ವಿದೇಶಿ ಪ್ರವಾಸಿಗರನ್ನು ಸೆಳೆಯಲು ಪ್ರವಾಸೋದ್ಯಮ ಇಲಾಖೆ ತಯಾರಿ

ಅಂತರರಾಷ್ಟ್ರೀಯ ಪ್ರವಾಸಿ ಎಕ್ಸ್‌ಪೊ

‘ಇಲ್ಲಿನ ಪ್ರವಾಸಿ ತಾಣಗಳ ಪರಿಚಯಿಸಲು ಹಾಗೂ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಉದ್ಯಮಗಳಿಗೆ ನೆರವಾಗಲು ಈ ಕಾರ್ಯಕ್ರಮ ಏರ್ಪಡಿಸಲಾಗಿದೆ. ಬೆಂಗಳೂರಿನ ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಫೆಬ್ರುವರಿ 28ರಿಂದ ಮಾರ್ಚ್‌ 2ರವರೆಗೆ ಎಕ್ಸ್‌ಪೋ ನಡೆಯಲಿದೆ’

ಪ್ರಿಯಾಂಕ್‌ ಖರ್ಗೆ ಅವರು ಲಾಂಛನ ಬಿಡುಗಡೆ ಮಾಡಿದರು. ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕುಮಾರ್‌ ಪುಷ್ಕರ್‌, ಜಂಗಲ್‌ ಲಾಡ್ಜಸ್‌ ಮತ್ತು ರೆಸಾರ್ಟ್‌ನ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಶರ್ಮಾ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಆಲಂಖಾನ್‌, ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಟಿ.ಕೆ. ಅನಿಲ್‌ ಕುಮಾರ್‌ ಇದ್ದರು –ಪ್ರಜಾವಾಣಿ ಚಿತ್ರ

ಬೆಂಗಳೂರು: ವಿದೇಶಿ ಪ್ರವಾಸಿಗರನ್ನು ಸೆಳೆಯಲು ಪ್ರವಾಸೋದ್ಯಮ ಇಲಾಖೆ ಮೊದಲ ಬಾರಿಗೆ ‘ಅಂತರರಾಷ್ಟ್ರೀಯ ಪ್ರವಾಸಿ ಎಕ್ಸ್‌ಪೊ–2018’ (ಕೆಐಟಿಇಎಸ್‌) ಕಾರ್ಯಕ್ರಮ ಆಯೋಜಿಸಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ, ‘ಇಲ್ಲಿನ ಪ್ರವಾಸಿ ತಾಣಗಳ ಪರಿಚಯಿಸಲು ಹಾಗೂ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಉದ್ಯಮಗಳಿಗೆ ನೆರವಾಗಲು ಈ ಕಾರ್ಯಕ್ರಮ ಏರ್ಪಡಿಸಲಾಗಿದೆ. ಬೆಂಗಳೂರಿನ ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಫೆಬ್ರುವರಿ 28ರಿಂದ ಮಾರ್ಚ್‌ 2ರವರೆಗೆ ಎಕ್ಸ್‌ಪೋ ನಡೆಯಲಿದೆ’ ಎಂದು ಹೇಳಿದರು.

‘25ಕ್ಕೂ ಹೆಚ್ಚಿನ ದೇಶಗಳ 400ಕ್ಕೂ ಹೆಚ್ಚಿನ ನೋಂದಾಯಿತ ಖರೀದಿದಾರರು ಮತ್ತು ಮಾಧ್ಯಮಗಳ ಪ್ರತಿನಿಧಿಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಇದರಲ್ಲಿ 12 ಸಾವಿರಕ್ಕೂ ಹೆಚ್ಚಿನ ಸಂದರ್ಶನಗಳು ನಡೆಯಲಿವೆ. ಪ್ರವಾಸೋದ್ಯಮ ವಲಯವನ್ನು ಹಿಗ್ಗಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶ’ ಎಂದರು.

