ಧಾರವಾಡ

ಒಪಿಡಿ ಬಂದ್: ರೋಗಿಗಳ ಪರದಾಟ

ಈ ಹಿಂದೆ ಕೆಪಿಎಂಇ ಕಾಯ್ದೆ ತಿದ್ದುಪಡಿ ವಿರೋಧಿಸಿ ಹಲವು ದಿನಗಳ ಕಾಲ ನಡೆಸಿದ ಧರಣಿಯಿಂದ ಜನರು ಸಾಕಷ್ಟು ಪರದಾಡಿದ್ದರು.

ಧಾರವಾಡ: ಧಾರವಾಡದಲ್ಲಿಯೂ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಜಿಲ್ಲಾ ಆಸ್ಪತ್ರೆ ಹಾಗೂ ಎಸ್‌ಡಿಎಂ ಆಸ್ಪತ್ರೆಗಳನ್ನು ಹೊರತುಪಡಿಸಿ ಬಹುತೇಕ ಆಸ್ಪತ್ರೆಗಳು ಮಂಗಳವಾರ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಹೊರ ರೋಗಿ ವಿಭಾಗ (ಒಪಿಡಿ)ಗಳನ್ನು ಬಂದ್‌ ಮಾಡಿದ್ದವು.

ಹೀಗಾಗಿ ಈ ಎರಡು ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಳ ಕಂಡುಬಂದಿತು. ಆದರೂ ನಿರ್ದಿಷ್ಟ ಆಸ್ಪತ್ರೆ ಹಾಗೂ ವೈದ್ಯರನ್ನು ಅಪೇಕ್ಷಿಸಿ ಬಂದ ರೋಗಿಗಳಲ್ಲಿ ಕೆಲವರು ಮನೆಗೆ ಮರಳಿದರೆ, ಇನ್ನೂ ಕೆಲವರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು.

ಈ ಹಿಂದೆ ಕೆಪಿಎಂಇ ಕಾಯ್ದೆ ತಿದ್ದುಪಡಿ ವಿರೋಧಿಸಿ ಹಲವು ದಿನಗಳ ಕಾಲ ನಡೆಸಿದ ಧರಣಿಯಿಂದ ಜನರು ಸಾಕಷ್ಟು ಪರದಾಡಿದ್ದರು. ನಗರದ ವಿಠ್ಠಲ ಆಸ್ಪತ್ರೆ, ಜರ್ಮನ್ ಆಸ್ಪತ್ರೆ, ಶ್ರೀಯಾ ಆಸ್ಪತ್ರೆ, ಡಾ. ರಾಮನಗೌಡರ ಆಸ್ಪತ್ರೆ ಸೇರಿದಂತೆ ನಗರದ ಬಹುತೇಕ ಖಾಸಗಿ ಆಸ್ಪತ್ರೆಗಳ ವೈದ್ಯರು ಕೇವಲ ಒಳರೋಗಿಗಳಾಗಿ ದಾಖಲಾದವರಿಗೆ ಮಾತ್ರ ಚಿಕಿತ್ಸೆ ನೀಡಿದರು. ಸಂಜೆ 6ರ ನಂತರ ಖಾಸಗಿ ಆಸ್ಪತ್ರೆಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು.

ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಆರ್‌.ಎಂ.ದೊಡ್ಡಮನಿ, ‘ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದ ಕುರಿತು ವರದಿಯಾಗಿಲ್ಲ. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರರೋಗಿ ವಿಭಾಗಗಳಲ್ಲಿ ಶೇ 10ರಷ್ಟು ಹೆಚ್ಚಿನ ಸಂಖ್ಯೆ ಕಂಡುಬಂತು. ಜಿಲ್ಲಾ ಆಸ್ಪತ್ರೆಯಲ್ಲಿ ಮಂಗಳವಾರ ಸಂಜೆ 6ರವರೆಗೆ 741 ಜನ ಚಿಕಿತ್ಸೆ ಪಡೆದಿದ್ದಾರೆ. ಕಲಘಟಗಿಯಲ್ಲಿ 360, ಕುಂದಗೋಳದಲ್ಲಿ 410 ಜನ ಚಿಕಿತ್ಸೆ ಪಡೆದಿದ್ದಾರೆ’ ಎಂದು ತಿಳಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು
ಸಭಾತ್ಯಾಗ ಮಾಡಿದ ಪಾಲಿಕೆ ಆಯುಕ್ತ!

ಹುಬ್ಬಳ್ಳಿ
ಸಭಾತ್ಯಾಗ ಮಾಡಿದ ಪಾಲಿಕೆ ಆಯುಕ್ತ!

24 Mar, 2018

ಹುಬ್ಬಳ್ಳಿ
78 ಕೊಳವೆ ಬಾವಿ ಕೊರೆಯಿಸಲು ನಿರ್ಧಾರ

ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿರುವ ಮಹಾನಗರ ಪಾಲಿಕೆ, ಅವಳಿ ನಗರಗಳಲ್ಲಿ ಒಟ್ಟು 78 ಕೊಳವೆ ಬಾವಿಗಳನ್ನು ಕೊರೆಯಿಸಲು ಮುಂದಾಗಿದೆ. ಹಳೇ ಹುಬ್ಬಳ್ಳಿ, ಉಣಕಲ್‌...

24 Mar, 2018

ಹುಬ್ಬಳ್ಳಿ
ಗೂಂಡಾ ಕಾಯ್ದೆ, ಗಡಿಪಾರು

‘ರೌಡಿ ಪಟ್ಟಿಯಲ್ಲಿ ಹೆಸರು ಹೊಂದಿರುವವರು ಚುನಾವಣೆ ವೇಳೆ ಸಾರ್ವಜನಿಕರ ಹಕ್ಕು ಮೊಟಕುಗೊಳಿಸಲು ಪ್ರಯತ್ನಿಸಿ ಜನಜೀವನಕ್ಕೆ ತೊಂದರೆ ಮಾಡಿದರೆ ಗೂಂಡಾ ಕಾಯ್ದೆ ಅಡಿ ಪ್ರಕರಣದ ದಾಖಲಿಸಿ...

24 Mar, 2018

ಹುಬ್ಬಳ್ಳಿ
ವೇತನ ನೇರ ಪಾವತಿ,ಉಪಾಹಾರ ಪೂರೈಕೆಗೆ ಒಪ್ಪಿಗೆ

ಗುತ್ತಿಗೆ ಪೌರಕಾರ್ಮಿಕರು ಮೂರು ದಿನಗಳಿಂದ ನಡೆಸುತ್ತಿದ್ದ ಮುಷ್ಕರಕ್ಕೆ ಮಣಿದ ಮಹಾನಗರ ಪಾಲಿಕೆಯ ಸದಸ್ಯರು, ರಾಜ್ಯ ಸರ್ಕಾರದ ಆದೇಶದಂತೆ ವೇತನ ನೇರ ಪಾವತಿಸಲು ಹಾಗೂ ಬೆಳಗ್ಗಿನ...

24 Mar, 2018
ಇಬ್ಭಾಗವಾಗಬೇಕೇ ಮಹಾನಗರ ಪಾಲಿಕೆ?

ಹುಬ್ಬಳ್ಳಿ
ಇಬ್ಭಾಗವಾಗಬೇಕೇ ಮಹಾನಗರ ಪಾಲಿಕೆ?

23 Mar, 2018