ಭಯೋತ್ಪಾದಕ ಚಟುವಟಿಕೆ ನಿಯಂತ್ರಣ; ಪಾಕ್ ವಿರುದ್ಧ ತಿರುಗಿಬಿದ್ದ ಅಮೆರಿಕ

₹1624 ಕೋಟಿ ಸೇನಾ ನೆರವಿಗೆ ತಡೆ

ತನ್ನ ನೆಲದಲ್ಲಿರುವ ಭಯೋತ್ಪಾದಕ ಚಟುವಟಿಕೆ ನಿಯಂತ್ರಣ ನಿಟ್ಟಿನಲ್ಲಿ ಇಸ್ಲಾಮಾಬಾದ್‌ ಕೈಗೊಳ್ಳುವ ಕ್ರಮಗಳನ್ನು ಆಧರಿಸಿ ಮುಂದಿನ ದಿನಗಳಲ್ಲಿ ಅನುದಾನ ನೀಡುವ ಬಗ್ಗೆ ತೀರ್ಮಾನಿಸಲಾಗುತ್ತದೆ ಎಂದು ಅಮೆರಿಕ ಸ್ಪಷ್ಟಪಡಿಸಿದೆ.

ಚಿತ್ರ: ಪ್ರಕಾಶ್‌ ಶೆಟ್ಟಿ

ವಾಷಿಂಗ್ಟನ್‌: ಪಾಕಿಸ್ತಾನಕ್ಕೆ ನೀಡಬೇಕಾಗಿದ್ದ ₹1,624 ಕೋಟಿ (255 ಮಿಲಿಯನ್‌ ಡಾಲರ್‌) ಸೇನಾ ನೆರವಿಗೆ ಅಮೆರಿಕ ತಡೆ ನೀಡಿರುವುದನ್ನು ಶ್ವೇತಭವನ ಖಚಿತಪಡಿಸಿದೆ.

ತನ್ನ ನೆಲದಲ್ಲಿರುವ ಭಯೋತ್ಪಾದಕ ಚಟುವಟಿಕೆ ನಿಯಂತ್ರಣ ನಿಟ್ಟಿನಲ್ಲಿ ಇಸ್ಲಾಮಾಬಾದ್‌ ಕೈಗೊಳ್ಳುವ ಕ್ರಮಗಳನ್ನು ಆಧರಿಸಿ ಮುಂದಿನ ದಿನಗಳಲ್ಲಿ ಅನುದಾನ ನೀಡುವ ಬಗ್ಗೆ ತೀರ್ಮಾನಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ.

‘ಕಳೆದ 15 ವರ್ಷಗಳಿಂದ ಅಮೆರಿಕವು ಮೂರ್ಖತನದಿಂದ ಪಾಕಿಸ್ತಾನಕ್ಕೆ ₹ 2.10 ಲಕ್ಷ ಕೋಟಿ (33 ಬಿಲಿಯನ್‌ ಡಾಲರ್‌) ನೆರವು ನೀಡುತ್ತಾ ಬಂದಿದೆ. ಅದಕ್ಕೆ ಪ್ರತಿಯಾಗಿ ಸುಳ್ಳು, ವಂಚನೆ ಬಿಟ್ಟು ಏನನ್ನೂ ನೀಡಿಲ್ಲ’ ಎಂದು ಟ್ರಂಪ್‌ ಮಂಗಳವಾರ ಟ್ವೀಟ್‌ ಮಾಡಿದ್ದರು.

ಕಠಿಣ ಸಂದೇಶ: ‘ಪಾಕಿಸ್ತಾನದಲ್ಲಿರುವ ಉಗ್ರರ ವಿರುದ್ಧ ಕ್ರಮ ಕೈಗೊಳ್ಳಲು ಸಂಬಂಧ ಅಮೆರಿಕದ ಅಧ್ಯಕ್ಷರು ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ. ಭವಿಷ್ಯದಲ್ಲೂ ಭದ್ರತಾ ನೆರವು ನೀಡುವ ಕುರಿತಂತೆ ಇದೇ ನಿಲುವು ಅನ್ವಯವಾಗಲಿದೆ’ ಎಂದು ಶ್ವೇತಭವನದ ಅಧಿಕಾರಿ ತಿಳಿಸಿದ್ದಾರೆ.

