ಅಕ್ಕಿಆಲೂರ

ದೇವಸ್ಥಾನದ ಆವರಣದಲ್ಲಿ ಮನೆ ನಿರ್ಮಾಣಕ್ಕೆ ಆಕ್ರೋಶ

‘ಆಡೂರು ಗ್ರಾಮದಲ್ಲಿ ಮಾದಿಗ ಸಮುದಾಯದ ಕುಲದೇವತೆ ಮಾತಂಗೇಶ್ವರಿ ದೇವಸ್ಥಾನದ ಆವರಣದಲ್ಲಿ ಫಲಾನುಭವಿಯೊಬ್ಬರಿಗೆ ಆಶ್ರಯ ಮನೆ ನಿರ್ಮಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ’

ಅಕ್ಕಿಆಲೂರ: ‘ಆಡೂರು ಗ್ರಾಮದಲ್ಲಿ ಮಾದಿಗ ಸಮುದಾಯದ ಕುಲದೇವತೆ ಮಾತಂಗೇಶ್ವರಿ ದೇವಸ್ಥಾನದ ಆವರಣದಲ್ಲಿ ಫಲಾನುಭವಿಯೊಬ್ಬರಿಗೆ ಆಶ್ರಯ ಮನೆ ನಿರ್ಮಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ’ ಎಂದು ಆರೋಪಿಸಿ ಹಲವು ದಲಿತಪರ ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ಗ್ರಾಮ ಪಂಚಾಯ್ತಿ ಎದುರು ತಮಟೆ ಚಳವಳಿ ನಡೆಸಿದರು.

‘ಈ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ಹಲವು ತಿಂಗಳುಗಳಿಂದ ಆಡಳಿತ ಮಂಡಳಿಯ ಗಮನ ಸೆಳೆಯಲಾಗಿದೆ. ಪಿಡಿಒ ಅವರಿಗೂ ದೂರ ಸಲ್ಲಿಸಲಾಗಿದೆ. ಆದರೂ ಕೂಡ ಪ್ರಯೋಜನವಾಗಿಲ್ಲ’ ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು. ‘ಪಿಡಿಒ ಶಾರದಾ ಜಾಲವಾಡಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಮನೆ ನಿರ್ಮಾಣ ಕೂಡಲೇ ಸ್ಥಗಿತಗೊಳಿಸಬೇಕು’ ಎಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಮಾದಿಗ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷೆ ಪ್ರೇಮಾ ಹರಿಜನ, ‘ಸಾರ್ವಜನಿಕ ಆಸ್ತಿಯಲ್ಲಿ ಫಲಾನುಭವಿಯೊಬ್ಬರಿಗೆ ಮನೆ ನಿರ್ಮಿಸಿಕೊಳ್ಳಲು ಅವಕಾಶ ನೀಡಿದ್ದು ಸರಿಯಲ್ಲ. ಈ ಬಗ್ಗೆ ಗಮನ ಸೆಳೆದರೂ ಮೌನಕ್ಕೆ ಶರಣಾಗಿರುವುದು ಸಂದೇಹಗಳಿಗೆ ಎಡೆಮಾಡಿಕೊಡುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಲ್ಲೂಕು ಪಂಚಾಯ್ತಿ ಇಒ ಡಾ.ಶಶಿಧರ ಎಂ.ಜಿ. ಸ್ಥಳಕ್ಕೆ ಭೇಟಿ ನೀಡಿ, ಜಿಲ್ಲಾ ಪಂಚಾಯ್ತಿ ಸಿಇಒ ಜೊತೆ ಮಾತನಾಡಿ ಅಗತ್ಯ ಕ್ರಮದ ಭರವಸೆ ನೀಡಿದರು. ಆದರೂ, ಪ್ರತಿಭಟನಾನಿರತರು ಮಣಿಯಲಿಲ್ಲ.

