ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ.10ಕ್ಕೆ ಅಮಿತ್ ಶಾ ಹೊಳಲ್ಕೆರೆಗೆ, ಒಂದು ಲಕ್ಷ ಜನರ ನಿರೀಕ್ಷೆ : ಎಂ.ಚಂದ್ರಪ್ಪ.

Last Updated 3 ಜನವರಿ 2018, 9:28 IST
ಅಕ್ಷರ ಗಾತ್ರ

ಭರಮಸಾಗರ: ಜ.10ರಂದು ಹೊಳಲ್ಕೆರೆಯಲ್ಲಿ ನಡೆಯಲಿರುವ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪಾಲ್ಗೊಳ್ಳಲಿದ್ದು, ಈ ಕಾರ್ಯಕ್ರಮದಲ್ಲಿ 1ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಹೊಂದಲಾಗಿದೆ ಎಂದು ಮಾಜಿ ಶಾಸಕ ಎಂ.ಚಂದ್ರಪ್ಪ ಹೇಳಿದ್ದಾರೆ. ಇಲ್ಲಿನ ಪ್ರವಾಸಿ ಮಂದಿರದ ಆವರಣದಲ್ಲಿ ಮಂಗಳವಾರ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ರಾಷ್ಟ್ರೀಯ ಅಧ್ಯಕ್ಷ ಅಮೀತ್ ಶಾ ರಾಜ್ಯದಲ್ಲಿ ನಡೆಯುತ್ತಿರುವ ಯಾತ್ರೆಯಲ್ಲಿ ಪ್ರಥಮವಾಗಿ ಹೊಳಲ್ಕೆರೆಯಲ್ಲಿ ಪಾಲ್ಗೊಳ್ಳಲು ತಮ್ಮ ಒಲವು ತೋರಿರುವುದು ನಮ್ಮೆಲ್ಲರಿಗೆ ಹೆಮ್ಮೆ ತಂದಿದೆ. ಅದರಂತೆ ಈ ಕಾರ್ಯಕ್ರಮಕ್ಕೆ ಅತೀ ಹೆಚ್ಚಿನ ಜನರು ಸೇರಿ ಯಶಸ್ವಿಗೊಳಿಸಲು ಎಲ್ಲಾ ಕಾರ್ಯಕರ್ತರಲ್ಲಿ ಹುರುಪು ಮೂಡಿಸಲಾಗುತ್ತಿದೆ. ಅಮೀತ್ ಶಾ ಅವರಿಗೆ ಅಭೂತಪೂರ್ವ ಸ್ವಾಗತಕ್ಕೆ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

ಕಳೆದ 5 ದಿನಗಳಿಂದ ಕ್ಷೇತ್ರದಾದ್ಯಂತ ಪ್ರವಾಸ ಕೈಗೊಂಡು ಪ್ರಚಾರ ಕಾರ್ಯ ಮಾಡಲಾಗುತ್ತಿದೆ ಒಟ್ಟು 5ಗುಂಪುಗಳ ಕಾರ್ಯಕರ್ತರ ಪಡೆಯನ್ನು ರಚಿಸಲಾಗಿದ್ದು, ಅವುಗಳಿಗೆ ಒಂದು ಸೂಕ್ತ ಹೆಸರನ್ನು ಇಡಲಾಗಿದೆ. ಭರಮಸಾಗರದ ಪಡೆ ಹೆಸರು ರಾಜರ ಪಡೆ ಎಂದು ಹೆಸರಿಸಲಾಗಿದೆ ಒಂದೊಂದು ಪಡೆಯಿಂದಲೂ 20ಸಾವಿರ ಜನರನ್ನು ಒಟ್ಟುಗೂಡಿಸಲು ಆದೇಶಿಸಲಾಗಿದೆ, ಪ್ರವಾಸ ಹೋದಲ್ಲೆಲ್ಲಾ ಉತ್ತಮ ಪ್ರತಿಕ್ರಿಯೆ, ಬಾರೀ ಸಂಖ್ಯೆಯಲ್ಲಿ ಜನರು ಸೇರುತ್ತಲಿದ್ದಾರೆ. ಇದು ನಮ್ಮ ಮತ್ತು ಜನತೆಯ ಮೇಲಿನ ವಿಶ್ವಾಸಕ್ಕೆ ಸಾಕ್ಷಿಯಾಗಿದೆ ಎಂದರು.

ರಾಷ್ಟ್ರೀಯ ಅಧ್ಯಕ್ಷ ಅಮೀತ್ ಶಾ ಹಾಗೂ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಬಳಿ ಜ.10 ಪರಿವರ್ತನಾ ಯಾತ್ರೆ ಸಮಯದಲ್ಲಿ ಈ ಭಾಗದ ಬರಡು ಪ್ರದೇಶಗಳ ಬಗ್ಗೆ ಮನವರಿಕೆ ಮಾಡಲಾಗುವುದು. ಎಲ್ಲಾ ತೋಟಗಳು ಒಣಗಿ ಹೋಗಿದ್ದು ಹಾಗು ಬತ್ತಿ ನಿಂತ ಕೆರೆಗಳಿಗೆ ನೀರುಣಿಸಿ ಮರುಪೂರ್ಣ ಮಾಡುವ ಬಗ್ಗೆ ಈ ಭಾಗದ ರೈತರ ಸಂಕಷ್ಟಗಳ ಬಗ್ಗೆ ಕಾಂಗ್ರೆಸ್ ಆಶ್ವಾಸನೆ ನೀಡಿ ಈಡೇರಿಸದೇ ಇರುವ ಬಗ್ಗೆ ಮನವರಿಕೆ ಮಾಡಿ ರೈತರಿಂದ ಅಹವಾಲು ಕೊಡಿಸಲಾಗುವುದು.

ಇಲ್ಲಿಯ ಜನರ ಒಟ್ಟಾರೆ ಸಮಸ್ಯೆಗಳನ್ನು ನಮ್ಮ ಮಖಂಡರ ಮುಂದೆ ತರಲಾಗುವುದು. ಅಭಿವೃದ್ಧಿ ವಂಚಿತವಾಗಿರುವುದನ್ನು ಅವರ ಗಮನಕ್ಕೆ ತರಲಾಗುವುದು ಎಂದು ಹೇಳಿದರು. ಈ ಭಾಗದ ಜನರ ಸಂಕಷ್ಟಗಳನ್ನು ಈಡೇರಿಸುವ ಕಾಲ ಸನ್ನಿಹಿತವಾಗುವುದು ಎಲ್ಲರ ವಿಶ್ವಾಸವನ್ನು ಪಡೆದಿರುವ ವಿಶ್ವಾಸ ನನಗಿದೆ. 25 ವರ್ಷ ನನ್ನ ರಾಜಕೀಯ ಒಡನಾಟದಲ್ಲಿ ಉತ್ತಮ ಸಂಬಂದ ಗಟ್ಟಿಯಾಗಿದೆ ನಿಮ್ಮ ಅಭಿಮಾನಕ್ಕೆ ಋಣಿಯಾಗಿರುತ್ತೇನೆ ಎಂದರು.

ಬಿಜೆಪಿ ಚಿತ್ರದುರ್ಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್ ಮಾತನಾಡಿ, ಕಾರ್ಯಕರ್ತರು ಹೆಚ್ಚಿನ ಕೆಲಸ ನಿರ್ವಹಿಸಿ ಈ ದಿನದಿಂದಲೇ ಮನೆ ಮನೆಗೆ ಹೋಗಿ ಪ್ರತೀ ಮನೆಯಿಂದ ಕನಿಷ್ಟ ಒಬ್ಬರನ್ನಾದರೂ ಹೊಳಲ್ಕೆರೆಯಲ್ಲಿ ನಡೆಯಲಿರುವ ಪರಿವರ್ತನಾ ಯಾತ್ರೆಗೆ ಕರೆತರುವ ಕೆಲಸ ಮಾಡಬೇಕು. ಈ ಮೂಲಕ ನಮ್ಮ ಬಲವನ್ನು ರಾಷ್ಟ್ರೀಯ ಅಧ್ಯಕ್ಷ ಅಮೀತ್ ಶಾ ಅವರಿಗೆ ತೋರಿಸಬೇಕು ಎಂದು ಹೇಳಿದರು.

ಮಂಡಲ ಅಧ್ಯಕ್ಷ ಸಾಮಿಲ್ ಶಿವಣ್ಣ, ಜಿಲ್ಲಾ ಪಂಚಾಯ್ತಿ ಸದಸ್ಯ ಡಿ.ವಿ.ಶರಣಪ್ಪ, ಎಪಿಎಂಸಿ ಅಧ್ಯಕ್ಷ ಕೋಗುಂಡೆ ಮಂಜುನಾಥ್, ವಿರೂಪಾಕ್ಷಪ್ಪ, ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಕಲ್ಲೇಶ್, ಶೇಖರಪ್ಪ, ನಾಗೇಂದ್ರಪ್ಪ, ಕೊಳಹಾಳ್ ಶರಣಪ್ಪ, ಮಾಜಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಎನ್.ಟಿ.ರಾಜಕುಮಾರ್, ಗ್ರಾಮ ಪಂಚಾಯ್ತಿ ಅಧ್ಯಕ್ಷ ಸಂತೋಷ್, ಹೋಬಳಿಯಾದ್ಯಂತ ಬಂದ ಕಾರ್ಯಕರ್ತರು, ಮಂಡಲ ಕಾರ್ಯಕಾರಿ ಸಮಿತಿ ಸದಸ್ಯರು, ಸಿರಿಗೆರೆ ಮೋಹನ್, ಸಿ.ಟಿ.ಮಹಂತೇಶ್, ಸಿದ್ದಲಿಂಗಪ್ಪ, ಎನ್.ಟಿ.ಬಸವರಾಜ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT