, ಇವಿಎಂ ಹ್ಯಾಕಥಾನ್ ಆಯೋಜಿಸಲು 250 ವಿದ್ಯುನ್ಮಾನ ಮತಯಂತ್ರಗಳಿಗಾಗಿ ಚುನಾವಣಾ ಆಯೋಗಕ್ಕೆ ಬೇಡಿಕೆ ಸಲ್ಲಿಸಿದ ರಾಜ್ಯ ಸರ್ಕಾರ | ಪ್ರಜಾವಾಣಿ
ಚುನಾವಣಾ ಆಯೋಗಕ್ಕೆ ಪ್ರಿಯಾಂಕ್‌ ಖರ್ಗೆ ಪತ್ರ

ಇವಿಎಂ ಹ್ಯಾಕಥಾನ್ ಆಯೋಜಿಸಲು 250 ವಿದ್ಯುನ್ಮಾನ ಮತಯಂತ್ರಗಳಿಗಾಗಿ ಚುನಾವಣಾ ಆಯೋಗಕ್ಕೆ ಬೇಡಿಕೆ ಸಲ್ಲಿಸಿದ ರಾಜ್ಯ ಸರ್ಕಾರ

ವಿದ್ಯುನ್ಮಾನ ಮತಯಂತ್ರಗಳು ದುರ್ಬಳಕೆಯಾಗುತ್ತಿವೆ ಎಂಬ ಶಂಕೆ ವ್ಯಕ್ತವಾಗಿದ್ದು, ಅವುಗಳ ಪರಿಶೀಲನೆಗೆ ‘ಹ್ಯಾಕಥಾನ್‌’ಗೆ ಚುನಾವಣಾ ಆಯೋಗ ಅವಕಾಶ ಕಲ್ಪಿಸಬೇಕು. ಅದಕ್ಕಾಗಿ 250ವಿದ್ಯುನ್ಮಾನ ಮತಯಂತ್ರ (ಇವಿಎಂ)...

ಇವಿಎಂ ಹ್ಯಾಕಥಾನ್ ಆಯೋಜಿಸಲು 250 ವಿದ್ಯುನ್ಮಾನ ಮತಯಂತ್ರಗಳಿಗಾಗಿ ಚುನಾವಣಾ ಆಯೋಗಕ್ಕೆ ಬೇಡಿಕೆ ಸಲ್ಲಿಸಿದ ರಾಜ್ಯ ಸರ್ಕಾರ

ಬೆಂಗಳೂರು:  ವಿದ್ಯುನ್ಮಾನ ಮತಯಂತ್ರಗಳು ದುರ್ಬಳಕೆಯಾಗುತ್ತಿವೆ ಎಂಬ ಶಂಕೆ ವ್ಯಕ್ತವಾಗಿದ್ದು, ಅವುಗಳ ಪರಿಶೀಲನೆಗೆ ‘ಹ್ಯಾಕಥಾನ್‌’ಗೆ ಚುನಾವಣಾ ಆಯೋಗ ಅವಕಾಶ ಕಲ್ಪಿಸಬೇಕು. ಅದಕ್ಕಾಗಿ 250ವಿದ್ಯುನ್ಮಾನ ಮತಯಂತ್ರ (ಇವಿಎಂ)ಗಳನ್ನು ನೀಡಿ ಅವುಗಳ ಪರಿಶೀಲನೆಗೆ ಅನುವು ಮಾಡಬೇಕೆಂದು ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಮಂಗಳವಾರ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.

ರಾಜ್ಯದಲ್ಲಿ ಹ್ಯಾಕಥಾನ್ ನಡೆಸಲು ಅನುಮತಿ ಕೋರಿ ಐಟಿ ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಚುನಾವಣಾ ಆಯುಕ್ತ ಅಂಚಲ್ ಕುಮಾರ್ ಜ್ಯೋತಿ ಅವರಿಗೆ ಪತ್ರ ಬರೆದಿದ್ದಾರೆ.

ಇವಿಎಂಗಳನ್ನು ಪರಿಶೀಸಲಿಸುವುದಕ್ಕಾಗಿರುವ ದಾಖಲೆ ಪತ್ರಗಳು, ಪರೀಕ್ಷೆಯ ವಿಧಾನ ಮತ್ತು ಫಲಿತಾಂಶ, ಸುರಕ್ಷಾ ವಿಧಾನಗಳ ಬಗ್ಗೆಯೂ ಮಾಹಿತಿ ನೀಡುವಂತೆ ಖರ್ಗೆ ತಮ್ಮ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಇವಿಎಂ ಹ್ಯಾಕಥಾನ್ ಆಯೋಜಿಸಲು ಕರ್ನಾಟಕ ಸರ್ಕಾರ ಮತ್ತು ಚುನಾವಣಾ ಆಯೋಗ ಜಂಟಿಯಾಗಿ ನಿರ್ಧರಿಸಿದ್ದು, ಇದಕ್ಕಾಗಿ ತಂತ್ರಪ್ರವೀಣರನ್ನು, ವಿಜ್ಞಾನಿಗಳು, ಕಾರ್ಪೊರೇಟ್, ಆರ್ ಆ್ಯಂಡ್ ಡಿ ಇನ್ಸಿಟ್ಯೂಟ್,  ಸ್ಟಾರ್ಟ್ ಅಪ್  ಮತ್ತು ಪರಿಣಿತರು ಸೇರಿದಂತೆ ರಾಜಕಾರಣಿಗಳು ಈ ಹ್ಯಾಕಥಾನ್‍ನಲ್ಲಿ ಭಾಗವಹಿಸಬೇಕೆಂದು ಆಹ್ವಾನಿಸುತ್ತೇವೆ ಎಂದು ಖರ್ಗೆ ಪತ್ರದಲ್ಲಿ ಬರೆದಿದ್ದಾರೆ.