ರಾಜ್ಯದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಗೊಳ್ಳುತ್ತಿವೆ. ಮೇಳದಲ್ಲಿ 28 ಪ್ರಮುಖ ಪ್ರವಾಸಿ ವಿಭಾಗಗಳ ಬಗ್ಗೆ ಚರ್ಚೆ ನಡೆಯಲಿದೆ. ವನ್ಯಜೀವಿ, ಯುನೆಸ್ಕೋ ಪ್ರದೇಶ, ಪರಿಸರ ಪ್ರವಾಸೋದ್ಯಮ, ಪಾರಂಪರಿಕ ತಾಣಗಳು ಸೇರಿ ಇತರ ಪ್ರವಾಸಿ ತಾಣಗಳನ್ನು ಪರಿಚಯಿಸಲಾಗುತ್ತದೆ. ಮೇಳದ ನಂತರ ಪ್ರತಿನಿಧಿಗಳನ್ನು ಪ್ರವಾಸಿ ತಾಣಗಳಿಗೆ ಕರೆದೊಯ್ಯಲಾಗುವುದು ಎಂದರು.

ಎಕ್ಸೊಪೊಗೆ ನೂತನ ಲಾಂಛನ

ಈ ಎಕ್ಸ್‌ಪೊಗಾಗಿ ಇಲಾಖೆ ನೂತನ ಲಾಂಛನ ಬಿಡುಗಡೆ ಮಾಡಿದೆ.

‘ರಾಜ್ಯದಲ್ಲಿ 8,000 ಆನೆಗಳಿವೆ. ಹಾಗಾಗಿ ಆನೆಯನ್ನು ಪ್ರಧಾನವಾಗಿ ಇಟ್ಟುಕೊಂಡು ಅದರೊಳಗೆ ರಾಜ್ಯದ ಕಲೆ, ಸಂಸ್ಕೃತಿಯನ್ನು ಬಿಂಬಿಸುವ ಲಾಂಛನ ರೂಪಿಸಲಾಗಿದೆ’ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

ಈ ಬಾರಿ ವನ್ಯಜೀವಿ, ಸಾಹಸ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತಿರುವ ಕಾರಣ ಆ ಅಂಶಗಳನ್ನು ಒಳಗೊಂಡ ಲಾಂಛನ ರೂಪಿಸಿದ್ದೇವೆ. ವಿಷಯಗಳಿಗೆ ಅನುಸಾರವಾಗಿ ಲಾಂಛನದ ಒಳನೋಟ ಬದಲಾಗುತ್ತಿರುತ್ತದೆ ಎಂದರು.

Comments
ಈ ವಿಭಾಗದಿಂದ ಇನ್ನಷ್ಟು

ಬೆಂಗಳೂರು
ಚಾಕುವಿನಿಂದ ಇರಿದು ಸ್ನೇಹಿತನ ಕೊಲೆ

ಸಿಟಿ ಮಾರ್ಕೆಟ್‌ ಬಳಿ ನಜ್ಮಲ್‌ ಹುಸೇನ್ (20) ಎಂಬುವರನ್ನು ಚಾಕುವಿನಿಂದ ಇರಿದು ಸೋಮವಾರ ರಾತ್ರಿ ಕೊಲೆ ಮಾಡಲಾಗಿದೆ.

25 Apr, 2018

ಬೆಂಗಳೂರು
ಲೋಕ ಅದಾಲತ್‌ : 17,913 ಪ್ರಕರಣ ಇತ್ಯರ್ಥ

‘ರಾಜ್ಯದಾದ್ಯಂತ ಇದೇ 22ರಂದು ನಡೆದ ಮಾಸಿಕ ಲೋಕ ಅದಾಲತ್‌ನಲ್ಲಿ ಒಟ್ಟು 17,913 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ’ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ತಿಳಿಸಿದೆ.

25 Apr, 2018

ಬೆಂಗಳೂರು
ತಂದೆಯಿಂದಲೇ ಲೈಂಗಿಕ ಕಿರುಕುಳ ; ಎಫ್‌ಐಆರ್‌ ದಾಖಲು

ಆರು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ, ಆಕೆಯ ತಂದೆ ವಿರುದ್ಧ ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

25 Apr, 2018
ದೊಡ್ಡಗುಬ್ಬಿ ಕೆರೆಯಲ್ಲಿ ಮೀನುಗಳ ಸಾವು

ಬೆಂಗಳೂರು
ದೊಡ್ಡಗುಬ್ಬಿ ಕೆರೆಯಲ್ಲಿ ಮೀನುಗಳ ಸಾವು

25 Apr, 2018
ಮಾಯವಾದ ನೆರಳಿಗಾಗಿ ಹುಡುಕಾಟ

ಬೆಂಗಳೂರು
ಮಾಯವಾದ ನೆರಳಿಗಾಗಿ ಹುಡುಕಾಟ

25 Apr, 2018