ಗೋಣಿಕೊಪ್ಪಲು

‘ಜನಪರ ಯೋಜನೆಗಳೇ ಬಿಜೆಪಿ ಗೆಲುವಿಗೆ ಕಾರಣ’

ಕೇಂದ್ರ ಸರ್ಕಾರದ ಜನಪರ ಕಾರ್ಯಗಳಿಂದ ಇಂದು ದೇಶದ ಹಲವು ರಾಜ್ಯಗಳಲ್ಲಿ ಬಿಜೆಪಿ ಜಯ ಸಾಧಿಸಲು ಸಾಧ್ಯವಾಗಿದೆ

ಗೋಣಿಕೊಪ್ಪಲು: ಕೇಂದ್ರ ಸರ್ಕಾರದ ಜನಪರ ಕಾರ್ಯಗಳಿಂದ ಇಂದು ದೇಶದ ಹಲವು ರಾಜ್ಯಗಳಲ್ಲಿ ಬಿಜೆಪಿ ಜಯ ಸಾಧಿಸಲು ಸಾಧ್ಯವಾಗಿದೆ ಎಂದು ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಕುಂಞಂಗಡ ಅರುಣ್ ಬೀಮಯ್ಯ ಹೇಳಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ನಡೆದ ಪಕ್ಷದ ಕಾರ್ಯಕಾರಿಣಿ ಪರಿವರ್ತನಾ ಸಭೆಯಲ್ಲಿ ಮಂಗಳವಾರ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ಜನವಿರೋಧಿ ಕಾಂಗ್ರೆಸ್ ಸರ್ಕಾರವನ್ನು ಮಟ್ಟಹಾಕಲು ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಬಲಿಷ್ಠರಾಗಬೇಕು ಎಂದು ಹೇಳಿದರು.

ಕೊಡಗಿಗೆ ಮಲತಾಯಿ ಧೋರಣೆ ತೋರುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಧ್ವನಿ ಎತ್ತಬೇಕಾಗಿದೆ. ಜನರ ವಿರೋಧದ ನಡುವೆಯೂ ಪ್ರಾಣಹಾನಿ ಸಂಭವಿಸಿದರೂ ಟಿಪ್ಪು ಜಯಂತಿ ಆಚರಿಸುವ ಮೂಲಕ ಜನರ ಭಾವನೆಗಳನ್ನು ಕೆರಳಿಸಿ ಕೊಡಗಿಗೆ ಅವಮಾನ ಮಾಡಿದ ಸರ್ಕಾರವನ್ನು ಕಿತ್ತೊಗೆಯಬೇಕಾಗಿದೆ ಎಂದರು. ಈ ಬಾರಿಯ ಚುನಾವಣೆಯಲ್ಲಿ ಜಿಲ್ಲೆಯ ಎರಡೂ ಸ್ಥಾನವನ್ನು ಗೆಲ್ಲಿಸುವ ಹೊಣೆ ಪ್ರತಿಯೊಬ್ಬ ಕಾರ್ಯಕರ್ತ ರದ್ದಾಗಿದೆ ಎಂದು ಕರೆ ನೀಡಿದರು.

ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಕೇಂದ್ರದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳದೆ ಕೇವಲ ಪ್ರಧಾನಿಯನ್ನು ದೂರುವುದರಲ್ಲೇ ಕಾಂಗ್ರೆಸ್‌ನವರು ಕಾಲಕಳೆಯುತ್ತಿದ್ದಾರೆ. ಅಭಿವೃದ್ಧಿ ಕಾರ್ಯಗಳನ್ನು ಕೇವಲ ಮಾಧ್ಯಮಗಳ ಮೂಲಕ ತೋರಿಸ ಲಾಗುತ್ತಿದೆ. ವಾಸ್ತವಾಗಿ ಯಾವುದೇ ಅಭಿವೃದ್ಧಿಯಾಗಿಲ್ಲ ಎಂದು ದೂರಿದರು.

ಪಕ್ಷದ ರಾಜ್ಯ ಕಾರ್ಯದರ್ಶಿ ಮನು ಮುತ್ತಪ್ಪ, ದೇಶದಲ್ಲಿ ಬಿಜೆಪಿ ಅಲೆ ಎದ್ದಿದೆ. ಈಗಾಗಲೆ ಸುಮಾರು 58 ಲಕ್ಷ ಪಕ್ಷದ ಸದಸ್ಯರಿದ್ದಾರೆ. ಜಿಲೆಯಲ್ಲಿ 46 ಸಾವಿರ ಸದಸ್ಯರಿದ್ದಾರೆ. ಪಕ್ಷದ ಮುಂದಿನ ಗುರಿ ಗ್ರಾಮೀಣ ಮಟ್ಟದಲ್ಲಿ ಅಭಿವೃದ್ಧಿಪಡಿಸುವುದಾಗಿದೆ ಎಂದರು. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಭಾರತೀಶ್ ಮಾತನಾಡಿದರು.

ಮಾಜಿ ಅಧ್ಯಕ್ಷ ಸುಜಾ ಕುಶಾಲಪ್ಪ, ಜಿಲ್ಲಾ ಉಪಾಧ್ಯಕ್ಷ ಪಟ್ರಪಂಡ ರಘು ನಾಣಯ್ಯ, ಮುಖಂಡ ಗಿರೀಶ್ ಗಣಪತಿ, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯೆ ರೀನಾ ಪ್ರಕಾಶ್, ಜಿಲ್ಲಾ ಕಾರ್ಯದರ್ಶಿ ಬಾಲಚಂದ್ರ ಕಣಗಿ, ರಾಬಿನ್ ದೇವಯ್ಯ, ಎಂ.ಬಿ. ದೇವಯ್ಯ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸ್ಮಿತಾ ಪ್ರಕಾಶ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸುವಿನ್ ಗಣಪತಿ, ಲಾಲಾ ಭೀಮಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಅಚ್ಚಪಂಡ ಮಹೇಶ್ ಗಣಪತಿ, ಶಶಿ ಸುಬ್ರಮಣಿ, ವಿಜು ಸುಬ್ರಮಣಿ ಹಾಜರಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
‘ಸ್ವಚ್ಛ ಪಟ್ಟಣ’ಕ್ಕೆ ಕಸದ ಕಳಂಕ

ಗೋಣಿಕೊಪ್ಪಲು
‘ಸ್ವಚ್ಛ ಪಟ್ಟಣ’ಕ್ಕೆ ಕಸದ ಕಳಂಕ

18 Apr, 2018
ಹಾಕಿ ಟೂರ್ನಿ; 12 ತಂಡ ಮುನ್ನಡೆ

ನಾಪೋಕ್ಲು
ಹಾಕಿ ಟೂರ್ನಿ; 12 ತಂಡ ಮುನ್ನಡೆ

18 Apr, 2018

ಮಡಿಕೇರಿ
ಸಿ.ಎಂ ನಡೆ; ಕಾಂಗ್ರೆಸ್‌ಗೇ ತಿರುಗುಬಾಣ

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಕ್ರಮ ಚಟುವ ಟಿಕೆಗೆ ಕಡಿವಾಣ ಹಾಕಿದ್ದೇ ಜೆಡಿಎಸ್‌. ಅದಕ್ಕೆ ಜೆಡಿಎಸ್‌ ಅನ್ನು ಸಿದ್ದರಾಮಯ್ಯ ಟಾರ್ಗೆಟ್‌ ಮಾಡುತ್ತಿದ್ದಾರೆ’ ಎಂದು ಜೆಡಿಎಸ್‌ ರಾಜ್ಯ...

18 Apr, 2018

ಮಡಿಕೇರಿ
ಅನಾರೋಗ್ಯದ ನಡುವೆ ಕುಮಾರಸ್ವಾಮಿ ಪ್ರಚಾರ

ನಿರಂತರ ಪ್ರಚಾರದಲ್ಲಿ ತೊಡಗಿಕೊಂಡಿರುವ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರ ಆರೋಗ್ಯದಲ್ಲಿ ಏರುಪೇರಾಗಿದೆ.

18 Apr, 2018
ಮಡಿಕೇರಿಯಲ್ಲಿ ‘ಬಿಸು ಪರ್ಬ’ ಸಂಭ್ರಮ

ಮಡಿಕೇರಿ
ಮಡಿಕೇರಿಯಲ್ಲಿ ‘ಬಿಸು ಪರ್ಬ’ ಸಂಭ್ರಮ

18 Apr, 2018