ಶುಕ್ರವಾರ ತೆರೆಗೆ

ಗಣೇಶ್ ರಾವ್ ಕೇಳುತ್ತಿದ್ದಾರೆ ‘ನಮ್ಮವರು ಯಾರು’?

‘ನಮ್ಮವರು’ ಎಂಬ ಹೆಸರಿನ ಕೆಳಗೆ ‘ಯಾರು’ ಎಂಬ ಅಡಿಶೀರ್ಷಿಕೆ ಇದೆ. ಈ ಮೂಲಕ ‘ನಮ್ಮವರು ಯಾರು’ ಎಂಬ ಪ್ರಶ್ನೆಯನ್ನು ಕೇಳಲು ಈ ಸಿನಿಮಾ ಮುಂದಾಗಿರುವಂತಿದೆ.

ಗಣೇಶ್ ರಾವ್ ಕೇಳುತ್ತಿದ್ದಾರೆ ‘ನಮ್ಮವರು ಯಾರು’?

ಗಣೇಶ್ ರಾವ್ ಕೇಸರ್ಕರ್ ಅವರು ನಾಯಕ ನಟನಾಗಿ ಅಭಿನಯಿಸುತ್ತಿರುವ ಚಿತ್ರ ‘ನಮ್ಮವರು’ ಶುಕ್ರವಾರ ತೆರೆಗೆ ಬರುತ್ತಿದೆ. ಸಮಾಜದಲ್ಲಿ ಎಲ್ಲರ ಜೀವನದಲ್ಲೂ ಆಗುತ್ತಿರುವ ಪಲ್ಲಟಗಳನ್ನು ಇಟ್ಟುಕೊಂಡು ಹೊಸೆದಿರುವ ಕಥೆ ಈ ಸಿನಿಮಾದಲ್ಲಿ ಇದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

‘ನಮ್ಮವರು’ ಎಂಬ ಹೆಸರಿನ ಕೆಳಗೆ ‘ಯಾರು’ ಎಂಬ ಅಡಿಶೀರ್ಷಿಕೆ ಇದೆ. ಈ ಮೂಲಕ ‘ನಮ್ಮವರು ಯಾರು’ ಎಂಬ ಪ್ರಶ್ನೆಯನ್ನು ಕೇಳಲು ಈ ಸಿನಿಮಾ ಮುಂದಾಗಿರುವಂತಿದೆ.

‘ಇದು ನಾನು ನಟಿಸುತ್ತಿರುವ 150ನೇ ಚಿತ್ರ. ಸಾಂಸಾರಿಕ ಕಥಾಹಂದರವನ್ನು ಇದು ಹೊಂದಿದೆ’ ಎಂದು ಹೇಳುತ್ತಾರೆ ಗಣೇಶ್ ರಾವ್.

ಪ್ರತಿ ವ್ಯಕ್ತಿಯ ಜೀವನದಲ್ಲೂ ನಡೆಯಬಹುದಾದ ಕಥೆಯನ್ನು ಈ ಸಿನಿಮಾ ಹೊಂದಿದೆಯಂತೆ. ‘ಗಂಡಸು ಮದುವೆ ಆಗುವವರೆಗೆ ಒಂದು ರೀತಿ ಇರುತ್ತಾನೆ. ಮದುವೆಯ ನಂತರ ಅಪ್ಪ–ಅಮ್ಮನನ್ನು ಕಡೆಗಣಿಸುತ್ತಾನೆ. ಹೆಂಡತಿಯನ್ನು ಬಿಟ್ಟುಬಿಟ್ಟರೆ ಸಮಾಜ ಆಡಿಕೊಳ್ಳುತ್ತದೆ.  ಅದೇ ರೀತಿ, ತಂದೆ–ತಾಯಿಯನ್ನು ಬಿಟ್ಟು ಹೆಂಡತಿಯ ಕಡೆ ಮುಖ ಮಾಡಿದರೂ ಹಾಗೇ ಆಗುತ್ತದೆ. ಅಂತಹ ಸಮಯದಲ್ಲಿ ಏನು ಮಾಡಬೇಕು ಎಂಬ ತೊಳಲಾಟಕ್ಕೆ ಗಂಡಸು ಸಿಲುಕಿಕೊಳ್ಳುತ್ತಾನೆ. ಇದು ಈ ಸಿನಿಮಾದ ಕಥಾಹಂದರ’ ಎನ್ನುತ್ತಾರೆ ಗಣೇಶ್ ರಾವ್.

ಇಂತಹ ಸಂದಿಗ್ಧಕ್ಕೆ ಸಿಲುಕಿದ ವ್ಯಕ್ತಿ ಏನು ಮಾಡುತ್ತಾನೆ, ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಾನೆ ಎಂಬುದೇ ಈ ಸಿನಿಮಾದ ಕಥಾ ಹೂರಣ ಎಂದು ಅವರು ಹೇಳಿದರು. ಓಂಕಾರ್ ಪುರುಷೋತ್ತಮ್‌ ಅವರು ಇದನ್ನು ನಿರ್ದೇಶಿಸಿದ್ದಾರೆ. ಸಿನಿಮಾದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆದಿದೆ.

ಅಪ್ಪ–ಅಮ್ಮ ಮಕ್ಕಳ ಕಡೆ ಸರಿಯಾಗಿ ಗಮನ ಕೊಡದಿದ್ದಾಗ ಮಗುವಿನ ಮೇಲೆ ಅದು ಯಾವ ರೀತಿ ಪರಿಣಾಮ ಬೀರುತ್ತದೆ ಎಂಬ ಎಳೆಯೂ ಸಿನಿಮಾದಲ್ಲಿ ಇದೆ ಎಂದು ಗಣೇಶ್ ರಾವ್ ತಿಳಿಸಿದರು.

ಕಥಾನಾಯಕ ತನ್ನ ತಾಯಿಯನ್ನು ಒಂದು ಹಂತದಲ್ಲಿ ಅನಾಥಾಶ್ರಮಕ್ಕೆ ಸೇರಿಸುತ್ತಾನೆ. ಆಗ ಅಜ್ಜಿಯ ಪ್ರೀತಿಯಿಂದ ವಂಚಿತನಾಗುವ ಮೊಮ್ಮಗ ಅವಳನ್ನು ಹುಡುಕಿಕೊಂಡು ತಾನೇ ಅನಾಥಾಶ್ರಾಮಕ್ಕೆ ಹೋಗಿಬಿಡುವ ಸನ್ನಿವೇಶವೂ ಸಿನಿಮಾದಲ್ಲಿ ಚಿತ್ರಿತವಾಗಿದೆಯಂತೆ.

ರಾಜ್‌ ಭಾಸ್ಕರ್ ಅವರು ಸಂಗೀತ ನೀಡಿದ್ದಾರೆ, ಮುತ್ತುರಾಜ್‌ ಅವರು ಛಾಯಾಗ್ರಹಣದ ಹೊಣೆ ನಿಭಾಯಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಕುಣಿತದ ಮಟ್ಟು, ದಣಿವರಿಯದ ಪಟ್ಟು

ಪ್ರೇರಣೆ
ಕುಣಿತದ ಮಟ್ಟು, ದಣಿವರಿಯದ ಪಟ್ಟು

25 Apr, 2018
ಪ್ರತಿಭೆ ಇದ್ದರೆ ನೀವು ನಿಮ್ಮನ್ನೇ ಮಾರಿಕೊಳ್ಳುವ ಅಗತ್ಯವೇನಿದೆ?: ಸರೋಜ್ ಖಾನ್

ಕಾಸ್ಟಿಂಗ್‌ ಕೌಚ್‌ ಬಗ್ಗೆ ಹೇಳಿಕೆ
ಪ್ರತಿಭೆ ಇದ್ದರೆ ನೀವು ನಿಮ್ಮನ್ನೇ ಮಾರಿಕೊಳ್ಳುವ ಅಗತ್ಯವೇನಿದೆ?: ಸರೋಜ್ ಖಾನ್

24 Apr, 2018
ಮೇ 2ಕ್ಕೆ ಚಿರು–ಮೇಘನಾ ರಾಜ್‌ ವಿವಾಹ

ಬಹುಕಾಲದ ಸ್ನೇಹಿತರು
ಮೇ 2ಕ್ಕೆ ಚಿರು–ಮೇಘನಾ ರಾಜ್‌ ವಿವಾಹ

24 Apr, 2018
ಸಂಜಯ್‌ ದತ್‌ ಜೀವನಚರಿತ್ರೆ ‘ಸಂಜು’ ಟೀಸರ್‌ ಬಿಡುಗಡೆ

ರಾಜ್‌ಕುಮಾರ್‌ ಹಿರಾನಿ ನಿರ್ದೇಶನದ ಚಿತ್ರ
ಸಂಜಯ್‌ ದತ್‌ ಜೀವನಚರಿತ್ರೆ ‘ಸಂಜು’ ಟೀಸರ್‌ ಬಿಡುಗಡೆ

24 Apr, 2018
ಅಣ್ಣಾವ್ರ ಹುಟ್ಟುಹಬ್ಬದಂದು ಶಿವಣ್ಣನ ’ರುಸ್ತುಂ’ ಸಿನಿಮಾ ಫಸ್ಟ್‌ಲುಕ್‌

ಬೆಂಗಳೂರು
ಅಣ್ಣಾವ್ರ ಹುಟ್ಟುಹಬ್ಬದಂದು ಶಿವಣ್ಣನ ’ರುಸ್ತುಂ’ ಸಿನಿಮಾ ಫಸ್ಟ್‌ಲುಕ್‌

24 Apr, 2018