ಜಾರಿಗೆ ಬರಲಿ

ಹೋಬಳಿಗೊಂದು ಪಬ್ಲಿಕ್ ಶಾಲೆ ಆರಂಭಿಸಿದರೆ ಬಡಮಕ್ಕಳಿಗೆ ತುಂಬಾ ಅನುಕೂಲವಾಗುತ್ತದೆ. ವಿಷಯವಾರು ಶಿಕ್ಷಕರು, ಗ್ರಂಥಾಲಯ, ಪ್ರಯೋಗಾಲಯ, ಶೌಚಾಲಯ, ಕುಡಿಯುವ ನೀರು, ಆಟದ ಮೈದಾನ... ಹೀಗೆ ಎಲ್ಲ ಸೌಕರ್ಯಗಳನ್ನು ನೀಡಿ ಶಾಲೆ ಆರಂಭಿಸಿದರೆ ಅರ್ಥಪೂರ್ಣ.

ರಾಜ್ಯದ ಪ್ರಾಥಮಿಕ ಶಿಕ್ಷಣ ಸಚಿವರು ಈಚೆಗೆ, ಹೋಬಳಿಗೊಂದು ಪಬ್ಲಿಕ್ ಶಾಲೆ ಆರಂಭಿಸುವುದಾಗಿ ಹೇಳಿದ್ದಾರೆ. ಈ ಹಿಂದೆ ಈ ಖಾತೆ ನಿಭಾಯಿಸಿದ ಸಚಿವರೂ ಇದೇ ರೀತಿಯ ಹೇಳಿಕೆ ಕೊಟ್ಟಿದ್ದರು. ಆದರೆ ಅವರ ಹೇಳಿಕೆ ಜಾರಿಯಾಗಲಿಲ್ಲ.

ವಾಸ್ತವದಲ್ಲಿ ಸರ್ಕಾರಿ ಶಾಲೆಗಳಲ್ಲಿ ಓದುವುದು ಬಹುಮಟ್ಟಿಗೆ ಬಡವರ ಮಕ್ಕಳು. ನೂರಾರು ಸಮಸ್ಯೆ, ಕೊರತೆಗಳ ಮಧ್ಯೆ ಅವರು ಶಿಕ್ಷಣ ಪಡೆಯುತ್ತಿದ್ದಾರೆ. ಹೋಬಳಿಗೊಂದು ಪಬ್ಲಿಕ್ ಶಾಲೆ ಆರಂಭಿಸಿದರೆ ಬಡಮಕ್ಕಳಿಗೆ ತುಂಬಾ ಅನುಕೂಲವಾಗುತ್ತದೆ. ವಿಷಯವಾರು ಶಿಕ್ಷಕರು, ಗ್ರಂಥಾಲಯ, ಪ್ರಯೋಗಾಲಯ, ಶೌಚಾಲಯ, ಕುಡಿಯುವ ನೀರು, ಆಟದ ಮೈದಾನ... ಹೀಗೆ ಎಲ್ಲ ಸೌಕರ್ಯಗಳನ್ನು ನೀಡಿ ಶಾಲೆ ಆರಂಭಿಸಿದರೆ ಅರ್ಥಪೂರ್ಣ.

–ಕಂಡಕ್ಟರ್ ಸೋಮು, ಎಡೆಯೂರು

 

Comments
ಈ ವಿಭಾಗದಿಂದ ಇನ್ನಷ್ಟು

ವಾಚಕರವಾಣಿ
ಲೇಖಾನುದಾನ ತೆಗೆದುಕೊಳ್ಳಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಸುಮಾರು ಒಂದು ತಿಂಗಳು ರಾಜ್ಯದಾದ್ಯಂತ ಪ್ರವಾಸ ಮಾಡಿದ್ದಾರೆ. ಹೋದ ಕಡೆಗಳಲ್ಲೆಲ್ಲ ನೂರಾರು ಕೋಟಿ ರೂಪಾಯಿಗಳ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

20 Jan, 2018

ವಾಚಕರವಾಣಿ
ಹೆಲ್ಮೆಟ್ ಭಾಗ್ಯ?!

ರಾಜಕೀಯ ಪಕ್ಷಗಳಿಗೆ ಒಂದು ಒಳ್ಳೆಯ ಅವಕಾಶ. ‘ದ್ವಿಚಕ್ರ ವಾಹನ ಸವಾರರು ಐಎಸ್‌ಐ ಮುದ್ರೆ ಇರುವ ಹೆಲ್ಮೆಟ್ ಅನ್ನೇ ಧರಿಸಬೇಕು’ ಎಂದು ಹೈಕೋರ್ಟ್ ಆದೇಶಿಸಿದೆ.

20 Jan, 2018

ವಾಚಕರವಾಣಿ
ಸುಗ್ಗಿ – ಹುಗ್ಗಿ!

ಇನ್ನು ಮುಂದೆ ಚುನಾವಣಾ ಪರ್ವಕಾಲ ಶ್ರೀಸಾಮಾನ್ಯನಿಗೆ ಇನ್ನಿಲ್ಲದ ಅನುಕೂಲ

20 Jan, 2018

ವಾಚಕರವಾಣಿ
ಎಚ್ಚೆತ್ತುಕೊಳ್ಳುವುದು ಎಂದು?

ನಮ್ಮ ರಾಜಕೀಯ ಮುಖಂಡರು, ಎರಡು ದೋಣಿಗಳಲ್ಲಿ ಪಯಣಿಸುವ ಮಠಾಧೀಶರು ಮತ್ತು ‘ಒಂದು ಕಿಡಿ ಇಡೀ ಕಾಡನ್ನೇ ಹೊತ್ತಿ ಉರಿಸುತ್ತದೆ’ ಎಂಬ ಜ್ಞಾನವಿಲ್ಲದ ಜನರು ಇದಕ್ಕೆ...

20 Jan, 2018

ವಾಚಕರವಾಣಿ
ಮಾದರಿ ಕ್ರಮ

ಆಂಧ್ರಪ್ರದೇಶ ಸರ್ಕಾರವು ಶಾಸಕರ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವುದು ಕಡ್ಡಾಯಗೊಳಿಸುವ ಕುರಿತು ಮಸೂದೆ ಮಂಡನೆಗೆ ಮುಂದಾಗಿರುವುದು ಚರಿತ್ರಾರ್ಹ ಕ್ರಮವಾಗಿದೆ.

20 Jan, 2018