, ದಾಳಿ ಪ್ರಕರಣ: ಕ್ರಿಕೆಟಿಗ ಇಮ್ರಾನ್‌ ಖಾನ್‌ಗೆ ಜಾಮೀನು | ಪ್ರಜಾವಾಣಿ
‌ಇಸ್ಲಾಮಾಬಾದ್‌

ದಾಳಿ ಪ್ರಕರಣ: ಕ್ರಿಕೆಟಿಗ ಇಮ್ರಾನ್‌ ಖಾನ್‌ಗೆ ಜಾಮೀನು

ಜಾಮೀನು ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಇಮ್ರಾನ್‌, ‘ಈ ನಿರ್ಧಾರ ನಾನು ಸತ್ಯವಂತ, ತಪ್ಪು ಮಾಡಿಲ್ಲ ಹಾಗೂ ಭಯೋತ್ಪಾದಕನಲ್ಲ ಎಂಬುದನ್ನು ಸಾಬೀತು ಮಾಡಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಎಪಿ ಚಿತ್ರ

‌ಇಸ್ಲಾಮಾಬಾದ್‌: ಪಾಕಿಸ್ತಾನ ಟಿವಿ ಚಾನಲ್‌(ಪಿಟಿವಿ) ಮುಖ್ಯ ಕಚೇರಿಯ ಮೇಲೆ 2014ರಲ್ಲಿ ನಡೆದಿದ್ದ ದಾಳಿ ಪ್ರಕರಣದಲ್ಲಿ ಜಾಮೀನು ಕೋರಿ ಮಾಜಿ ಕ್ರಿಕೆಟಿಗ ಹಾಗೂ ತೆಹ್ರಿಕ್‌–ಇ–ಇನ್ಸಾಫ್‌ ಮುಖ್ಯಸ್ಥ ಇಮ್ರಾನ್‌ ಖಾನ್‌ ಸಲ್ಲಿಸಿದ್ದ ಮೇಲ್ಮನವಿಯನ್ನು ಇಲ್ಲಿನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ ಸ್ವೀಕರಿಸಿದೆ.

ಪ್ರಕರಣದ ವಿಚಾರಣೆ ಆಲಿಸಿದ ನ್ಯಾಯಮೂರ್ತಿ ಶಾರುಖ್‌ ಅರ್ಜುಂದ್‌ ಅವರು ಇಮ್ರಾನ್‌ ಖಾನ್‌ಗೆ ಜಾಮೀನು ನೀಡಲು ಸಮ್ಮತಿಸಿದ್ದಾರೆ.

ಜಾಮೀನು ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಇಮ್ರಾನ್‌, ‘ಈ ನಿರ್ಧಾರ ನಾನು ಸತ್ಯವಂತ, ತಪ್ಪು ಮಾಡಿಲ್ಲ ಹಾಗೂ ಭಯೋತ್ಪಾದಕನಲ್ಲ ಎಂಬುದನ್ನು ಸಾಬೀತು ಮಾಡಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ನಾನು ಕಾನೂನಿಗೆ ಬದ್ಧವಾಗಿರುವುದರಿಂದಲೇ ಅದಕ್ಕೆ ಪ್ರಿಯವಾದವನಾಗಿದ್ದೇನೆ’ ಎಂದೂ ಹೇಳಿದ ಖಾನ್‌ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ವಿರುದ್ಧ ಗುಡುಗಿದ್ದಾರೆ.

