ಬಾಲಿವುಡ್‌

ಶಾರುಕ್ ಹೊಸ ಚಿತ್ರ ‘ಜೀರೊ’

ಇದೇ ಮೊದಲ ಬಾರಿಗೆ ಶಾರುಕ್‌ ಕುಳ್ಳನಾಗಿ ನಟಿಸಿರುವುದು ಈ ಚಿತ್ರದ ವಿಶೇಷ ಆಕರ್ಷಣೆ. ಯಾವುದಕ್ಕೂ ಕೇರ್‌ ಮಾಡದೇ ಸಾಧನೆ ಮಾಡುವ ಕುಬ್ಜದೇಹಿಯ ಪಾತ್ರದಲ್ಲಿ ಶಾರುಕ್‌ ಹಿಂದೆಂದಿಗಿಂತಲೂ ವಿಭಿನ್ನವಾಗಿ ಅಭಿನಯಿಸಿರುವುದು ಟೀಸರ್‌ ನೋಡಿದರೆ ತಿಳಿಯುತ್ತದೆ.

ಕುಳ್ಳ ಶಾರುಕ್‌ನ ನೋಟ

ಹೊಸ ವರ್ಷದ ಮೊದಲ ದಿನ ಸಂಜೆ ಐದು ಗಂಟೆಗೆ, ತಮ್ಮ ಹೊಸ ಚಿತ್ರದ ಶೀರ್ಷಿಕೆಯನ್ನು ಪ್ರಕಟಿಸುವುದಾಗಿ ಹೇಳಿದ್ದ ಶಾರುಕ್‌ ಖಾನ್‌ ತಮ್ಮ ಅಭಿಮಾನಿಗಳಿಗೆ ನಿರಾಸೆ ಮಾಡಲಿಲ್ಲ. ಆನಂದ್‌ ಎಲ್‌. ರೈ ಮತ್ತು ಶಾರುಕ್‌ ಜೋಡಿಯ ಹೊಸ ಮೋಡಿ ಎಂದೇ ಬಿಂಬಿತವಾಗಿರುವ ಹೊಸ ಚಿತ್ರದ ಹೆಸರು ‘ಜೀರೊ’. ಇದೇ ವೇಳೆ ಖಾನ್ ‘ಜೀರೊ’ದ ಮೊದಲ ಟೀಸರನ್ನೂ ಸೋಮವಾರ ಸಂಜೆ ಬಿಡುಗಡೆ ಮಾಡಿದ್ದಾರೆ.

ಇದೇ ಮೊದಲ ಬಾರಿಗೆ ಶಾರುಕ್‌ ಕುಳ್ಳನಾಗಿ ನಟಿಸಿರುವುದು ಈ ಚಿತ್ರದ ವಿಶೇಷ ಆಕರ್ಷಣೆ. ಯಾವುದಕ್ಕೂ ಕೇರ್‌ ಮಾಡದೇ ಸಾಧನೆ ಮಾಡುವ ಕುಬ್ಜದೇಹಿಯ ಪಾತ್ರದಲ್ಲಿ ಶಾರುಕ್‌ ಹಿಂದೆಂದಿಗಿಂತಲೂ ವಿಭಿನ್ನವಾಗಿ ಅಭಿನಯಿಸಿರುವುದು ಟೀಸರ್‌ ನೋಡಿದರೆ ತಿಳಿಯುತ್ತದೆ. ಕುಳ್ಳ ಶಾರುಕ್‌ ಮೊದಲ ನೋಟಕ್ಕೇ ನಗು ತರಿಸುತ್ತಾರೆ. ಈ ಚಿತ್ರದಲ್ಲಿ ಕತ್ರೀನಾ ಕೈಫ್‌ ಹಾಗೂ ಅನುಷ್ಕಾ ಶರ್ಮ ನಟಿಸಲಿರುವುದು ಚಿತ್ರದ ತಾರಾ ವರ್ಚಸ್ಸನ್ನು ಹೆಚ್ಚಿಸಿದೆ. ಈ ಚಿತ್ರದಲ್ಲಿ ಕಾಜೋಲ್‌, ರಾಣಿ ಮುಖರ್ಜಿ, ಶ್ರೀದೇವಿ ಹಾಗೂ ಜೂಹಿ ಚಾವ್ಲಾ ಅತಿಥಿ ನಟರಾಗಿ ನಟಿಸಲಿದ್ದಾರೆ.

