ಮೇಲುಕೋಟೆ

ಹೊಸವರ್ಷ: ಚೆಲುವನಾರಾಯಣನ ದರ್ಶನಕ್ಕೆ ಮುಗಿಬಿದ್ದ ಭಕ್ತರು

ನಿರೀಕ್ಷೆಗೂ ಮೀರಿ ಭಕ್ತರು ಬಂದಿದ್ದರಿಂದ ಬೆರಳೆಣಿಕೆಯಷ್ಟಿದ್ದ ಮೇಲುಕೋಟೆ ಠಾಣೆಯ ಪೊಲೀಸರು ವಾಹನ ದಟ್ಟಣೆ ನಿಯಂತ್ರಿಸಲು ಪರದಾಡಿದರು.

ಮೇಲುಕೋಟೆ: ಹೊಸ ವರ್ಷದ ಮೊದಲ ದಿನವಾದ ಸೋಮವಾರ ಚೆಲುವನಾರಾಯಣಸ್ವಾಮಿ ದರ್ಶನಕ್ಕೆ ಸಾವಿರಾರು ಭಕ್ತರು ಬಂದಿದ್ದರು. ಇಲ್ಲಿಯ ಎಲ್ಲ ದೇವಾಲಯಗಳು, ಕಲ್ಯಾಣಿಗಳ ಬಳಿ ಜನಸಂದಣಿ ಕಂಡು ಬಂತು. ಚೆಲುವನಾರಾಯಣ ಸ್ವಾಮಿಯ ದರ್ಶನಕ್ಕೆ ಸುಡು ಬಿಸಿಲನ್ನೂ ಲೆಕ್ಕಿಸದೇ ಸರತಿಸಾಲಿನಲ್ಲಿ ಗಂಟೆಗಟ್ಟಲೆ ಕಾದು ನಿಂತರು.

ನಿರೀಕ್ಷೆಗೂ ಮೀರಿ ಭಕ್ತರು ಬಂದಿದ್ದರಿಂದ ಬೆರಳೆಣಿಕೆಯಷ್ಟಿದ್ದ ಮೇಲುಕೋಟೆ ಠಾಣೆಯ ಪೊಲೀಸರು ವಾಹನ ದಟ್ಟಣೆ ನಿಯಂತ್ರಿಸಲು ಪರದಾಡಿದರು. ಮಧ್ಯಾಹ್ನವಂತೂ ದೇವಾಲಯದ ಬಳಿ ದ್ವಿಚಕ್ರವಾಹಗಳ ದಟ್ಟಣೆ ಉಂಟಾಗಿ ಕೆಲಕಾಲ ಗೊಂದಲದ ವಾತಾವರಣ ಉಂಟಾಗಿತ್ತು.

ಭಕ್ತರು ಮೇಲುಕೋಟೆಯ ಕಲ್ಯಾಣಿಯಲ್ಲಿ ಪೂಜೆ ಸಲ್ಲಿಸಿ ಯೋಗನರಸಿಂಹಸ್ವಾಮಿ ಮತ್ತು ಚೆಲುವ ನಾರಾಯಣಸ್ವಾಮಿ ದೇವಾಲಯಕ್ಕೆ ಬಂದು ಗೋವಿಂದ ಗೋವಿಂದ ಎಂದು ಘೋಷ ಮೊಳಗಿಸುತ್ತ ದೇವರದರ್ಶನ ಪಡೆದರು. ದೇವಾಲಯದ ಬಳಿಗೆ ಬೈಕ್ ಸವಾರರಿಗೆ ಮಾತ್ರ ಅವಕಾಶ ನೀಡಿ, ಇತರ ವಾಹನಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ಮೇಲುಕೋಟೆ ಎಸ್.ಐ ಮೋಹನ್, ಎಎಸ್‌ಐ ಮಲ್ಲಪ್ಪ ನೇತೃತ್ವದಲ್ಲಿ ಪೊಲೀಸ್ ಭದ್ರತೆ ಮಾಡಲಾಗಿತ್ತು. ದೇವಾಲಯದ ಹಿರಿಯ ಗುಮಾಸ್ತ ಶ್ರೀರಂಗರಾಜನ್ , ಭಗವಾನ್ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು
‘ಧರ್ಮ ಬಾಂಧವ್ಯದ ಸೇತುವೆಯಾಗಲಿ’

ಭಾರತೀನಗರ
‘ಧರ್ಮ ಬಾಂಧವ್ಯದ ಸೇತುವೆಯಾಗಲಿ’

17 Mar, 2018
ಇಂದಿರಾ ಕ್ಯಾಂಟೀನ್‍ಗೆ ಡಿ.ಸಿ ಭೇಟಿ: ಪರಿಶೀಲನೆ

ಮಂಡ್ಯ
ಇಂದಿರಾ ಕ್ಯಾಂಟೀನ್‍ಗೆ ಡಿ.ಸಿ ಭೇಟಿ: ಪರಿಶೀಲನೆ

17 Mar, 2018
ಉತ್ತಮ ರಾಸುಗಳಿಗೆ ಬಹುಮಾನ ವಿತರಣೆ

ಪಾಂಡವಪುರ
ಉತ್ತಮ ರಾಸುಗಳಿಗೆ ಬಹುಮಾನ ವಿತರಣೆ

17 Mar, 2018

ಮಂಡ್ಯ
ಜಿಲ್ಲೆಯಲ್ಲಿ ₹ 2,277 ಕೋಟಿ ಸಾಲ ವಿತರಣೆ

'ಜಿಲ್ಲೆಯಾದ್ಯಂತ ಎಲ್ಲಾ ಬ್ಯಾಂಕ್‌ಗಳು ವಿವಿಧ ಕ್ಷೇತ್ರಗಳಲ್ಲಿ ₹ 2,277 ಕೋಟಿ ಸಾಲ ವಿತರಣೆ ಮಾಡಿದ್ದು ಶೇ 85 ರಷ್ಟು ಪ್ರಗತಿ ಸಾಧಿಸ ಲಾಗಿದೆ’ ಎಂದು...

17 Mar, 2018

ನಾಗಮಂಗಲ
ಚಲುವರಾಯಸ್ವಾಮಿ ವಿರುದ್ಧ ಆಕ್ರೋಶ

ಶಾಸಕ ಚಲುವರಾಯಸ್ವಾಮಿ ತಮ್ಮನ್ನು ತಾವೇ ಅಭಿವೃದ್ಧಿಯ ಹರಿಕಾರ ಎಂದು ಹೋದಲ್ಲಿ ಬಂದಲ್ಲಿ ಹೇಳಿಕೊಳ್ಳುತ್ತಿದ್ದಾರೆ. ಅವರಿಗೆ ಅವರೇ ಬಿರುದು ಕೊಟ್ಟುಕೊಂಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅಭಿವೃದ್ಧಿ ಹರಿಕಾರ...

17 Mar, 2018