ರಂಜಾನ್ ರಜೆ ದಿನಗಳು 46ರಿಂದ 42ಕ್ಕೆ ಇಳಿಕೆ

ಮದರಸಾ ರಜೆ ದಿನಗಳನ್ನು ಕಡಿತಗೊಳಿಸಿದ ಉತ್ತರಪ್ರದೇಶ ಸರ್ಕಾರ

ರಜೆಗಳ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಿದ ಉತ್ತರ ಪ್ರದೇಶದ ಮದರಸಾ ಸಮಿತಿಯ ರೆಜಿಸ್ಟ್ರಾರ್ ರಾಹುಲ್ ಗುಪ್ತಾ ಅವರು,  ಅನ್ಯ ಧರ್ಮೀಯ ಹಬ್ಬಗಳಾದ ದೀಪಾವಳಿ, ಕ್ರಿಸ್‌ಮಸ್, ದಸರಾ, ಮಹಾವೀರ ಜಯಂತಿ, ಬುದ್ಧ ಪೂರ್ಣಿಮಾ ರಕ್ಷಾ ಬಂಧನ ಹಬ್ಬಗಳಿಗೆ ಹೆಚ್ಚುವರಿ ರಜೆಯನ್ನು ನೀಡಲಾಗಿದೆ ಎಂದಿದ್ದಾರೆ.

ಮದರಸಾ ರಜೆ ದಿನಗಳನ್ನು ಕಡಿತಗೊಳಿಸಿದ ಉತ್ತರಪ್ರದೇಶ ಸರ್ಕಾರ

ನವದೆಹಲಿ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರ 2018ರ ಮದರಸಾ ರಜೆಗಳ ಸಂಖ್ಯೆಯನ್ನು ಕಡಿತಗೊಳಿಸಿದೆ.

ರಜೆಗಳ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಿದ ಉತ್ತರ ಪ್ರದೇಶದ ಮದರಸಾ ಸಮಿತಿಯ ರೆಜಿಸ್ಟ್ರಾರ್ ರಾಹುಲ್ ಗುಪ್ತಾ ಅವರು,  ‘ಅನ್ಯ ಧರ್ಮೀಯ ಹಬ್ಬಗಳಾದ ದೀಪಾವಳಿ, ಕ್ರಿಸ್‌ಮಸ್, ದಸರಾ, ಮಹಾವೀರ ಜಯಂತಿ, ಬುದ್ಧ ಪೂರ್ಣಿಮಾ ರಕ್ಷಾ ಬಂಧನ ಹಬ್ಬಗಳಿಗೆ ಹೆಚ್ಚುವರಿ ರಜೆಯನ್ನು ನೀಡಲಾಗಿದೆ’ ಎಂದಿದ್ದಾರೆ.

ಅಲ್ಲದೇ ಈ ಮೊದಲು ರಂಜಾನ್ ಹಬ್ಬಕ್ಕೆ  46 ದಿನಗಳ ಕಾಲ ರಜೆಗಳನ್ನು ನೀಡಲಾಗುತ್ತಿತ್ತು. ಇದೀಗ 42ಕ್ಕೆ ಕಡಿತಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಹೊಸ ಕ್ಯಾಲೆಂಡರ್ ಪ್ರಕಾರ, ಈ ಮೊದಲು ರಂಜಾನ್ ಆರಂಭವಾಗುವ ಎರಡು ದಿನ ಮುಂಚಿತವಾಗಿ ರಜೆಯನ್ನು ಕೊಡಲಾಗುತ್ತಿತ್ತು. ಇದರಿಂದ ಊರಿಗೆ ಹೋಗುವ ಗುರುಗಳು ಹಾಗೂ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ತಮ್ಮ ಊರುಗಳನ್ನು ತಲುಪುದು ಕಷ್ಟವಾಗುತ್ತಿತ್ತು. ಹಾಗಾಗಿ ಈ ಬಾರಿಯಿಂದ 10 ದಿನಗಳ ಮೊದಲೇ ರಜೆಯನ್ನು ನೀಡಲಾಗುತ್ತಿದೆ ಎಂದಿದ್ದಾರೆ.