ಭದ್ರತಾ ಸಮಿತಿ ಸಭೆ ನಡೆಸಿದ ಅಬ್ಬಾಸಿ: ಅಮೆರಿಕದ ನಿರ್ಧಾರದ ಬೆನ್ನಲ್ಲೇ, ಪಾಕಿಸ್ತಾನ ಪ್ರಧಾನಿ ರಾಷ್ಟ್ರೀಯ ಭದ್ರತಾ ಸಮಿತಿ ಸಭೆ ನಡೆಸಿದರು. ಬುಧವಾರ ಸಂಪುಟ ಸಭೆಯೂ ನಿಗದಿಯಾಗಿದೆ.

‘ಟ್ರಂಪ್‌ ಟ್ವೀಟ್‌ಗೆ ಶೀಘ್ರವೇ ಪ್ರತಿಕ್ರಿಯೆ ನೀಡಲಿದ್ದೇವೆ’ ಎಂದು ವಿದೇಶಾಂಗ ಸಚಿವರು ಹೇಳಿದ್ದಾರೆ.

ಭದ್ರತಾ ಸಮಿತಿ ಸಭೆ ನಡೆಸಿದ ಅಬ್ಬಾಸಿ
ಇಸ್ಲಾಮಾಬಾದ್‌:
ಅಮೆರಿಕ ಅನುದಾನ ಕಡಿತಗೊಳಿಸುವ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ, ಪಾಕಿಸ್ತಾನ ಪ್ರಧಾನಿ ಶಾಹೀದ್‌ ಅಬ್ಬಾಸಿ ಅವರು ರಾಷ್ಟ್ರೀಯ ಭದ್ರತಾ ಸಮಿತಿಯ ಸಭೆ ನಡೆಸಿದರು.

ಸಭೆಯಲ್ಲಿ ವಿದೇಶಾಂಗ ಸಚಿವ ಖ್ವಾಜಾ ಅಸೀಫ್‌, ಆಂತರಿಕ ಭದ್ರತಾ ಸಚಿವ ಅಹಸಾನ್‌ ಇಕ್ಬಾಲ್‌, ರಕ್ಷಣಾ ಸಚಿವ ಖುರ್ರಂ ದಸ್ತ್‌ಗೀರ್‌ ಖಾನ್‌, ಸೇನೆಯ ಮೂರು ವಿಭಾಗದ ಮುಖ್ಯಸ್ಥರು ಹಾಜರಿದ್ದರು.

ಅಮೆರಿಕ ಅಧ್ಯಕ್ಷ ಟ್ರಂಪ್‌ ಅವರ ಟ್ವೀಟ್‌ಗೆ ‘ಶೀಘ್ರದಲ್ಲಿಯೇ ಪ್ರತಿಕ್ರಿಯೆ ನೀಡಲಿದ್ದೇವೆ. ಜಗತ್ತಿನ ಮುಂದೆ ಸತ್ಯದ ಅನಾವರಣ ಆಗಲಿದೆ..’ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಖ್ವಾಜಾ ಅಸೀಫ್‌ ಟ್ವೀಟಿಸಿದ್ದರು.

ಬುಧವಾರ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸಂಪುಟ ಸಭೆ ನಡೆಸಲು ಪ್ರಧಾನಿ ನಿರ್ಧರಿಸಿದ್ದಾರೆ.

ಅಮೆರಿಕ ರಾಯಭಾರಿಗೆ ಬುಲಾವ್‌
ಇಸ್ಲಾಮಾಬಾದ್‌:
ಟ್ರಂಪ್‌  ಆರೋಪಕ್ಕೆ ಸಂಬಂಧಿಸಿದಂತೆ  ಅಮೆರಿಕ ರಾಯಭಾರಿ ಹ್ಯಾಲ್‌ ಅವರನ್ನು ಸೋಮವಾರ ರಾತ್ರಿ ಕರೆಸಿದ ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ತನ್ನ ಪ್ರತಿಭಟನೆಯನ್ನು ದಾಖಲಿಸಿತು.

