ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹1,700 ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಖರೀದಿಗೆ ಒಪ್ಪಿಗೆ

Last Updated 2 ಜನವರಿ 2018, 20:03 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ನೌಕಾಪಡೆ ಮತ್ತು ವಾಯುಪಡೆಗಾಗಿ ₹1,700 ಕೋಟಿ ಮೌಲ್ಯದ ಶಸ್ತ್ರಾಸ್ತ್ರಗಳನ್ನು ಖರೀದಿಸುವ ಪ್ರಕ್ರಿಯೆಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಮಂಗಳವಾರ ಅನುಮೋದನೆ ನೀಡಿದ್ದಾರೆ.

‘ಗುರಿಯ ಮೇಲೆ ನಿಖರವಾಗಿ ದಾಳಿ ನಡೆಸುವ ಶಸ್ತ್ರಾಸ್ತ್ರಗಳ ಕೊರತೆಯನ್ನು ಭಾರತೀಯ ವಾಯು ಪಡೆ ಎದುರಿಸುತ್ತಿದ್ದು, ಈಗ ಮಾಡುವ ಖರೀದಿಯು ಅದನ್ನು ತುಂಬಲಿದೆ. ಅಲ್ಲದೇ ವಾಯುಪಡೆಯ ಸಮರ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಲಿದೆ’ ಎಂದು ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಯಾವುದೆಲ್ಲ ಶಸ್ತ್ರಾಸ್ತ್ರ?
ವಾಯು ಪಡೆಗೆ:
ರಷ್ಯಾದ ಜೆಎಸ್‌ಸಿ ರೊಸೊಬೊರೊನ್‌ಎಕ್ಸ್‌ಪರ್ಟ್‌ ತಯಾರಿಸಿರುವ,  ಶತ್ರು ನೆಲೆಯ ಮೇಲೆ ಕರಾರುವಾಕ್ಕಾಗಿ ದಾಳಿ ನಡೆಸುವ ಸಾಮರ್ಥ್ಯ ಹೊಂದಿರುವ ಲೇಸರ್‌ ನಿರ್ದೇಶಿತ ಬಾಂಬ್‌.

250 ಖರೀದಿಸಲಿರುವ ಬಾಂಬ್‌ಗಳ ಸಂಖ್ಯೆ
ನೌಕಾಪಡೆಗೆ:
ಇಸ್ರೇಲ್‌ನ ರಾಫೆಲ್‌ ಅಡ್ವಾನ್ಸ್‌ ಡೆಫೆನ್ಸ್‌ ಸಿಸ್ಟಮ್ಸ್‌ ಲಿಮಿಟೆಡ್‌ ರೂಪಿಸಿರುವ, ನೆಲದಿಂದ ಆಗಸಕ್ಕೆ ಚಿಮ್ಮುವ ಬರಾಕ್‌ ಕ್ಷಿಪಣಿಗಳು.

ಈ ಕ್ಷಿಪಣಿಗಳನ್ನು ನೌಕೆ ನಿಗ್ರಹ ಕ್ಷಿಪಣಿಗಳ ವಿರುದ್ಧ ಕ್ಷಿಪಣಿ–ನಿಗ್ರಹ ರಕ್ಷಣಾ ವ್ಯವಸ್ಥೆಯಾಗಿ ಯುದ್ಧನೌಕೆಗಳಲ್ಲಿ ಬಳಸಬಹುದಾಗಿದೆ.

131 ನೌಕಾ ಪಡೆ ಖರೀದಿಸಲಿರುವ ಬರಾಕ್‌ ಕ್ಷಿಪಣಿಗಳು

ವಾಯು ಪಡೆಗೆ: ರಷ್ಯಾದ ಜೆಎಸ್‌ಸಿ ರೊಸೊಬೊರೊನ್‌ಎಕ್ಸ್‌ಪರ್ಟ್‌ ತಯಾರಿಸಿರುವ,  ಶತ್ರು ನೆಲೆಯ ಮೇಲೆ ಕರಾರುವಾಕ್ಕಾಗಿ ದಾಳಿ ನಡೆಸುವ ಸಾಮರ್ಥ್ಯ ಹೊಂದಿರುವ ಲೇಸರ್‌ ನಿರ್ದೇಶಿತ ಬಾಂಬ್‌.

ನೌಕಾಪಡೆಗೆ: ಇಸ್ರೇಲ್‌ನ ರಾಫೆಲ್‌ ಅಡ್ವಾನ್ಸ್‌ ಡೆಫೆನ್ಸ್‌ ಸಿಸ್ಟಮ್ಸ್‌ ಲಿಮಿಟೆಡ್‌ ರೂಪಿಸಿರುವ, ನೆಲದಿಂದ ಆಗಸಕ್ಕೆ ಚಿಮ್ಮುವ ಬರಾಕ್‌ ಕ್ಷಿಪಣಿಗಳು.

ಈ ಕ್ಷಿಪಣಿಗಳನ್ನು ನೌಕೆ ನಿಗ್ರಹ ಕ್ಷಿಪಣಿಗಳ ವಿರುದ್ಧ ಕ್ಷಿಪಣಿ–ನಿಗ್ರಹ ರಕ್ಷಣಾ ವ್ಯವಸ್ಥೆಯಾಗಿ ಯುದ್ಧನೌಕೆಗಳಲ್ಲಿ ಬಳಸಬಹುದಾಗಿದೆ.

₹1,254 ಕೋಟಿ -ವಾಯುಪಡೆಗೆ ಶಸ್ತ್ರಾಸ್ತ್ರ ಖರೀದಿಸಲು ಮಾಡಲಾಗುವ ವೆಚ್ಚ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT