ಉತ್ತಮ ಆಟ

ಕತಾರ್‌ ಓಪನ್‌ ಟೆನಿಸ್‌ ಟೂರ್ನಿ: ಡಾಮಿನಿಕ್‌ಗೆ ಜಯ

ಪುರುಷರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಹೋರಾಟದಲ್ಲಿ ಅಗ್ರಶ್ರೇಯಾಂಕದ ಆಟಗಾರ ಡಾಮಿನಿಕ್‌ 7–6, 6–3ರಲ್ಲಿ ರಷ್ಯಾದ ಎವಜೆನಿ ಡಾನ್ಸ್‌ಕೊಯ್‌ ವಿರುದ್ಧ ಗೆದ್ದರು.

ಡಾಮಿನಿಕ್‌ ಥೀಮ್‌

ದೋಹಾ: ಆಸ್ಟ್ರಿಯಾದ ಡಾಮಿನಿಕ್‌ ಥೀಮ್, ಕತಾರ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.

ಪುರುಷರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಹೋರಾಟದಲ್ಲಿ ಅಗ್ರಶ್ರೇಯಾಂಕದ ಆಟಗಾರ ಡಾಮಿನಿಕ್‌ 7–6, 6–3ರಲ್ಲಿ ರಷ್ಯಾದ ಎವಜೆನಿ ಡಾನ್ಸ್‌ಕೊಯ್‌ ವಿರುದ್ಧ ಗೆದ್ದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಐದನೇ ಸ್ಥಾನ ಹೊಂದಿದ್ದ ಡಾಮಿನಿಕ್‌ ಎರಡೂ ಗೇಮ್‌ಗಳಲ್ಲೂ ಎದುರಾಳಿಯ ಮೇಲೆ ಪಾರಮ್ಯ ಸಾಧಿಸಿದರು.

ಇನ್ನೊಂದು ಪಂದ್ಯದಲ್ಲಿ ಸ್ಪೇನ್‌ನ ಫರ್ನಾಂಡೊ ವರ್ಡಾಸ್ಕೊ 4–6, 6–4, 6–0ಯಲ್ಲಿ ಇಸ್ರೇಲ್‌ನ ದುದಿ ಸೆಲಾ ಅವರನ್ನು ಸೋಲಿಸಿದರು. ಮೊದಲ ಸೆಟ್‌ನಲ್ಲಿ ನಿರಾಸೆಗೊಂಡ ಫರ್ನಾಂಡೊ ನಂತರ ಮಿಂಚಿದರು. ಎರಡು ಮತ್ತು ಅಂತಿಮ ಸೆಟ್‌ನಲ್ಲಿ ಅಬ್ಬರಿಸಿ ಎದುರಾಳಿಯನ್ನು ತಬ್ಬಿಬ್ಬುಗೊಳಿಸಿದರು.

ಎರಡನೇ ಸೆಟ್‌ನಲ್ಲಿ ವರ್ಡಾಸ್ಕೊ, ರಷ್ಯಾದ ಆ್ಯಂಡ್ರ್ಯೂ ರುಬಲೆವ್‌ ವಿರುದ್ಧ ಆಡುವರು. ದಿನದ ಇನ್ನೊಂದು ಹೋರಾಟದಲ್ಲಿ ರುಬಲೆವ್‌, ಜರ್ಮನಿಯ ಸೆಡ್ರಿಕ್‌ ಮಾರ್ಷೆಲ್‌ ಸ್ಟೆಬೆ ಎದುರು ಗೆದ್ದಿದ್ದರು. ಜಾರ್ಜಿಯಾದ ನಿಕೊಲಜ್‌ ಬಸಿಲಶ್ವಿಲಿ 6–4, 6–3ರ ಇಟಲಿಯ ಥಾಮಸ್‌ ಫಾಬಿಯಾನೊ ಅವರನ್ನು ಮಣಿಸಿದರು.

ಮುಂದಿನ ಸುತ್ತಿನಲ್ಲಿ ನಿಕೊಲಸ್ ,ಪ್ಯಾಬ್ಲೊ ಕರೆನೊ ಬುಸ್ಟಾ ಮತ್ತು ಬೊರ್ನಾ ಕೊರಿಕ್‌ ನಡುವಣ ಪಂದ್ಯದಲ್ಲಿ ಗೆದ್ದ ಆಟಗಾರನ ವಿರುದ್ಧ ಪೈಪೋಟಿ ನಡೆಸಲಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಫೈನಲ್‌ ಪ್ರವೇಶಿಸಿದ ನಡಾಲ್‌

ಟೆನಿಸ್‌ ಟೂರ್ನಿ
ಫೈನಲ್‌ ಪ್ರವೇಶಿಸಿದ ನಡಾಲ್‌

22 Apr, 2018
‘ಐಪಿಎಲ್‌ನಲ್ಲಿ ಲೆಗ್‌ ಸ್ಪಿನ್ನರ್‌ಗಳ ಮೋಡಿ’: ಕಪೀಲ್‌ ದೇವ್‌ ಅಭಿಪ್ರಾಯ

ಕ್ರಿಕೆಟ್‌
‘ಐಪಿಎಲ್‌ನಲ್ಲಿ ಲೆಗ್‌ ಸ್ಪಿನ್ನರ್‌ಗಳ ಮೋಡಿ’: ಕಪೀಲ್‌ ದೇವ್‌ ಅಭಿಪ್ರಾಯ

22 Apr, 2018

ಬೆಂಗಳೂರು
ಈಜು ತರಬೇತಿ ಶಿಬಿರ

ಬಸವನಗುಡಿ ಈಜು ಕೇಂದ್ರ (ಬಿಎಸಿ), ಮೇ 1ರಿಂದ 28 ರವರೆಗೆ ಬೇಸಿಗೆ ಈಜು ತರಬೇತಿ ಶಿಬಿರ ಹಮ್ಮಿಕೊಂಡಿದೆ.

22 Apr, 2018
ಟ್ವಿಟರ್‌ನಲ್ಲಿ ಆರ್‌ಸಿಬಿಗೆ ಮಂಗಳಾರತಿ!

ಐಪಿಎಲ್‌ ಕ್ರಿಕೆಟ್‌ ಟೂರ್ನಿ
ಟ್ವಿಟರ್‌ನಲ್ಲಿ ಆರ್‌ಸಿಬಿಗೆ ಮಂಗಳಾರತಿ!

22 Apr, 2018
ಮುಂಬೈ ಇಂಡಿಯನ್ಸ್‌ಗೆ ಜಯದ ಹಂಬಲ

ಐಪಿಎಲ್‌ ಕ್ರಿಕೆಟ್‌ ಟೂರ್ನಿ
ಮುಂಬೈ ಇಂಡಿಯನ್ಸ್‌ಗೆ ಜಯದ ಹಂಬಲ

22 Apr, 2018