‘ಟ್ರಂಪ್‌ ಆರೋಪದ ಕುರಿತಾಗಿ ವಿವರ ನೀಡುವಂತೆ ಇದೇ ವೇಳೆ ವಿದೇಶಾಂಗ ಕಾರ್ಯದರ್ಶಿ ತೆಹಮೀನಾ ಜಂಜುವಾ ತಿಳಿಸಿದರು’ ಎಂದು ಎಕ್ಸ್‌ಪ್ರೆಸ್‌ ಟ್ರಿಬ್ಯೂನ್‌ ವರದಿ ಮಾಡಿದೆ. ಆದರೆ ಈ ಬಗ್ಗೆ ವಿದೇಶಾಂಗ ಇಲಾಖೆ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪಾಕ್‌ ನೆರವಿಗೆ ಧಾವಿಸಿದ ಚೀನಾ
ಬೀಜಿಂಗ್‌:
ಉಗ್ರರ ನಿಗ್ರಹಕ್ಕೆ ಪಾಕಿಸ್ತಾನ ಕೈಗೊಂಡಿರುವ ಕ್ರಮಕ್ಕೆ ಚೀನಾ ಪ್ರಶಂಸೆ ವ್ಯಕ್ತಪಡಿಸಿದೆ.

‘ಭಯೋತ್ಪಾದನೆ ವಿರುದ್ಧದ ಹೋರಾಟ ದಲ್ಲಿ ಪಾಕಿಸ್ತಾನವೂ ಅಭೂತಪೂರ್ವ ಕ್ರಮಗಳನ್ನು ತೆಗೆದುಕೊಂಡಿದೆ. ಜೊತೆಗೆ ಸಾಕಷ್ಟು ತ್ಯಾಗವನ್ನೂ ಮಾಡಿದೆ. ಜಾಗತಿಕ ಭಯೋತ್ಪಾದನೆ ತಡೆಯುವ ನಿಟ್ಟಿನಲ್ಲಿ ಮಹತ್ತರ ಕೊಡುಗೆ ನೀಡಿದೆ. ಅಂತರರಾಷ್ಟ್ರೀಯ ಸಮುದಾಯವನ್ನು ಇದನ್ನು ಪರಿಗಣಿಸಬೇಕು’ ಎಂದು ಚೀನಾದ ವಿದೇಶಾಂಗ ಇಲಾಖೆ ವಕ್ತಾರ ಗೆಂಗ್‌ ಶುವಾಂಗ್‌ ಮಂಗಳವಾರ ತಿಳಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಆರ್ಥಿಕ ಅಭಿವೃದ್ಧಿಯಲ್ಲಿ ಮಹಿಳೆಯರನ್ನೂ ಸೇರಿಸಿ

ಐಎಂಎಫ್‌ ಮುಖ್ಯಸ್ಥೆ ಕ್ರಿಸ್ಟಿನ್‌ ಲಗಾರ್ಡ್‌ ಭಾರತಕ್ಕೆ ಕಿವಿಮಾತು
ಆರ್ಥಿಕ ಅಭಿವೃದ್ಧಿಯಲ್ಲಿ ಮಹಿಳೆಯರನ್ನೂ ಸೇರಿಸಿ

24 Jan, 2018
ದತ್ತಾಂಶ ಆಧುನಿಕ ಜಗದ ಸಂಪತ್ತು: ಮೋದಿ

ದಾವೋಸ್‌
ದತ್ತಾಂಶ ಆಧುನಿಕ ಜಗದ ಸಂಪತ್ತು: ಮೋದಿ

24 Jan, 2018
ಅಲಾಸ್ಕಾದಲ್ಲಿ ಪ್ರಬಲ ಭೂಕಂಪ

ಸುನಾಮಿ ಎಚ್ಚರಿಕೆ
ಅಲಾಸ್ಕಾದಲ್ಲಿ ಪ್ರಬಲ ಭೂಕಂಪ

24 Jan, 2018
ಕಾಶ್ಮೀರ ವಿವಾದದಲ್ಲಿ ಮಧ್ಯಸ್ಥಿಕೆ ಇಲ್ಲ: ವಿಶ್ವಸಂಸ್ಥೆ

ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಹೇಳಿಕೆ
ಕಾಶ್ಮೀರ ವಿವಾದದಲ್ಲಿ ಮಧ್ಯಸ್ಥಿಕೆ ಇಲ್ಲ: ವಿಶ್ವಸಂಸ್ಥೆ

24 Jan, 2018
ಮೋದಿ ಅಣಕಿಸಿದ ಟ್ರಂಪ್‌: ವರದಿ

‘ವಾಷಿಂಗ್ಟನ್‌ ಪೋಸ್ಟ್‌’ ವರದಿ
ಮೋದಿ ಅಣಕಿಸಿದ ಟ್ರಂಪ್‌: ವರದಿ

24 Jan, 2018