ಮುಂದುವರಿದ ಕಾರ್ಯಾಚರಣೆ

ಮತ್ತೊಮ್ಮೆ ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ: ಜನ್ಮದಿನದಂದೇ ಭಾರತೀಯ ಯೋಧ ಹುತಾತ್ಮ

ಹುತಾತ್ಮ ಯೋಧ ಆರ್‌.ಪಿ ಹಜರಾ ಅವರು ಜನ್ಮದಿನದಂದೇ ಪ್ರಾಣತ್ಯಾಗ ಮಾಡಿದ್ದಾರೆ. ಇವರು ಪಶ್ಚಿಮ ಬಂಗಾಳದ ಮುರ್ಶಿದಾಬಾದ್‌ನವರು. ಇವರನ್ನು 173ನೇ ಬೆಟಾಲಿಯನ್ ಪಡೆಗೆ ನಿಯೋಜಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತೊಮ್ಮೆ ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ: ಜನ್ಮದಿನದಂದೇ ಭಾರತೀಯ ಯೋಧ ಹುತಾತ್ಮ

ಶ್ರೀನಗರ: ಪಾಕಿಸ್ತಾನ ಸೇನೆಯು ಭಾರತೀಯ ಸೇನೆ ಮೇಲೆ ಮತ್ತೊಮ್ಮೆ ಗುಂಡಿನ ದಾಳಿ ನಡೆಸಿದ್ದು, ಸಂಜೆ ಜಮ್ಮುಕಾಶ್ಮೀರದ ಸಾಂಬ ವಲಯದಲ್ಲಿ ಉಭಯ ಪಡೆಗಳ ನಡುವೆ ನಡೆದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಒಬ್ಬ ಬಿಎಸ್‌ಎಫ್ ಯೋಧ ಹುತಾತ್ಮರಾಗಿದ್ದಾರೆ.

ಹುತಾತ್ಮ ಯೋಧ ಆರ್‌.ಪಿ ಹಜರಾ ಅವರು ಜನ್ಮದಿನದಂದೇ ಪ್ರಾಣತ್ಯಾಗ ಮಾಡಿದ್ದಾರೆ. ಇವರು ಪಶ್ಚಿಮ ಬಂಗಾಳದ ಮುರ್ಶಿದಾಬಾದ್‌ನವರು. ಇವರನ್ನು 173ನೇ ಬೆಟಾಲಿಯನ್ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಹಜರಾ ಅವರನ್ನು ಸಾಂಬಾ ಜಿಲ್ಲೆಯ ಹಿರಾ ನಗರದ ಚಕ್ಮಾ ದುಲ್ಮಾ ವಲಯಕ್ಕೆ ನಿಯೋಜಿಸಲಾಗಿತ್ತು. ಸಂಜೆ ಸುಮಾರು 4.15ರ ವೇಳೆ ನಡೆದ ಗುಂಡಿನ ದಾಳಿ ವೇಳೆ ಹಜರಾ ಅವರಿಗೆ ಗುಂಡು ತಗುಲಿದೆ. ತಕ್ಷಣವೇ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದ್ದಾರೆ. 

ಕಳೆದ ಡಿಸೆಂಬರ್ 31ರಂದು ಪೂಂಚ್ ಜಿಲ್ಲೆಯ ನೌಶೆರಾ ವಲಯದ ಬಳಿ ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ ಸೇನೆ ಭಾರತೀಯ ಸೇನೆ ಮೇಲೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿತ್ತು. ಅಲ್ಲದೇ ಡಿಸೆಂಬರ್ 23ರಂದು ನಡೆದ ದಾಳಿಯಲ್ಲಿ ನಾಲ್ವರು ಭಾರತೀಯ ಯೋಧರು ಹುತಾತ್ಮರಾಗಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಜನರ ಮೇಲೆ ಹೇರಿರುವ ‘ವಿದ್ಯುನ್ಮಾನ ಹಿಡಿತ’

ಆಧಾರ್‌ ವ್ಯವಸ್ಥೆ
ಜನರ ಮೇಲೆ ಹೇರಿರುವ ‘ವಿದ್ಯುನ್ಮಾನ ಹಿಡಿತ’

18 Jan, 2018
ಷಡ್ಯಂತ್ರದಲ್ಲಿ ಮೋದಿ ಕೈವಾಡ: ತೊಗಾಡಿಯಾ ಹೊಸ ಬಾಂಬ್‌

ಅಹಮದಾಬಾದ್‌
ಷಡ್ಯಂತ್ರದಲ್ಲಿ ಮೋದಿ ಕೈವಾಡ: ತೊಗಾಡಿಯಾ ಹೊಸ ಬಾಂಬ್‌

18 Jan, 2018

ನವದೆಹಲಿ
ಅನಿಶ್ಚಿತ ಸ್ಥಿತಿಯಲ್ಲಿ ಸೇವಾ ಭವಿಷ್ಯ ಕೆ.ಎ.ಎಸ್‌ ಅಧಿಕಾರಿಗಳ ವಾದ

ನಾನಾ ಹುದ್ದೆಗಳಲ್ಲಿ ಈಗಾಗಲೇ ಹತ್ತು ವರ್ಷಗಳಿಗಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ತಮ್ಮ ನೌಕರಿಯ ಭವಿಷ್ಯವನ್ನು ರಾಜ್ಯ ಹೈಕೋರ್ಟ್ ಪಣಕ್ಕೆ ಒಡ್ಡಿದೆ ಎಂದು 1998,...

18 Jan, 2018

ಸಿಬಿಎಸ್‌ಇ
ಸಿಬಿಎಸ್‌ಇ ಶಾಲೆಗಳಿಗೆ ಇನ್ನು ಮುಂದೆ ಶಾಶ್ವತ ಮಾನ್ಯತೆ ಇಲ್ಲ

ಸಿಬಿಎಸ್ಇ ಪಠ್ಯಕ್ರಮ ಬೋಧಿಸುವ ಶಾಲೆಗಳಿಗೆ ಇನ್ನು ಮುಂದೆ ಶಾಶ್ವತ ಮಾನ್ಯತೆ ನೀಡದಿರಲು ಕೇಂದ್ರ ಪ್ರೌಢ ಶಿಕ್ಷಣ ಶಿಕ್ಷಣ ಮಂಡಳಿ(ಸಿಬಿಎಸ್‌ಇ) ನಿರ್ಧರಿಸಿದೆ.

18 Jan, 2018
ಕಾವೇರಿ: ಕೇಂದ್ರದ ವಿರುದ್ಧ ಪಳನಿ ಗರಂ

ಕಾವೇರಿ ನದಿ ನೀರು ವಿವಾದ
ಕಾವೇರಿ: ಕೇಂದ್ರದ ವಿರುದ್ಧ ಪಳನಿ ಗರಂ

18 Jan, 2018