ಚುನಾವಣಾ ಆಯೋಗ ನಡೆಸುವ ಹ್ಯಾಕಥಾನ್ ನಲ್ಲಿ ರಾಜಕೀಯ ಪಕ್ಷಗಳು ಮಾತ್ರ ಭಾಗವಹಿಸಬಹುದು ಆದರೆ ಕರ್ನಾಟಕದಲ್ಲಿ ನಡೆಯಲಿರುವ ಹ್ಯಾಕಥಾನ್‍ನಲ್ಲಿ ಸಾರ್ವಜನಿಕರು ಭಾಗವಹಿಸಬಹುದಾಗಿದೆ. ಸಾರ್ವಜನಿಕರಿಗೆ ಹ್ಯಾಕಥಾನ್‍ನಲ್ಲಿ ಭಾಗವಹಿಸುವ ಅವಕಾಶ ನೀಡಿರುವ ಬಗ್ಗೆ ಸಮರ್ಥಿಸಿಕೊಂಡ ಖರ್ಗೆ, ರಾಜಕೀಯ ಪಕ್ಷಗಳ ಜತೆಗೆ ಇಲ್ಲಿನ ಯುವ ಪ್ರತಿಭೆಗಳಿಗೂ ಅವಕಾಶ ನೀಡಬೇಕು. ಇದೊಂದು ಕೇವಲ ರಾಜಕೀಯ ಉದ್ದೇಶದಿಂದ ಕೂಡಿದ ಹ್ಯಾಕಥಾನ್ ಅಲ್ಲ ಎಂದಿದ್ದಾರೆ.

ಹಲವಾರು ವ್ಯಕ್ತಿಗಳು ಅಥವಾ ಕಾರ್ಪೊರೇಟ್‍ಗಳು ಯಾವುದೇ ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಳ್ಳಲು ಇಷ್ಟಪಡುವುದಿಲ್ಲ. ಹಾಗಾಗಿ ರಾಜಕೀಯ ಪಕ್ಷಗಳಿಗೆ ಮಾತ್ರವಲ್ಲ ಸಾರ್ವಜನಿಕರಿಗೂ ಹ್ಯಾಕಥಾನ್‍ನಲ್ಲಿ ಭಾಗವಹಿಸುವ ಅವಕಾಶ ನೀಡಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಪ್ರಧಾನಿ ಭೇಟಿಗೆ ಸಮಯ ಕೇಳಿದ ಸಿ.ಎಂ

ಕಾವೇರಿ ನಿರ್ವಹಣಾ ಮಂಡಳಿ ರಚನೆ ಜಟಾಪಟಿ
ಪ್ರಧಾನಿ ಭೇಟಿಗೆ ಸಮಯ ಕೇಳಿದ ಸಿ.ಎಂ

22 Apr, 2018
ವಿದ್ಯಾರ್ಥಿಗಳು ತಾವೂ ಕಲಿತರು, ನನ್ನನ್ನೂ ಬೆಳೆಸಿದರು

ಮನೆಯಂಗಳದಲ್ಲಿ ಮಾತುಕತೆ
ವಿದ್ಯಾರ್ಥಿಗಳು ತಾವೂ ಕಲಿತರು, ನನ್ನನ್ನೂ ಬೆಳೆಸಿದರು

22 Apr, 2018
ಸಾಕ್ಷ್ಯ ಇಂಗ್ಲಿಷ್‌ನಲ್ಲೇ ದಾಖಲಿಸಲು ‌ಆದೇಶ

ಸುತ್ತೋಲೆ
ಸಾಕ್ಷ್ಯ ಇಂಗ್ಲಿಷ್‌ನಲ್ಲೇ ದಾಖಲಿಸಲು ‌ಆದೇಶ

22 Apr, 2018
ಹೆಡ್‌ಕಾನ್‌ಸ್ಟೆಬಲ್‌ ಬಂಧನ

ಕರ್ತವ್ಯಲೋಪ
ಹೆಡ್‌ಕಾನ್‌ಸ್ಟೆಬಲ್‌ ಬಂಧನ

22 Apr, 2018
‘ಬಿಜೆಪಿ ಅರಿಯಲು ಕಾಮನ್‌ಸೆನ್ಸ್‌ ಸಾಕು’: ಪ್ರಕಾಶ್ ರೈ

ಖಾಸಗಿ ಭದ್ರತೆ
‘ಬಿಜೆಪಿ ಅರಿಯಲು ಕಾಮನ್‌ಸೆನ್ಸ್‌ ಸಾಕು’: ಪ್ರಕಾಶ್ ರೈ

22 Apr, 2018