ಪ್ರಮುಖರಾದ ರಾಜೂ ಹರಿಜನ, ಪ್ರವೀಣ ಹರಿಜನ, ರೇಖಾ ಹರಿಜನ, ಭೀಮಣ್ಣ ಹರಿಜನ, ಸುರೇಶ ಹರಿಜನ, ಗಿರಿಜವ್ವ ಹರಿಜನ, ಮಲ್ಲಪ್ಪ ಹರಿಜನ, ಮಂಜಪ್ಪ ಹರಿಜನ, ನೀಲಪ್ಪ ಹರಿಜನ, ಅರುಣ ಮಣ್ಣಮ್ಮನವರ ಸೇರಿದಂತೆ ಮಾದಿಗ ಮಹಾಸಭಾ, ದಲಿತ ಸಂಘರ್ಷ ಸಮಿತಿ ಸೇರಿದಂತೆ ದಲಿತಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ತೊಡಗಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು

ಹಾನಗಲ್
ಹಾನಗಲ್‌ ಕಾಂಗ್ರೆಸ್‌ನ ಭದ್ರ ಕೋಟೆ: ಮಾನೆ

‘ಹಾನಗಲ್‌ ವಿಧಾನಸಭಾ ಕ್ಷೇತ್ರದಲ್ಲಿ ಗೆಲ್ಲುವ ಪಕ್ಷ ರಾಜ್ಯದ ಚುಕ್ಕಾಣಿ ಹಿಡಿಯುತ್ತದೆ, ಹಾನಗಲ್‌ ಕಾಂಗ್ರೆಸ್‌ನ ಭದ್ರ ನೆಲೆ’ ಎಂದು ಕಾಂಗ್ರೆಸ್‌ ಅಭ್ಯರ್ಥಿ ಶ್ರೀನಿವಾಸ ಮಾನೆ ಹೇಳಿದರು. ...

23 Apr, 2018
ಹಂದಿಗಳ ಹಾವಳಿ: ರೋಸಿಹೋದ ಜನ

ಕುಮಾರಪಟ್ಟಣ
ಹಂದಿಗಳ ಹಾವಳಿ: ರೋಸಿಹೋದ ಜನ

23 Apr, 2018
ಒಣಗಿದ ಬೃಹತ್ ಬೇವಿನ ಮರ: ಆತಂಕದಲ್ಲಿ ವಾಹನ ಸವಾರರು

ಕುಮಾರಪಟ್ಟಣ
ಒಣಗಿದ ಬೃಹತ್ ಬೇವಿನ ಮರ: ಆತಂಕದಲ್ಲಿ ವಾಹನ ಸವಾರರು

23 Apr, 2018

ಸವಣೂರ
ಪುರಸಭೆಯಿಂದ ಮತದಾನ ಜಾಗೃತಿ ಜಾಥಾ

ಭಾರತದ ಪ್ರತಿಯೊಬ್ಬ ಪ್ರಜೆಗೆ ಮತದಾನ ಜನ್ಮಸಿದ್ಧಹಕ್ಕು. ಅದನ್ನು ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ, ಹಕ್ಕನ್ನು ಮಾರಿಕೊಳ್ಳದೆ ಯೋಗ್ಯ ಅಭ್ಯರ್ಥಿಗೆ ಮತ ನೀಡಬೇಕು ಎಂದು ಜಿಲ್ಲಾ...

21 Apr, 2018

ಶಿಗ್ಗಾವಿ
ಸ್ಪರ್ಧೆ ಯಾರ ವಿರುದ್ಧವಲ್ಲ; ಜನಸೇವೆಗಾಗಿ

‘ನಾನು ಚುನಾವಣೆ ಕಣಕ್ಕಿಳಿದಿರುವುದು ಯಾರ ವಿರುದ್ಧವಲ್ಲ. ಯಾರನ್ನೂ ಸೋಲಿಸಲು ಅಲ್ಲ. ಜನ ಸೇವೆ, ಅಭಿವೃದ್ಧಿಗಾಗಿ ಎಂಬುವುದನ್ನು ಮರೆಯಬಾರದು’ ಎಂದು ವಿಧಾನ ಪರಿಷತ್ ಸದಸ್ಯ ಸೋಮಣ್ಣ...

21 Apr, 2018