ಮಂಗಳೂರು

ಮಂಗಳೂರು: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ

ಮಂಗಳೂರಿನ ‌ಸುರತ್ಕಲ್‌ ಸಮೀಪದ ಕೃಷ್ಣಾಪುರದಲ್ಲಿ ಬುಧವಾರ ಮಧ್ಯಾಹ್ನ ಬೈಕಿನಲ್ಲಿ ಹೋಗುತ್ತಿದ್ದ ಯುವಕನೊಬ್ಬನನ್ನು ಕಾರಿನಲ್ಲಿ ಬೆನ್ನಟ್ಟಿ ಬಂದ ನಾಲ್ವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ...

ದೀಪಕ್

ಮಂಗಳೂರು: ಇಲ್ಲಿನ ‌ಸುರತ್ಕಲ್‌ ಸಮೀಪದ ಕೃಷ್ಣಾಪುರದಲ್ಲಿ ಬುಧವಾರ ಮಧ್ಯಾಹ್ನ ಬೈಕಿನಲ್ಲಿ ಹೋಗುತ್ತಿದ್ದ ಯುವಕನೊಬ್ಬನನ್ನು ಕಾರಿನಲ್ಲಿ ಬೆನ್ನಟ್ಟಿ ಬಂದ ನಾಲ್ವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

ಕಾಟಿಪಳ್ಳ ಕೈಕಂಬ ನಿವಾಸಿ ದೀಪಕ್ (32) ಕೊಲೆಯಾದ ಯುವಕ. ಈತ ದೂರಸಂಪರ್ಕ ಕಂಪೆನಿಯೊಂದರ ಸಿಮ್ ವಿತರಕನಾಗಿದ್ದ. ಮಧ್ಯಾಹ್ನ 2 ಗಂಟೆ ಸುಮಾರಿಗೆ ಈತನನ್ನು ಕೊಲೆ‌ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶವವನ್ನು ಎ.ಜೆ. ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಆಸ್ಪತ್ರೆಗೆ ನಗರ ಪೊಲೀಸ್ ಕಮಿಷನರ್ ಟಿ.ಆರ್.ಸುರೇಶ್ ಭೇಟಿ ನೀಡಿದ್ದಾರೆ.

ಮೃತ ದೀಪಕ್ ಮೊದಲು ಬಜರಂಗದಳದ ಕಾರ್ಯಕರ್ತನಾಗಿದ್ದ‌. ಈಗ ಬಿಜೆಪಿಯ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಅಲ್ಲಿ ಆತನಿಗೆ ಕೆಲವು ಜವಾಬ್ದಾರಿ ನೀಡಲಾಗಿತ್ತು. ಈತ ಮುಸ್ಲಿಂ ಸಮುದಾಯದ ಮಾಲೀಕರೊಬ್ಬರ ಮೊಬೈಲ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ಈದ್ ಮಿಲಾದ್ ಸಮಯದಲ್ಲೇ ಕೃಷ್ಣಾಪುರದಲ್ಲಿ ಕೋಲವೂ ಇತ್ತು. ಆಗ ದೀಪಕ್ ನೇತೃತ್ವದ ಹಿಂದೂ ಯುವಕರ ಗುಂಪು ಹಾಗೂ ಮುಸ್ಲಿಂ ಯುವಕರ‌ ಗುಂಪಿನ ನಡುವೆ ಬ್ಯಾನರ್ ಕಟ್ಟುವ ಸ್ಥಳದ ವಿಚಾರದಲ್ಲಿ ಗಲಾಟೆ ನಡೆದಿತ್ತು ಎಂಬ ಮಾಹಿತಿ ಪೊಲೀಸರ ಪ್ರಾಥಮಿಕ ಪರಿಶೀಲನೆ ವೇಳೆ ಲಭ್ಯವಾಗಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಗೌರಿ ಲಂಕೇಶ್ ಹತ್ಯೆ ಪ್ರಕರಣ: ಕೆ.ಟಿ.ನವೀನ್‌ ಅಕ್ರಮ ಬಂಧನ ಆರೋಪ

ಮಂಡ್ಯ
ಗೌರಿ ಲಂಕೇಶ್ ಹತ್ಯೆ ಪ್ರಕರಣ: ಕೆ.ಟಿ.ನವೀನ್‌ ಅಕ್ರಮ ಬಂಧನ ಆರೋಪ

25 Apr, 2018
ಕಾಂಗ್ರೆಸ್‌ ಅಭ್ಯರ್ಥಿ ಮಂಜುನಾಥ್‌ ಜಾತಿ ಪ್ರಮಾಣಪತ್ರ ಅಸಿಂಧು: ಚುನಾವಣೆ ಹೊಸ್ತಿಲಲ್ಲಿ ಕ್ಷೇತ್ರ ಬದಲಿಸುವ ಸಂಕಷ್ಟ

ಕೋಲಾರ
ಕಾಂಗ್ರೆಸ್‌ ಅಭ್ಯರ್ಥಿ ಮಂಜುನಾಥ್‌ ಜಾತಿ ಪ್ರಮಾಣಪತ್ರ ಅಸಿಂಧು: ಚುನಾವಣೆ ಹೊಸ್ತಿಲಲ್ಲಿ ಕ್ಷೇತ್ರ ಬದಲಿಸುವ ಸಂಕಷ್ಟ

25 Apr, 2018
'ರಾಜ್ಯದಲ್ಲಿ 800 ದಲಿತ ಮಹಿಳೆಯರ ಮೇಲೆ ಅತ್ಯಾಚಾರ'

ರಾಹುಲ್ ಗಾಂಧಿಗೆ ಬಿಜೆಪಿ ಐದು ಪ್ರಶ್ನೆ
'ರಾಜ್ಯದಲ್ಲಿ 800 ದಲಿತ ಮಹಿಳೆಯರ ಮೇಲೆ ಅತ್ಯಾಚಾರ'

25 Apr, 2018
ಎಚ್‌.ಡಿ ಕೋಟೆ ಬಿಜೆಪಿ ಅಭ್ಯರ್ಥಿ ಸಿದ್ದರಾಜು ವಿರುದ್ಧದ ಪ್ರಕರಣ: ಹೈಕೋರ್ಟ್ ಮಧ್ಯಂತರ ಆದೇಶ

ಬೆಂಗಳೂರು
ಎಚ್‌.ಡಿ ಕೋಟೆ ಬಿಜೆಪಿ ಅಭ್ಯರ್ಥಿ ಸಿದ್ದರಾಜು ವಿರುದ್ಧದ ಪ್ರಕರಣ: ಹೈಕೋರ್ಟ್ ಮಧ್ಯಂತರ ಆದೇಶ

25 Apr, 2018
ಬಾವಿ ಸ್ವಚ್ಛತೆಗೆ ಇಳಿದಿದ್ದ ತಂದೆ- ಮಗ ಸೇರಿ ಮೂವರ ಸಾವು

ಉಸಿರುಗಟ್ಟಿ ಸಾವು
ಬಾವಿ ಸ್ವಚ್ಛತೆಗೆ ಇಳಿದಿದ್ದ ತಂದೆ- ಮಗ ಸೇರಿ ಮೂವರ ಸಾವು

25 Apr, 2018