ಮಧುಗಿರಿ

ವಿಜೃಂಭಣೆಯ ಜಾತ್ರೆ, ಸಿಡಿ ಉತ್ಸವ

ಜಾತ್ರೆಯ ಅಂಗಡಿ ಸಾಲಿನಲ್ಲಿ ತಿಂಡಿ-ತಿನಿಸುಗಳ ಭರ್ಜರಿ ವ್ಯಾಪಾರವಾಯಿತು. ಮಕ್ಕಳು ಆಟದ ಸಾಮಾಗ್ರಿಗಳನ್ನು ಉತ್ಸಾಹದಿಂದ ಖರೀದಿಸುತ್ತಿದ್ದರು. ತುಮುಲ್ ವತಿಯಿಂದ ಮಜ್ಜಿಗೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು.

ಮಧುಗಿರಿ ತಾಲ್ಲೂಕು ಕೊಂಡವಾಡಿ ಚೌಡೇಶ್ವರಿ ಅಮ್ಮನವರ ದೊಡ್ಡ ಜಾತ್ರೆ ಮಹೋತ್ಸವ ಹಾಗೂ ಸಿಡಿ ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಭಕ್ತರು

ಮಧುಗಿರಿ: ತಾಲ್ಲೂಕು ಕೊಂಡವಾಡಿ ಚೌಡೇಶ್ವರಿ ಅಮ್ಮನವರ ದೊಡ್ಡ ಜಾತ್ರೆ ಮಹೋತ್ಸವ ಹಾಗೂ ಸಿಡಿ ಉತ್ಸವ ಕಾರ್ಯಕ್ರಮಕ್ಕೆ ತಾಲ್ಲೂಕು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಜಮಾಯಿಸಿದ್ದರು.

ಚೌಡೇಶ್ವರಿ ದೇವಿಯ ಉತ್ಸವಕ್ಕೆ ರಂಗಾಪುರ, ತಿಪ್ಪನಹಳ್ಳಿ, ಗೌಡಹಟ್ಟಿ, ಯಲ್ಕೂರು, ಹೊಸಕೋಟೆ ರಂಗಾಪುರ, ಹಳ್ಳಿಮರದಹಳ್ಳಿ ಹಾಗೂ ಹುಣಸವಾಡಿ ಗ್ರಾಮಗಳಿಂದ ದೇವಿಯ ಉತ್ಸವ ಮೂರ್ತಿಗಳನ್ನು ಕೊಂಡವಾಡಿ ಗ್ರಾಮದ ದೇವಾಲಯಕ್ಕೆ ಕರೆ ತಂದು ವಿಶೇಷ ಪೂಜೆ ಮಾಡಲಾಯಿತು.

ಮಹಿಳೆಯರು ಆರತಿಯನ್ನು ತಲೆಯ ಮೇಲೆ ಹೊತ್ತು ಸರದಿ ಸಾಲಿನಲ್ಲಿ ನಿಂತು ದೇವಿಗೆ ಪೂಜೆ ಸಲ್ಲಿಸಿದರು. ಮಧ್ಯಾಹ್ನ 3 ಗಂಟೆಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಾಲಯದ ಆವರಣದಲ್ಲಿ ಜಮಾಯಿಸಿ, ಸಿಡಿ ಉತ್ಸವವನ್ನು ಕಣ್ತುಂಬಿಕೊಂಡರು.

ಜಾತ್ರೆಯ ಅಂಗಡಿ ಸಾಲಿನಲ್ಲಿ ತಿಂಡಿ-ತಿನಿಸುಗಳ ಭರ್ಜರಿ ವ್ಯಾಪಾರವಾಯಿತು. ಮಕ್ಕಳು ಆಟದ ಸಾಮಾಗ್ರಿಗಳನ್ನು ಉತ್ಸಾಹದಿಂದ ಖರೀದಿಸುತ್ತಿದ್ದರು. ತುಮುಲ್ ವತಿಯಿಂದ ಮಜ್ಜಿಗೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ದೇವಾಲಯ ಸಮಿತಿ ಹಾಗೂ ದಾನಿಗಳಿಂದ ಪ್ರಸಾದ ವಿತರಿಸಲಾಯಿತು.

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕೊರಟಗೆರೆ ಕ್ಷೇತ್ರದ ಪಿ.ಆರ್.ಸುಧಾಕರ್ ಲಾಲ್, ರಾಜ್ಯ ಕೌಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುರಳೀಧರ ಹಾಲಪ್ಪ, ಎಲೆರಾಂಪುರದ ಹನುಮಂತನಾಥ ಸ್ವಾಮೀಜಿ, ತುಮುಲ್ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಸ್.ಆರ್.ಶಾಂತಲಾ, ಕೊಂಡವಾಡಿ ತಿಮ್ಮಯ್ಯ, ಜಿ.ಜೆ.ರಾಜಣ್ಣ, ಮಂಜುಳಾ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಎಂ.ವಿ.ವೀರಭದ್ರಯ್ಯ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಇಂದಿರಾ, ದೇವಾಲಯ ಸಮಿತಿಯ ಗೌರವಾಧ್ಯಕ್ಷ ಕೃಷ್ಣಮೂರ್ತಿ, ಕಾರ್ಯದರ್ಶಿ ರವಿಕುಮಾರ್, ಉಪಾಧ್ಯಕ್ಷರಾದ ಕೆ.ಸಿ.ನಾಗರಾಜಯ್ಯ, ಬಿ.ಸಿ.ಮಂಜುನಾಥ್, ಡಿ.ಈಶ್ವರಯ್ಯ, ಬಿ.ಎಸ್.ಶ್ರೀನಿವಾಸ್, ಎನ್.ಎನ್.ಚೌಡಪ್ಪ, ಎನ್.ಎಸ್.ಯು.ಐ ಅಧ್ಯಕ್ಷ ಸುಮುಖ್ ಚಂದ್ರಶೇಖರ್, ಪ್ರಧಾನ ಅರ್ಚಕ ಜಯರಾಮ್, ಧಾರ್ಮಿಕ ಎಂ.ಜಿ.ಶ್ರೀವಾಸ ಮೂರ್ತಿ ಉಪಸ್ಥಿತರಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಮಳೆಗಾಳಿಗೆ ತುರುವೇಕೆರೆ ತತ್ತರ

ತುರುವೇಕೆರೆ
ಮಳೆಗಾಳಿಗೆ ತುರುವೇಕೆರೆ ತತ್ತರ

25 Apr, 2018

ತಿಪಟೂರು
ತಿಪಟೂರು: ಈಗ ತೀವ್ರ ಪೈಪೋಟಿ ಕಣ

ಈ ವಿಧಾನಸಭಾ ಕ್ಷೇತ್ರದಲ್ಲಿ ಹಿಂದೆ ಎಂದೆಂದೂ ಕಾಣದಷ್ಟು ಪಕ್ಷೇತರರ ಸ್ಪರ್ಧೆ ಕಂಡು ಬರುತ್ತಿದ್ದು, ಅವರೆಷ್ಟು ಮತ ಗಳಿಸುತ್ತಾರೆ ಅಥವಾ ಯಾವ ಅಧಿಕೃತ ಅಭ್ಯರ್ಥಿಗಳ ಕಾಲೆಳೆಯುತ್ತಾರೆ...

25 Apr, 2018
186 ಮಂದಿ ಉಮೇದುವಾರಿಕೆ ಸಲ್ಲಿಕೆ

ತುಮಕೂರು
186 ಮಂದಿ ಉಮೇದುವಾರಿಕೆ ಸಲ್ಲಿಕೆ

25 Apr, 2018

ತುಮಕೂರು
100ರಷ್ಟು ಮತದಾನಕ್ಕೆ ಪ್ರೇರೇಪಿಸಿ

ಶೇ 100ರಷ್ಟು ಮತದಾನ ನಡೆಯಲು ಪ್ರೇರಕರು ಮತದಾರನ ಬಳಿಗೆ ಹೋಗಿ ಪ್ರೇರೇಪಿಸಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಅನಿಸ್ ಕಣ್ಮಣಿ ಜಾಯ್ ಸಲಹೆ...

25 Apr, 2018

ಕುಣಿಗಲ್
ರೈತ ಸಂಘದ ಅಭ್ಯರ್ಥಿ ನಾಮಪತ್ರ

ಕುಣಿಗಲ್: ತಾಲ್ಲೂಕಿನ ನೀರಾವರಿ ಮತ್ತು ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಮತ್ತು ಅಭಿವೃದ್ಧಿಗಾಗಿ ರೈತ ಸಂಘದ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಆನಂದ್ ಪಟೇಲ್ ಮನವಿ ಮಾಡಿದರು.

24 Apr, 2018