ಚಿತ್ರದುರ್ಗ

ಸೂಕ್ತ ಸಮಯ ನಿರ್ವಹಣೆಯಿಂದ ಒತ್ತಡರಹಿತ ಕೆಲಸ

ಕಳೆಯುವ ಸಮಯ ಸಮರ್ಪಕವಾಗಿ ಬಳಕೆಯಾಗಬೇಕು. ಸಮಯ ನಮ್ಮನ್ನು ಎಲ್ಲಿಯೋ ಕರೆದುಕೊಂಡು ಹೋಗಿ ನಿಲ್ಲಿಸುವಂತಾಗಬಾರದು. ಅನಗತ್ಯ­ವಿಚಾರಗಳಿಗೆ ಗಮನ ಕೊಡದೇ, ಸಮಯವೇ ಜೀವನ.

ಚಿತ್ರದುರ್ಗ ಜಿಲ್ಲೆಯ ಪ್ರೌಢಶಾಲಾ ಮುಖ್ಯ ಶಿಕ್ಷಕರಿಗಾಗಿ ತರಾಸು ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಶೈಕ್ಷಣಿಕ ಆಡಳಿತ ಕಾರ್ಯಾಗಾರದಲ್ಲಿ ಡಿಡಿಪಿಐ ರೇವಣಸಿದ್ದಪ್ಪ ಮಾತನಾಡಿದರು.

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಪ್ರೌಢಶಾಲಾ ಮುಖ್ಯ ಶಿಕ್ಷಕರಿಗಾಗಿ ತರಾಸು ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಶೈಕ್ಷಣಿಕ ಆಡಳಿತ ಕಾರ್ಯಾಗಾರದಲ್ಲಿ ಡಿಡಿಪಿಐ ರೇವಣಸಿದ್ದಪ್ಪ ಮಾತನಾಡಿದರು.ಎಂದು ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಪಿ.ವಿ. ಸವಿತಾ ಸಲಹೆ ನೀಡಿದರು.

ತರಾಸು ರಂಗಮಂದಿರದಲ್ಲಿ ಮಂಗಳವಾರ ಸಾರ್ವಜನಿಕ ಶಿಕ್ಷಣ ಇಲಾಖೆ, ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್, ಇನ್ನರ್‌ವೀಲ್ ಕ್ಲಬ್ ಚಿತ್ರದುರ್ಗ ಫೋರ್ಟ್ ಸಹಯೋಗದಲ್ಲಿ ಜಿಲ್ಲೆಯ ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ಆಯೋಜಿಸಿದ್ದ ಒಂದು ದಿನದ ಶೈಕ್ಷಣಿಕ ಆಡಳಿತ ಕಾರ್ಯಾಗಾರದಲ್ಲಿ ‘ಸಮಯ ನಿರ್ವಹಣೆ ಮತ್ತು ಕೌಶಲ’ ಕುರಿತು ಉಪನ್ಯಾಸ ನೀಡಿದರು.

ಕಳೆಯುವ ಸಮಯ ಸಮರ್ಪಕವಾಗಿ ಬಳಕೆಯಾಗಬೇಕು. ಸಮಯ ನಮ್ಮನ್ನು ಎಲ್ಲಿಯೋ ಕರೆದುಕೊಂಡು ಹೋಗಿ ನಿಲ್ಲಿಸುವಂತಾಗಬಾರದು. ಅನಗತ್ಯ­ವಿಚಾರಗಳಿಗೆ ಗಮನ ಕೊಡದೇ, ಸಮಯವೇ ಜೀವನ. ಜೀವನವೇ ಸಮಯ ಎಂಬ ರೀತಿ ನಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಯಾವುದೇ ಕೆಲಸ ಮಾಡುವಾಗ ಮೊದಲು ಯೋಜನೆ ರೂಪಿಸಿ. ಅದಕ್ಕೆ ತಕ್ಕಂತೆ ಸಮಯವನ್ನು ಹಂಚಿಕೆ ಮಾಡಿ. ಪರಿಶ್ರಮ ಮತ್ತು ಸಮಯ ಸೇರಿಸುವುದೇ ನಿಜವಾದ ಕೌಶಲ. ಇದರಿಂದ ಯಶಸ್ಸು ಗಳಿಸಲು ಸಾಧ್ಯ ಎಂದರು.

ಸಮಯಕ್ಕೆ ಬಡವ-ಶ್ರೀಮಂತ, ಮೇಲು-ಕೀಳು ಎನ್ನುವ ವ್ಯತ್ಯಾಸವಿಲ್ಲ. ಎಲ್ಲರಿಗೂ ದಿನಕ್ಕೆ 24 ಗಂಟೆ ಸಮಯ ಸಿಗುವುದು. ಈ ಸಮಯವನ್ನು ಸದ್ಭಳಕೆ ಮಾಡಿಕೊಳ್ಳಲು ಯೋಜನೆ ರೂಪಿಸಬೇಕು. ಇಂಥ ಯೋಜನೆಯಿಂದ ಕೇವಲ ಸಮಯ ಪಾಲನೆ ಮಾತ್ರವಲ್ಲ. ಒತ್ತಡರಹಿತವಾಗಿ ಕೆಲಸ ಮಾಡಬಹುದು ಎಂದು ವಿವರಿಸಿದರು.

ಕಾರ್ಯಾಗಾರ ಉದ್ಘಾಟಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಂ. ರೇವಣಸಿದ್ದಪ್ಪ, ‘ಹೆಚ್ಚು ಅಂಕಗಳಿಸುವಂತೆ ಮಕ್ಕಳಿಗೆ ಪಾಠಮಾಡುವುದರ ಜತೆಗೆ, ಒತ್ತಡ ರಹಿತ ಆಡಳಿತ ನಡೆಸುವುದನ್ನು ಶಿಕ್ಷಕರು ಕಲಿಯಬೇಕು. ಆಗ ಮಾತ್ರ ಶಾಲೆಯನ್ನು ಯಶಸ್ವಿಯಾಗಿ ನಡೆಸಲು ಸಾಧ್ಯವಿದೆ ಎಂದರು.

ಸರ್ಕಾರವೇ ಎಲ್ಲವುದನ್ನೂ ಮಾಡಬೇಕೆಂಬ ಮನಸ್ಥಿತಿ ಬೇಡ. ಅದರ ಬದಲು, ರೋಟರಿ ಮತ್ತು ಇನ್ನರ್‌ ವೀಲ್ ಕ್ಲಬ್‌ಗಳು ನೀಡುವಂತಹ ಆಡಳಿತಾತ್ಮಕ ತರಬೇತಿಗಳಲ್ಲಿ ಪಾಲ್ಗೊಂಡು, ಸಂಪನ್ಮೂಲ ವ್ಯಕ್ತಿಗಳು ನೀಡುವ ಮಾಹಿತಿಯನ್ನು ಗಮನವಿಟ್ಟು ಕೇಳಿ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಗ ಮಾತ್ರ ಶೈಕ್ಷಣಿಕ ಆಡಳಿತ ಸೂತ್ರವನ್ನು ಸುಲಭವಾಗಿ ನಿಭಾಯಿಸಲು ಸಾಧ್ಯವಾಗುತ್ತದೆ ಎಂದು ವಿವರಿಸಿದರು.

ಶಿಕ್ಷಣಾಧಿಕಾರಿ ಸಿ.ಎಂ.ತಿಪ್ಪೇಸ್ವಾಮಿ, ಸಂಪೂರ್ಣ ಗುಣಮಟ್ಟ ನಿರ್ವಹಣೆ’ ಕುರಿತು ಮಾಹಿತಿ ನೀಡಿ, ‘ವಿದ್ಯಾರ್ಥಿಗಳು ಮತ್ತು ಪೋಷಕರ ನಿರೀಕ್ಷೆಗಳನ್ನು ಅರಿತುಕೊಂಡು ಪಾಠ ಮಾಡಬೇಕು. ಬೋಧನೆ ಮತ್ತು ನಿರೀಕ್ಷೆ ಎರಡೂ ಸಮನ್ವಯ ಸಾಧಿಸಬೇಕು. ಶಾಲೆ ಮತ್ತು ವಿದ್ಯಾರ್ಥಿಗೆ ಒಳಿತಾಗುವಂತಿರಬೇಕು ಎಂದು ವಿವರಿಸಿದರು.

ಹಿರಿಯೂರು ವಾಣಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಶಶಿಧರ್, ಒತ್ತಡ ನಿವರ್ಹಣೆ ವಿಧಾನಗಳು ಕುರಿತು ಮಾತನಾಡಿ, ‘ನಾಳೆಯ ಕೆಲಸಗಳ ಬಗ್ಗೆ ಇಂದೇ ಯೋಜನೆ ರೂಪಿಸಿ. ಸಮಯ ಮತ್ತು ಯೋಜನೆಗಳ ಸಮನ್ವಯದೊಂದಿಗೆ ಕೆಲಸ ನಿರ್ವಹಿಸಿದರೆ, ಒತ್ತಡ ನಿರ್ವಹಣೆ ಸಾಧ್ಯವಿದೆ’ ಎಂದರು.

ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್ ಅಧ್ಯಕ್ಷ ಅರುಣ್‌ಕುಮಾರ್, ಡಯಟ್ ಪ್ರಾಚಾರ್ಯೆ ಟಿ.ಜಿ.ಲೀಲಾವತಿ, ಕಾರ್ಯದರ್ಶಿ ರಾಘವೇಂದ್ರ, ಇನ್ನರ್‌ವೀಲ್ ಕ್ಲಬ್ ಚಿತ್ರದುರ್ಗ ಫೋರ್ಟ್ ಅಧ್ಯಕ್ಷೆ ಪ್ರತಿಭಾ ವಿಶ್ವನಾಥ್, ಕಾರ್ಯದರ್ಶಿ ವರಲಕ್ಷ್ಮಿ ಇನ್ನು ಮುಂತಾದವರು ವೇದಿಕೆಯಲ್ಲಿದ್ದರು.

ಶೇ 100ರಷ್ಟು ಫಲಿತಾಶ ಪಡೆದ ಶಾಲೆಗಳಿಗೆ ಸನ್ಮಾನ ಕಾರ್ಯಾಗಾರದ ಕೊನೆಯಲ್ಲಿ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಶೇ 100ರಷ್ಟು ಫಲಿತಾಂಶ ಪಡೆದ ಶಾಲೆಗಳ ಮುಖ್ಯ ಶಿಕ್ಷಕರನ್ನು ಸನ್ಮಾನಿಸಲಾಯಿತು. ಡಯಟ್ ಪ್ರಾಚಾರ್ಯೆ ಟಿ.ಜಿ.ಲೀಲಾವತಿ ಸಮಾರೋಪ ಭಾಷಣ ಮಾಡಿದರು.

Comments
ಈ ವಿಭಾಗದಿಂದ ಇನ್ನಷ್ಟು
ಹಿರಿಯೂರು: ಸುಧಾಕರ್ ಉಮೇದುವಾರಿಕೆ ಸಲ್ಲಿಕೆ

ಹಿರಿಯೂರು
ಹಿರಿಯೂರು: ಸುಧಾಕರ್ ಉಮೇದುವಾರಿಕೆ ಸಲ್ಲಿಕೆ

24 Apr, 2018

ಮೊಳಕಾಲ್ಮುರು
ಶ್ರೀರಾಮುಲು ಸೋಲಿಸುವುದೇ ನನ್ನ ಗುರಿ

ಜನಸ್ತೋಮದಲ್ಲಿ ಶಾಸಕ ತಿಪ್ಪೇಸ್ವಾಮಿ ಸೋಮವಾರ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ  ಸಲ್ಲಿಸಿದರು.

24 Apr, 2018

ಚಿತ್ರದುರ್ಗ
ಜೀವನಾನುಭವದ ಸಾಹಿತ್ಯ ರಚಿಸಿದ ಡಿವಿಜಿ

ಸಾಹಿತಿ ಡಿ.ವಿ.ಗುಂಡಪ್ಪ ಅವರು, ಯಾವುದೇ ವಿಶ್ವವಿದ್ಯಾಲಯಗಳಲ್ಲಿ ಪದವಿ ಪಡೆದವರಲ್ಲ. ಆದರೆ ಅವರು ರಚಿಸಿದ ಜೀವನಾನುಭವದ ಸಾಹಿತ್ಯವೇ ಅವರನ್ನು ಮೇರು ವ್ಯಕ್ತಿಯನ್ನಾಗಿ ರೂಪಿಸಿತು ಎಂದು ಶಿವಮೊಗ್ಗದ...

24 Apr, 2018
‘ಮಂತ್ರಮಾಂಗಲ್ಯ’ದಲ್ಲಿ ಪುಸ್ತಕ ಉಡುಗೊರೆ

ಚಿತ್ರದುರ್ಗ
‘ಮಂತ್ರಮಾಂಗಲ್ಯ’ದಲ್ಲಿ ಪುಸ್ತಕ ಉಡುಗೊರೆ

24 Apr, 2018
ಅಮೃತ್ ಯೋಜನೆ: ವಿವಿಧೆಡೆ ಉದ್ಯಾನ ಭಾಗ್ಯ

ಚಿತ್ರದುರ್ಗ
ಅಮೃತ್ ಯೋಜನೆ: ವಿವಿಧೆಡೆ ಉದ್ಯಾನ ಭಾಗ್ಯ

23 Apr, 2018