್ತ್ರ ಯುದ್ಧಕ್ಕೆ ಒಂದೇ ಹೆಜ್ಜೆ’

ಅಣ್ವಸ್ತ್ರ ಯುದ್ಧದ ಬಗ್ಗೆ ನಿಜಕ್ಕೂ ಭೀತಿ ಇದೆ. ವಿಶ್ವವು ಅದರಿಂದ ಒಂದು ಹೆಜ್ಜೆಯಷ್ಟೇ ದೂರ ಇದೆ ಎಂದು ಪೋಪ್ ಫ್ರಾನ್ಸಿಸ್ ಹೇಳಿದ್ದಾರೆ.

16 Jan, 2018