ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

12 ಗಂಟೆಯಲ್ಲಿ 312 ಟನ್ ಕಬ್ಬು ಕಟಾವು !

Last Updated 2 ಜನವರಿ 2018, 7:15 IST
ಅಕ್ಷರ ಗಾತ್ರ

ಅಥಣಿ : ತಾಲ್ಲೂಕಿನ ಸತ್ತಿ ಗ್ರಾಮದ ಆರ್.ಟಿ. ಪಾಟೀಲ ಹಾಗೂ ಬಿ.ಬಿ.ಕೊಡತೆ ಎಂಬ ರೈತರ ಕಬ್ಬಿನ ಗದ್ದೆಯಲ್ಲಿ ಸಮೀರವಾಡಿಯ ಗೋದಾವರಿ ಸಕ್ಕರೆ ಕಾರ್ಖಾನೆಯ ಯಂತ್ರವು ನಿರಂತರ 12 ಗಂಟೆಯಲ್ಲಿ 312 ಟನ್ ಕಬ್ಬು ಕಾಟಾವು ಮಾಡಿ ದಾಖಲೆ ನಿರ್ಮಾಣ ಮಾಡಿದೆ ಎಂದು ಗೋದಾವರಿ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೆಶಕ ಬಿ.ಎಂ. ಬಬಲೇಶ್ವರ ತಿಳಿಸಿದ್ದಾರೆ.

ಕಾರ್ಮಿಕರ ಕೊರತೆಯಿಂದ ಕಬ್ಬು ಕಟಾವು ಮಾಡುವುದು ಸವಾಲಿನ ಕೆಲಸವಾಗಿತ್ತು. ಈ ಆಧುನಿಕ ಯಂತ್ರದಿಂದ ರೈತರಿಗೆ, ಟ್ರ್ಯಾಕ್ಟರ್ ಮಾಲೀಕರಿಗೆ ಹಾಗೂ ಸಕ್ಕರೆ ಕಾರ್ಖಾನೆಗಳಿಗೂ ಅನಕೂಲವಾಗಿದೆ ಎಂದು ಅವರು ಹೇಳಿದರು.

ಬಿ. ಎಸ್. ಅಸ್ಕಿ, ಎಸ್. ಎನ್. ಹುಕ್ಕೇರಿ, ಆರ್. ವಿ. ಕುಲಕರ್ಣಿ, ವಿ. ಎಸ್. ಕನಬೂರ, ಎಸ್. ಎಲ್. ಪಲ್ಲೇದ, ಎಸ್. ಎಸ್. ಶಿವಣ್ಣವರ, ಶ್ರೀನಿವಾಸ ಕುಲಕರ್ಣಿ(ಸತ್ತಿಕರ) ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT