ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂಸ್ತಾನ್ ಇರುವುದು ಹಿಂದೂಗಳಿಗೆ: ಬಿಜೆಪಿ ಶಾಸಕ ವಿಕ್ರಂ ಸೈನಿ

Last Updated 2 ಜನವರಿ 2018, 13:56 IST
ಅಕ್ಷರ ಗಾತ್ರ

ಮುಜಾಫರ್‍ ನಗರ್: ನಮ್ಮ ದೇಶವನ್ನು ಹಿಂದೂಸ್ತಾನ್ ಎಂದು ಕರೆಯುತ್ತೇವೆ, ಹಾಗೆಂದರೆ ಹಿಂದೂಗಳಿಗೆ ಇರುವ ದೇಶ ಇದು ಎಂದು ಉತ್ತರ ಪ್ರದೇಶದ ಬಿಜೆಪಿ ಶಾಸಕ ವಿಕ್ರಂ ಸೈನಿ ಹೇಳಿದ್ದಾರೆ.

ಮುಜಾಫರ್‍ ನಗರ್‍‍ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸೈನಿ, ನಾನು ಹಿಂದುತ್ವದ ಮೇಲೆ ಬಲವಾದ ನಂಬಿಕೆ ಹೊಂದಿದ್ದೇನೆ. ನಮ್ಮ ದೇಶ ಹಿಂದೂಸ್ತಾನ್ ಎಂದು ಕರೆಯಲ್ಪಡುತ್ತದೆ. ಹಾಗೆಂದರೆ ಹಿಂದೂಗಳಿಗಾಗಿರುವ ದೇಶ, ಇಂದು ಯಾವುದೇ ತಾರತಮ್ಯ ಇಲ್ಲದೆಯೇ ಎಲ್ಲರೂ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಾರೆ ಎಂದಿದ್ದಾರೆ.

ಅದೇ ವೇಳೆ ಕಾಂಗ್ರೆಸ್ ವಿರುದ್ಧ ದಾಳಿ ನಡೆಸಿದ ಸೈನಿ, ಈ ಹಿಂದೆ ಉದ್ದ ಗಡ್ಡದ, ದೊಡ್ಡ ಚೆಕ್ ಹೊಂದಿದವರು ಇಲ್ಲಿದ್ದರು ಎಂದಿದ್ದಾರೆ.
ಈ ಹಿಂದಿನ ಸರ್ಕಾರ ಮುಸ್ಲಿಮರಿಗೆ ಮಾತ್ರ ಸೌಲಭ್ಯಗಳನ್ನು ನೀಡುತ್ತಿತ್ತು ಎಂದು ಆರೋಪಿಸಿದ ಬಿಜೆಪಿ ನಾಯಕ ಕೆಲವು ತಲೆ ಹಿಡುಕರು ಗಡ್ಡಧಾರಿಗಳನ್ನು ಉಳಿಸಿಕೊಂಡಿದ್ದರು. ಅದರಿಂದಾಗಿಯೇ ನಮಗೆ ಇವತ್ತು ಆಪತ್ತು ಬಂದಿದ್ದು. ಅವರು ಹೋದ ನಂತರವೇ ನಮಗೆ ರಾಜ್ಯ ಸಿಕ್ಕಿದ್ದು ಎಂದು ಈ ಹಿಂದೆ ರಾಜ್ಯದಲ್ಲಿ ಅಧಿಕಾರವಿದ್ದ ಸಮಾಜವಾದಿ ಪಕ್ಷದ ವಿರುದ್ಧ ಕಿಡಿಕಾರಿದ್ದಾರೆ.

ಸೋಮವಾರ ರಾಜಸ್ಥಾನದ ಅಲ್ವಾರ್ ಕ್ಷೇತ್ರದ ಬಿಜೆಪಿ ಶಾಸಕ ಬನ್ವಾರಿ ಲಾಲ್, ಮುಸ್ಲಿಮರು 12-14 ಮಕ್ಕಳನ್ನು ಹೆರುತ್ತಾರೆ. ಆದರೆ ಹಿಂದೂಗಳಿಗೆ ಒಂದು ಅಥವಾ ಎರಡು ಮಕ್ಕಳು ಸಾಕು ಎಂದು ನಿಯಂತ್ರಣ ಹೇರಲಾಗುತ್ತದೆ ಎಂದು ಫೇಸ್‍ಬುಕ್‍ನಲ್ಲಿ ಬರೆದು ವಿವಾದಕ್ಕೀಡಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT