ಭೀಮಾ–ಕೋರೆಗಾಂವ್‌ ಹಿಂಸಾಚಾರಕ್ಕೆ ಆಕ್ರೋಶ

ಮಹಾರಾಷ್ಟ್ರ ಬಂದ್‌: ಠಾಣೆಯಲ್ಲಿ ಮುಚ್ಚಿದ ಶಾಲೆಗಳು, ಬಸ್‌ಗಳಿಗೆ ಕಲ್ಲು ತೂರಿದ ಪ್ರತಿಭಟನಾಕಾರರು

ಮುಂಬೈ, ಪುಣೆ ಸೇರಿ ಹಲವು ನಗರಗಳಲ್ಲಿ ಪ್ರತಿಭಟನಾಕಾರರು ಬಸ್‌ ಹಾಗೂ ಇತರ ವಾಹನಗಳಿಗೆ ಕಲ್ಲು ತೂರಿದ್ದಾರೆ. ಠಾಣೆಯಲ್ಲಿ ನಾಲ್ಕು ಮಂದಿ ಪ್ರಯಾಣಿಕರು ಗಾಯಗೊಂಡಿರುವುದಾಗಿ..

ಮಹಾರಾಷ್ಟ್ರ ಬಂದ್‌: ಠಾಣೆಯಲ್ಲಿ ಮುಚ್ಚಿದ ಶಾಲೆಗಳು, ಬಸ್‌ಗಳಿಗೆ ಕಲ್ಲು ತೂರಿದ ಪ್ರತಿಭಟನಾಕಾರರು

ಮುಂಬೈ: ಭೀಮಾ–ಕೋರೆಗಾಂವ್‌ ಗ್ರಾಮದಲ್ಲಿನ ಹಿಂಸಾಚಾರ ತಡೆಯಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ದಲಿತ ಸಂಘಟನೆಗಳು ಬುಧವಾರ ಮಹಾರಾಷ್ಟ್ರ ಬಂದ್‌ಗೆ ಕರೆ ನೀಡಿವೆ. ಹಲವು ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮುಂಬೈ, ಪುಣೆ ಸೇರಿ ಹಲವು ನಗರಗಳಲ್ಲಿ ಪ್ರತಿಭಟನಾಕಾರರು ಬಸ್‌ ಹಾಗೂ ಇತರ ವಾಹನಗಳಿಗೆ ಕಲ್ಲು ತೂರಿದ್ದಾರೆ. ಠಾಣೆಯಲ್ಲಿ ನಾಲ್ಕು ಮಂದಿ ಪ್ರಯಾಣಿಕರು ಗಾಯಗೊಂಡಿರುವುದಾಗಿ ಎಎನ್‌ಐ ವರದಿ ಮಾಡಿದೆ.

ಮೆಟ್ರೊ, ರೈಲು ಹಾಗೂ ಪೂರ್ವ ಎಕ್ಸ್‌ಪ್ರೆಸ್‌ ಹೆದ್ದಾರಿ ತಡೆ ನಡೆಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಎಸಿ ಲೋಕಲ್‌ ರೈಲು ಸಂಚಾರ ರದ್ದು ಪಡಿಸಲಾಗಿದೆ. ಕೆಲ ಭಾಗಗಳಲ್ಲಿ ಪ್ರತಿಭಟನಾಕಾರರು ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದ್ದಾರೆ.

ಭದ್ರತಾ ಕಾರಣಗಳಿಂದಾಗಿ ಶಾಲಾ ಬಸ್‌ ಮಾಲೀಕರ ಸಂಘ 40 ಸಾವಿರ ಶಾಲಾ ಬಸ್‌ಗಳನ್ನು ರಸ್ತೆಗಿಳಿಸದಿರಲು ನಿರ್ಧರಿಸಿವೆ. ಮಹಾರಾಷ್ಟ್ರದಲ್ಲಿ ಪ್ರತಿಭಟನೆ ಹಿನ್ನೆಲೆಯಲ್ಲಿ ದೆಹಲಿಯ ಮಹಾರಾಷ್ಟ್ರ ಸದನಕ್ಕೆ ಭದ್ರತೆ ಹೆಚ್ಚಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಜ.4ರ ವರೆಗೂ ಠಾಣೆಯಲ್ಲಿ ಸೆಕ್ಷನ್ 144 ಅನ್ವಯ ನಿ‍‍‍ಷೇಧಾಜ್ಞೆ ಜಾರಿಯಲ್ಲಿದೆ. 

ಪುಣೆ ಜಿಲ್ಲೆಯ ಭೀಮಾ–ಕೋರೆಗಾಂವ್‌ ಯುದ್ಧದ 200ನೇ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಹಿಂಸಾಚಾರಕ್ಕೆ ಮಹಾರಾಷ್ಟ್ರದಾದ್ಯಂತ ಆಕ್ರೋಶ ಭುಗಿಲೆದ್ದಿದೆ. ವಿವಿಧೆಡೆ ದಲಿತ ಸಂಘಟನೆಗಳು ಮಂಗಳವಾರವೂ ಪ್ರತಿಭಟನೆ ನಡೆಸಿದ್ದವು.

ಭಾರಿಪಾ ಬಹುಜನ ಮಹಾಸಂಘದ (ಬಿಬಿಎಂ) ಮುಖಂಡ ಪ್ರಕಾಶ್‌ ಅಂಬೇಡ್ಕರ್‌  ಕರೆ ನೀಡಿದ್ದ ಬಂದ್‌ಗೆ ಮಹಾರಾಷ್ಟ್ರ ಪ್ರಜಾಸತ್ತಾತ್ಮಕ ಒಕ್ಕೂಟ, ಎಡಪಂಥೀಯ ಸಂಘಟನೆಗಳು ಸೇರಿದಂತೆ 250ಕ್ಕೂ ಹೆಚ್ಚು ಸಂಘ–ಸಂಸ್ಥೆಗಳು ಮಂಗಳವಾರ ಬೆಂಬಲ ವ್ಯಕ್ತಪಡಿಸಿದ್ದವು.

(ಭೀಮಾ-ಕೊರೆಗಾಂವ್ ವಿಜಯೋತ್ಸವದ ವೇಳೆ ಹಿಂಸಾಚಾರ ಖಂಡಿಸಿ ಮಂಡ್ಯದಲ್ಲಿ ದಲಿತ ಸಂಘಟನೆಗಳ ಪ್ರತಿಭಟನೆ)

Comments
ಈ ವಿಭಾಗದಿಂದ ಇನ್ನಷ್ಟು
ಶಿವಸೇನಾ ನಾಯಕ ಸಚಿನ್‌ ಸಾವಂತ್‌ ಗುಂಡಿಕ್ಕಿ ಹತ್ಯೆ

ಮುಂಬೈ
ಶಿವಸೇನಾ ನಾಯಕ ಸಚಿನ್‌ ಸಾವಂತ್‌ ಗುಂಡಿಕ್ಕಿ ಹತ್ಯೆ

23 Apr, 2018
ಚಾಲಕ ಮುಸ್ಲಿಂ ಎಂಬ ಕಾರಣಕ್ಕೆ ಓಲಾ ಕ್ಯಾಬ್ ರದ್ದುಪಡಿಸಿದ ವಿಎಚ್‌ಪಿ ಸದಸ್ಯ: ಟ್ವಿಟರ್‌ನಲ್ಲಿ ವ್ಯಾಪಕ ಚರ್ಚೆ

ಕೇಂದ್ರ ಸಚಿವರು ಫಾಲೋವರ್ಸ್‌!
ಚಾಲಕ ಮುಸ್ಲಿಂ ಎಂಬ ಕಾರಣಕ್ಕೆ ಓಲಾ ಕ್ಯಾಬ್ ರದ್ದುಪಡಿಸಿದ ವಿಎಚ್‌ಪಿ ಸದಸ್ಯ: ಟ್ವಿಟರ್‌ನಲ್ಲಿ ವ್ಯಾಪಕ ಚರ್ಚೆ

23 Apr, 2018
2019ರಿಂದ ಸುರಕ್ಷಿತ ನೋಂದಣಿ ಫಲಕ

ನವದೆಹಲಿ
2019ರಿಂದ ಸುರಕ್ಷಿತ ನೋಂದಣಿ ಫಲಕ

23 Apr, 2018
ತಜ್ಞರ ಜತೆ ಸಭಾಪತಿ ನಾಯ್ಡು ಸಮಾಲೋಚನೆ

ನವದೆಹಲಿ
ತಜ್ಞರ ಜತೆ ಸಭಾಪತಿ ನಾಯ್ಡು ಸಮಾಲೋಚನೆ

23 Apr, 2018
ಎನ್‌ಕೌಂಟರ್‌ಗೆ  16 ನಕ್ಸಲರು ಬಲಿ

ಮುಂಬೈ
ಎನ್‌ಕೌಂಟರ್‌ಗೆ 16 ನಕ್ಸಲರು ಬಲಿ

23 Apr, 2018