‘ನನ್ನ ಹೆಸರು ಖಾನ್‌. ನಾನು ಭಯೋತ್ಪಾದಕನಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ನ್ಯಾಯಾಲಯವೂ ನಾನು ತಪ್ಪು ಮಾಡಿಲ್ಲ ಎಂಬುದನ್ನು ಪುನರುಚ್ಛರಿಸಿದೆ. ನಾನು ಅವರನ್ನು(ಷರೀಫ್‌) ಜವಾಬ್ದಾರಿಯುತವಾಗಿ ಹಿಡಿದಿರುವ ಕಾರಣಕ್ಕಾಗಿ ನನ್ನ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ. ನಾನು ನನ್ನ ಜೀವನದಲ್ಲಿ ಏನೊಂದನ್ನೂ ಕದ್ದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ಡಿಸೆಂಬರ್‌ 13ರಂದು ವಿಚಾರಣೆ ನಡೆಸಿದ್ದ ನ್ಯಾಯಾಲಯ ಇಮ್ರಾನ್‌ ಜಾಮೀನು ಅವಧಿಯನ್ನು ಜನವರಿ 2ರ ವರೆಗೆ ಮುಂದೂಡಿತ್ತು. ಇಮ್ರಾನ್ ಮಂಗಳವಾರ ವಿಚಾರಣೆ ಆರಂಭವಾಗುವುದಕ್ಕೂ ಮೊದಲು ಐದನೇ ಬಾರಿಗೆ ಜಾಮೀನು ಮೇಲ್ಮನವಿ ಸಲ್ಲಿಸಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು

ಫ್ರಾನ್ಸ್‌ ಕೋರ್ಟ್‌
ಕೈಕುಲುಕದ ಕಾರಣ ಪಾಸ್‌ಪೋರ್ಟ್‌ ನಕಾರ

ಫ್ರಾನ್ಸ್‌ ದೇಶದ ಪೌರತ್ವ ನೀಡುವ ಕಾರ್ಯಕ್ರಮದ ದಿನ ಅಧಿಕಾರಿಗಳಿಗೆ ಕೈಕುಲುಕಿಲ್ಲ ಎಂಬ ಕಾರಣಕ್ಕೆ ಮುಸ್ಲಿಂ ಮಹಿಳೆಗೆ ಪಾಸ್‌ಪೋರ್ಟ್‌ ನೀಡಲು ನಿರಾಕರಿಸಿರುವ ಕ್ರಮ ಸರಿಯಾಗಿದೆ ಎಂದು...

22 Apr, 2018

ಸೌದಿಯ ರಿಯಾದ್‌ನಲ್ಲಿ ನಡೆದ ಪ್ರಕರಣ
ಜಿಮ್‌ನಲ್ಲಿ ಮಹಿಳೆ ಪ್ರಾಧಿಕಾರ ಗರಂ

ಜಿಮ್‌ ಒಂದರಲ್ಲಿ ‘ಮಹಿಳೆಯೊಬ್ಬರು ತಲೆಗವಸು ಧರಿಸದೇ, ಬಿಗಿ ಉಡುಪು ಧರಿಸಿ, ಪಂಚಿಂಗ್‌ ಬ್ಯಾಗ್‌ಗೆ ಗುದ್ದುತ್ತಿರುವ ವಿಡಿಯೊವೊಂದು ವೈರಲ್‌ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ವಿಡಿಯೊ...

22 Apr, 2018
ಮೋದಿ–ಮರ್ಕೆಲ್ ಭೇಟಿ

ದ್ವಿಪಕ್ಷೀಯ ಮಾತುಕತೆ
ಮೋದಿ–ಮರ್ಕೆಲ್ ಭೇಟಿ

22 Apr, 2018
ಮಹಿಳೆಗಾಗಿ ‘ಬಾಕ್ಸರ್‌ ನೆರಳು’

ಸುರಕ್ಷತೆ
ಮಹಿಳೆಗಾಗಿ ‘ಬಾಕ್ಸರ್‌ ನೆರಳು’

22 Apr, 2018
ಅಣ್ವಸ್ತ್ರ ನಿಷೇಧ: ಕಿಮ್ ಜಾಂಗ್‌

ಅಣ್ವಸ್ತ್ರ ನಿಶಸ್ತ್ರೀಕರಣ ನಿರ್ಧಾರ
ಅಣ್ವಸ್ತ್ರ ನಿಷೇಧ: ಕಿಮ್ ಜಾಂಗ್‌

22 Apr, 2018