ಶಾರುಕ್‌ ಮುಂದಿನ ಚಿತ್ರದ ಬಗ್ಗೆ ಅಭಿಮಾನಿಗಳು ಭಾರಿ ಕುತೂಹಲದಿಂದ ಕಾಯುತ್ತಿದ್ದರು. ಈಗ ಸಿನಿಮಾದ ಹೆಸರು ಹಾಗೂ ಟೀಸರ್‌ ಬಿಡುಗಡೆಯಾಗಿದ್ದು, ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿದೆ.

ಈ ಟೀಸರ್‌ನ ಆರಂಭದಲ್ಲಿ ಅನೇಕ ಹಳೆ ಬಾಲಿವುಡ್‌ ಸಿನಿಮಾಗಳನ್ನು ನೆನಪಿಸಿಕೊಂಡಿದ್ದು, ಈ ಚಿತ್ರವೂ 70ರ ದಶಕದ ಚಿತ್ರಗಳಂತೆ ಇರಲಿದೆಯೇ ಎಂಬ ಸಂದೇಹ ಮೂಡುತ್ತದೆ. ಚಿತ್ರದ ಹಿನ್ನೆಲೆ ಸಂಗೀತದಲ್ಲಿ ರಫಿ ಹಾಡುಗಳು ಹಾಗೂ ಶಮ್ಮಿ ಕಫೂರ್‌ ಅಭಿನಯದ ಸಿನಿಮಾ ಹಾಡುಗಳನ್ನು ಬಳಸಿಕೊಂಡಿರುವುದು ಚಿತ್ರದ ಬಗ್ಗೆ ಕುತೂಹಲವನ್ನು ಹೆಚ್ಚಿಸಿದೆ. ಈ ಚಿತ್ರ 2018ರ ಡಿಸೆಂಬರ್‌ 21ರಂದು ಬಿಡುಗಡೆಯಾಗಬೇಕು ಎಂಬುದು ಆನಂದ್‌ ಎಲ್‌. ರೈ ಲೆಕ್ಕಾಚಾರ. ಟೀಸರ್‌ ಕೊಂಡಿ: http://bit.ly/2EAQCwf v

Comments
ಈ ವಿಭಾಗದಿಂದ ಇನ್ನಷ್ಟು
ಎಂಜಿಆರ್‌ಗಾಗಿ ಅಣ್ಣಾವ್ರ ಹರಕೆ

ಬಾಂಧವ್ಯ
ಎಂಜಿಆರ್‌ಗಾಗಿ ಅಣ್ಣಾವ್ರ ಹರಕೆ

23 Apr, 2018
ಮನೆಯವರ ಕಾಡುವ ರಾಜಮಾರ್ಗ

ಅಣ್ಣಾವ್ರ ನೆನಪು
ಮನೆಯವರ ಕಾಡುವ ರಾಜಮಾರ್ಗ

23 Apr, 2018
‘ಮುತ್ತಣ್ಣನಿಗೆ ಅನ್ನವೂ ದೇವರು’

ಮೆಟ್ರೋ
‘ಮುತ್ತಣ್ಣನಿಗೆ ಅನ್ನವೂ ದೇವರು’

23 Apr, 2018
ಕನ್ನಡಪ್ರೇಮಿ ರಾಜ್‌

ಮೆಟ್ರೋ
ಕನ್ನಡಪ್ರೇಮಿ ರಾಜ್‌

23 Apr, 2018
ಕರಿಬಿಳಿಯಲ್ಲೂ ಬಣ್ಣದ ನೆನಪುಗಳು

ಅಣ್ಣಾವ್ರ ನೆನಪು
ಕರಿಬಿಳಿಯಲ್ಲೂ ಬಣ್ಣದ ನೆನಪುಗಳು

23 Apr, 2018