ಒಳಮೀಸಲಾತಿ

ಜಾತಿನಿಷ್ಠರು

‘ಒಳಮೀಸಲಾತಿಯಿಂದ ದಲಿತರ ಏಕತೆಗೆ ಧಕ್ಕೆ ಬರುತ್ತದೆ’ ಎನ್ನುವ ಅವರು, 1932ರ ದಲಿತರ ಪಾಲಿನ ಮರಣಶಾಸನ ಎನ್ನಲಾದ ‘ಪೂನಾ ಒಪ್ಪಂದ’ದ ಕುರಿತು ಏನು ಹೇಳುತ್ತಾರೆ? ಅಂಬೇಡ್ಕರ್ ಅವರನ್ನು ಮಣಿಸಲು ಗಾಂಧಿ ಬಳಸಿದ್ದು ಇದೇ ಐಕ್ಯ ಮಂತ್ರವನ್ನಲ್ಲವೇ?

‘ಮಾದಿಗರು ಕೋಮುವಾದಿ ಪಕ್ಷದೊಂದಿಗೆ ಇದ್ದಾರೆ’ ಎಂಬ ಅರ್ಥದ ಅಭಿಪ್ರಾಯವನ್ನು ಪ್ರೊ. ಮೊಗಳ್ಳಿ ಗಣೇಶ್ ವ್ಯಕ್ತಪಡಿಸಿದ್ದಾರೆ (ಪ್ರ.ವಾ., ವಾರದ ಸಂದರ್ಶನ, ಡಿ.31). ಆ ಮೂಲಕ ಮಾದಿಗ ಜಾತಿ ಮತ್ತು ಆ ಸಮುದಾಯದವರ ಬೇಡಿಕೆಗಳಿಗೆ ಇನ್ನಿತರ ಪ್ರಾಜ್ಞರ ವಲಯದಲ್ಲೂ ತಿರಸ್ಕಾರ ಭಾವ ಮೂಡಿಸಲು ಶ್ರಮಿಸಿದಂತಿದೆ.

‘ಒಳಮೀಸಲಾತಿಯಿಂದ ದಲಿತರ ಏಕತೆಗೆ ಧಕ್ಕೆ ಬರುತ್ತದೆ’ ಎನ್ನುವ ಅವರು, 1932ರ ದಲಿತರ ಪಾಲಿನ ಮರಣಶಾಸನ ಎನ್ನಲಾದ ‘ಪೂನಾ ಒಪ್ಪಂದ’ದ ಕುರಿತು ಏನು ಹೇಳುತ್ತಾರೆ? ಅಂಬೇಡ್ಕರ್ ಅವರನ್ನು ಮಣಿಸಲು ಗಾಂಧಿ ಬಳಸಿದ್ದು ಇದೇ ಐಕ್ಯ ಮಂತ್ರವನ್ನಲ್ಲವೇ? ದಲಿತರ ವಿಷಯದಲ್ಲಿ ಗಾಂಧಿ ನಡೆದುಕೊಂಡ ರೀತಿ ತಪ್ಪು ಎನ್ನುವುದಾದರೆ, ಮಾದಿಗರು ‘ನಮಗೆ ಅನ್ಯಾಯವಾಗಿದೆ, ಒಳಮೀಸಲಾತಿ ಕೊಡಿ’ ಎನ್ನುವುದು ಹೇಗೆ ತಪ್ಪಾಗುತ್ತದೆ?

‘ಹೊಲೆಯರು ಕಾಂಗ್ರೆಸ್, ಮಾದಿಗರು ಕೋಮುವಾದಿ ಬಿಜೆಪಿ’ ಎನ್ನುವ ಅವರು, ಅದು ಹೇಗೆ ಹೊಲೆ ಮಾದಿಗರನ್ನ ‘ಸಯಾಮಿ’ ಎನ್ನುತ್ತಾರೆ? ಹೀಗೆ ಪರಿಸ್ಥಿತಿಗೆ ತಕ್ಕಂತೆ ಮಾತು ಬದಲಾಯಿಸುವ ಮೊಗಳ್ಳಿ, ಜಾತಿನಿಷ್ಠರಾಗಿ ಮಾತ್ರ ಕಾಣುತ್ತಾರೆ.

–ಗುರುಪ್ರಸಾದ್ ಕಂಟಲಗೆರೆ, ಚಿ.ನಾ.ಹಳ್ಳಿ

 

Comments
ಈ ವಿಭಾಗದಿಂದ ಇನ್ನಷ್ಟು

ವಾಚಕರವಾಣಿ
ಗೆಲುವು – ಗೊಂದಲ!

ಬರಲಿಹ ಬೃಹತ್ ಚುನಾವಣೆಯಲಿ, ಯಾವ ತಾವರೆ ಗೆಲುವುದು;

22 Apr, 2018

ವಾಚಕರವಾಣಿ
ಹಣ ಸದ್ಬಳಕೆಯಾಗಲಿ

ವಿಶ್ವ ಪುಸ್ತಕ ದಿನದಂದು (ಏ. 23) ಉಚಿತವಾಗಿ ಒಂದಿಷ್ಟು ಪುಸ್ತಕಗಳನ್ನು ಮಹಿಳಾ ಸಂಘಗಳಿಗೆ, ಶಾಲಾ- ಕಾಲೇಜುಗಳಿಗೆ, ಇತರೆ ಸಂಘ- ಸಂಸ್ಥೆಗಳಿಗೆ ವಿತರಿಸಿದರೆ ‘ವಿಶ್ವ ಪುಸ್ತಕ...

22 Apr, 2018

ವಾಚಕರವಾಣಿ
ಇದೊಂದು ಪರಿಹಾರ

ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ ಅಭ್ಯರ್ಥಿಯು ಒಂದರಲ್ಲಿ ಗೆದ್ದು ಇನ್ನೊಂದರಲ್ಲಿ ಸೋತರೆ ಅಥವಾ ಎರಡೂ ಕ್ಷೇತ್ರಗಳಲ್ಲಿ ಸೋತರೆ ಹಾನಿ ಏನೂ ಇಲ್ಲ.

22 Apr, 2018

ವಾಚಕರವಾಣಿ
ಸಿನಿಮಾದವರ ಪ್ರಚಾರ

ಮತದಾನ ಮಾಡುವಂತೆ ಜನರನ್ನು ಪ್ರೇರೇಪಿಸಲು ಖ್ಯಾತ ಚಿತ್ರ ನಿರ್ದೇಶಕ, ಗೀತ ರಚನಕಾರ ಯೋಗರಾಜ ಭಟ್ಟರು ‘ಮಾಡಿ ಮಾಡಿ ಮಾಡಿ ಮತದಾನ’ ಎಂಬ ಧ್ಯೇಯ ಗೀತೆಯನ್ನು...

22 Apr, 2018

ವಾಚಕರವಾಣಿ
ಅವರವರ ಭಕುತಿಗೆ

‘ಆತ್ಮವೇ ಇಲ್ಲದವರ ಛದ್ಮವೇಷಗಳ ವಂಚನೆಯ ಆಟ’ (ಪ್ರ.ವಾ., ಏ. 17) ಲೇಖನದ ಬಗ್ಗೆ ಈ ಪ್ರತಿಕ್ರಿಯೆ.

22 Apr, 2018