ರಾಜ್ಯ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಚೌಧರಿ ಲಕ್ಷ್ಮೀ ನಾರಾಯಣ್ , ‘ಈ ಹೊಸ ಕ್ಯಾಲೆಂಡರ್‌ನ ನಿಯಮ ಎಲ್ಲಾ ಸಮಿತಿ, ವಿಶ್ವವಿದ್ಯಾನಿಲಯ, ಮದರಸಾಗಳಿಗೆ ಅನ್ವಯವಾಗಲಿದೆ. ಇದು ವಿದ್ಯಾರ್ಥಿಗಳ ಅಭಿಪ್ರಾಯ ಅನುಸಾರ ಮಾಡಲಾಗಿರುವ ಕ್ಯಾಲೆಂಡರ್’ ಎಂದು ಹೇಳಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
3 ಸಾವಿರ ಚಿತ್ರಮಂದಿರಗಳಲ್ಲಿ ‘ಪದ್ಮಾವತ್‌’ ಬಿಡುಗಡೆಗೆ ಸಿದ್ಧತೆ: ಮುಂಬೈ, ಅಹಮದಾಬಾದ್‌, ಹರಿಯಾಣದಲ್ಲಿ ಪ್ರತಿಭಟನೆ

ಕಲ್ಲು ತೂರಾಟ, ಬಸ್‌ಗೆ ಬೆಂಕಿ; ಕರ್ಣಿ ಸೇನಾ ಬೆಂಬಲಿಗರ ಬಂಧನ
3 ಸಾವಿರ ಚಿತ್ರಮಂದಿರಗಳಲ್ಲಿ ‘ಪದ್ಮಾವತ್‌’ ಬಿಡುಗಡೆಗೆ ಸಿದ್ಧತೆ: ಮುಂಬೈ, ಅಹಮದಾಬಾದ್‌, ಹರಿಯಾಣದಲ್ಲಿ ಪ್ರತಿಭಟನೆ

24 Jan, 2018
ಗಣರಾಜ್ಯೋತ್ಸವದಂದು ಕೇರಳದ ಶಾಲೆಯೊಂದರಲ್ಲಿ ಧ್ವಜಾರೋಹಣ ಮಾಡಲಿದ್ದಾರೆ ಮೋಹನ್ ಭಾಗವತ್

ವ್ಯಾಸ ವಿದ್ಯಾ ಪೀಠಂ ಶಾಲೆಯಲ್ಲಿ ಧ್ವಜಾರೋಹಣ
ಗಣರಾಜ್ಯೋತ್ಸವದಂದು ಕೇರಳದ ಶಾಲೆಯೊಂದರಲ್ಲಿ ಧ್ವಜಾರೋಹಣ ಮಾಡಲಿದ್ದಾರೆ ಮೋಹನ್ ಭಾಗವತ್

24 Jan, 2018
ಮೇವು ಹಗರಣದ ಮೂರನೇ ಪ್ರಕರಣ: ಲಾಲು ಪ್ರಸಾದ್‌ ದೋಷಿ, 5 ವರ್ಷ ಸಜೆ

ಒಟ್ಟು ಆರು ಪ್ರಕರಣಗಳು
ಮೇವು ಹಗರಣದ ಮೂರನೇ ಪ್ರಕರಣ: ಲಾಲು ಪ್ರಸಾದ್‌ ದೋಷಿ, 5 ವರ್ಷ ಸಜೆ

24 Jan, 2018
ಡಾರ್ವಿನ್ ಸಿದ್ಧಾಂತದ ಬಗ್ಗೆ ಆ ರೀತಿ ಹೇಳಿಕೆ ನೀಡಬೇಡಿ: ಸತ್ಯಪಾಲ್ ಸಿಂಗ್‌‍ಗೆ ಜಾವಡೇಕರ್ ಪಾಠ

'ಮಾನವ ವಿಕಾಸ' ಸಿದ್ಧಾಂತ
ಡಾರ್ವಿನ್ ಸಿದ್ಧಾಂತದ ಬಗ್ಗೆ ಆ ರೀತಿ ಹೇಳಿಕೆ ನೀಡಬೇಡಿ: ಸತ್ಯಪಾಲ್ ಸಿಂಗ್‌‍ಗೆ ಜಾವಡೇಕರ್ ಪಾಠ

24 Jan, 2018
ಪದ್ಮಾವತ್ ವಿವಾದ: ಮಾಲ್‍ಗಳಿಗೆ ನುಗ್ಗಿ ಕರ್ಣಿ ಸೇನೆ ಕಾರ್ಯಕರ್ತರ ದಾಂಧಲೆ, ವಾಹನಗಳಿಗೆ ಬೆಂಕಿ

ಗುರುಗ್ರಾಮದಲ್ಲಿ ಸೆಕ್ಷನ್ 144 ಜಾರಿ
ಪದ್ಮಾವತ್ ವಿವಾದ: ಮಾಲ್‍ಗಳಿಗೆ ನುಗ್ಗಿ ಕರ್ಣಿ ಸೇನೆ ಕಾರ್ಯಕರ್ತರ ದಾಂಧಲೆ, ವಾಹನಗಳಿಗೆ ಬೆಂಕಿ

24 Jan, 2018