ದೋಕಲಾ ಗಡಿ ವಿವಾದ

ಸದಸ್ಯತ್ವ ಸಿಕ್ಕರೆ ತಟಸ್ಥ ನೀತಿ ಪಾಲನೆ ಕಷ್ಟ

ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌ ವತಿಯಿಂದ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ‘ಭಾರತೀಯ ವಿದೇಶಾಂಗ ನೀತಿ: ಹಿಂದೆ, ಇಂದುಮತ್ತು ಸವಾಲುಗಳು’ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಎನ್. ಪಾರ್ಥಸಾರಥಿ ಮಾತನಾಡಿದರು –ಪ್ರಜಾವಾಣಿ ಚಿತ್ರ

ಬೆಂಗಳೂರು: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಮ್ಮ ದೇಶ ಸದಸ್ಯತ್ವವನ್ನು ಹೊಂದಿಲ್ಲ. ಈ ಸಮಿತಿಯ ಸದಸ್ಯತ್ವ ಸಿಕ್ಕರೆ ತಟಸ್ಥ ನೀತಿಯನ್ನು ಕಾಯ್ದುಕೊಳ್ಳುವುದು ಕಷ್ಟ ಸಾಧ್ಯ ಎಂದು ನಿವೃತ್ತ ರಾಯಭಾರಿ ಎನ್‌.ಪಾರ್ಥಸಾರಥಿ ಅಭಿಪ್ರಾಯಪಟ್ಟರು.

ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌ ವತಿಯಿಂದ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ‘ಭಾರತೀಯ ವಿದೇಶಾಂಗ ನೀತಿ: ಹಿಂದೆ, ಇಂದುಮತ್ತು ಸವಾಲುಗಳು’ ಕುರಿತು ಮಾತನಾಡಿದರು.

‘ಭದ್ರತಾ ಸಮಿತಿಯಲ್ಲಿ ಸ್ಥಾನ ಸಿಕ್ಕಿದ್ದೇ ಆದರೆ, ಭಾರತ ಜಾಗರೂಕತೆಯ ಹೆಜ್ಜೆ ಇಡಬೇಕಾಗುತ್ತದೆ’ ಎಂದರು.

‘1962ರಲ್ಲಿ ಚೀನಾ ವಿರುದ್ಧ ಭಾರತ ಕಂಡ ಸೋಲು ದೇಶದ ಜನರ ಆತ್ಮಸ್ಥೈರ್ಯವನ್ನು ಕುಗ್ಗಿಸಿತ್ತು. ಆದರೆ, ದೋಕಲಾ ಗಡಿ ವಿವಾದದ ವಿಚಾರದಲ್ಲಿ ಅನುಸರಿಸಿದ ನೀತಿಯಿಂದ ನಮ್ಮ ದೇಶದ ಬಗ್ಗೆ ಅನ್ಯ ದೇಶಗಳು ಹೊಂದಿರುವ ಭಾವನೆ ಬದಲಾಗಿದೆ. ಚೀನಾವನ್ನು ಎದುರಿಸಬಲ್ಲ ಪ್ರಮುಖ ಶಕ್ತಿ ಭಾರತ ಎಂದೇ ಭಾವಿಸಿವೆ’ ಎಂದು ಹೇಳಿದರು.

ವಿದೇಶಾಂಗ ನೀತಿಯು ನಿಂತ ನೀರಲ್ಲ ಅಥವಾ ಏಕಾಂತದಲ್ಲಿ ಮೂಡುವ ವಿಚಾರವಲ್ಲ. ಜನರ ಸುರಕ್ಷತೆಗಾಗಿ ಚುನಾಯಿತ ಸರ್ಕಾರ ಹಾಗೂ ಅಧಿಕಾರಿ ವರ್ಗ ಜತೆಗೂಡಿ ತಳೆಯುವ ಮುಖ್ಯ ನಿರ್ಧಾರಗಳೇ ವಿದೇಶಾಂಗ ನೀತಿ ಎಂದರು.

Comments
ಈ ವಿಭಾಗದಿಂದ ಇನ್ನಷ್ಟು

ಬೆಂಗಳೂರು
ಟ್ರಾನ್ಸ್‌ಫಾರ್ಮರ್ ಸ್ಫೋಟ: ಬಾಲಕಿಗೆ ಗಾಯ

ನೀಲಸಂದ್ರದ ಬಿಡಿಎ ಕಾಂಪ್ಲೆಕ್ಸ್‌ ಬಳಿ ಟ್ರಾನ್ಸ್‌ಫಾರ್ಮರ್‌ ಸ್ಫೋಟದಿಂದ ಗಂಭೀರ ಗಾಯಗೊಂಡಿದ್ದ ಬಾಲಕಿ ಸಾವು ಬದುಕಿನ ನುಡುವೆ ಹೋರಾಡುತ್ತಿದ್ದಾಳೆ.

21 Apr, 2018
ಭೂ ವರಾಹ ಸ್ವಾಮಿ ದೇವಸ್ಥಾನ ಸ್ಥಾಪನೆ

ನೆಲಮಂಗಲ
ಭೂ ವರಾಹ ಸ್ವಾಮಿ ದೇವಸ್ಥಾನ ಸ್ಥಾಪನೆ

21 Apr, 2018

ಬೆಂಗಳೂರು
ರಸ್ತೆ ಕಾಮಗಾರಿ ಮುಂದುವರಿಸಲ್ಲ: ಬಿಬಿಎಂಪಿ

‘ಪಟ್ಟಂದೂರು ಅಗ್ರಹಾರದ ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ಕೈಗೊಳ್ಳಲಾಗಿರುವ 80 ಅಡಿ ವಿಸ್ತೀರ್ಣದ ರಸ್ತೆ ನಿರ್ಮಾಣ ಕಾಮಗಾರಿಯನ್ನು ಸದ್ಯ ಮುಂದುವರಿಸುವುದಿಲ್ಲ’ ಎಂದು ಬೃಹತ್ ಬೆಂಗಳೂರು ಮಹಾನಗರ...

21 Apr, 2018
ಇಳೆಗೆ ತಂಪೆರೆದ ವರ್ಷಧಾರೆ

ಬೆಂಗಳೂರಿನ ವಿವಿಧೆಡೆ ಮಳೆ
ಇಳೆಗೆ ತಂಪೆರೆದ ವರ್ಷಧಾರೆ

21 Apr, 2018
ಅವಮಾನಕರ ಪೋಸ್ಟ್‌ ಕ್ಷಮೆ ಕೇಳಿದ ಶೇಖರ್‌

ಓದದೇ ಶೇರ್‌ ಮಾಡಿದ್ದೆ ಎಂದು ಸ್ಪಷ್ಟನೆ
ಅವಮಾನಕರ ಪೋಸ್ಟ್‌ ಕ್ಷಮೆ ಕೇಳಿದ ಶೇಖರ್‌

21 Apr, 2018