ಸಿನಿಮಾಗಾಗಿ ಭಾರೀ ವರ್ಕೌಟ್

‘ಜೈ ಲವ ಕುಶ’ದಲ್ಲಿ ತ್ರಿಬಲ್ ಆಕ್ಟಿಂಗ್ ಮಾಡಿ ಅಭಿಮಾನಿಗಳ ಮನಸೂರೆಗೊಂಡಿದ್ದ ಜೂನಿಯರ್ ಎನ್‌ಟಿಆರ್ ಇದೀಗ ಸ್ಟಾರ್ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್‌ ಚಿತ್ರಕ್ಕಾಗಿ ಬಣ್ಣ ಹಚ್ಚಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

ಸಿನಿಮಾಗಾಗಿ ಭಾರೀ ವರ್ಕೌಟ್

‘ಜೈ ಲವ ಕುಶ’ದಲ್ಲಿ ತ್ರಿಬಲ್ ಆಕ್ಟಿಂಗ್ ಮಾಡಿ ಅಭಿಮಾನಿಗಳ ಮನಸೂರೆಗೊಂಡಿದ್ದ ಜೂನಿಯರ್ ಎನ್‌ಟಿಆರ್ ಇದೀಗ ಸ್ಟಾರ್ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್‌ ಚಿತ್ರಕ್ಕಾಗಿ ಬಣ್ಣ ಹಚ್ಚಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಫೆಬ್ರುವರಿಯಿಂದ ಚಿತ್ರೀಕರಣ ಆರಂಭವಾಗಲಿರುವ ಈ ಚಿತ್ರಕ್ಕಾಗಿ ಎನ್‌ಟಿಆರ್‌ ಸಿದ್ಧತೆ ಆರಂಭಿಸಿದ್ದಾರೆ. ಚಿತ್ರದಲ್ಲಿ ಅವರದು ಸೇನಾಧಿಕಾರಿಯ ಪಾತ್ರ ಎನ್ನಲಾಗಿದೆ.

ಬಾಲಿವುಡ್‌ನ ಹೃತಿಕ್ ರೋಶನ್, ರಣವೀರ್ ಸಿಂಗ್‌ ಅವರಂಥ ಸ್ಟಾರ್‌ಗಳಿಗೆ ಫಿಟ್‌ನೆಸ್ ಪಾಠ ಹೇಳುವ ಲಾಯ್ಡ್‌ ಸ್ಟೀವನ್ಸ್‌ ಮಾರ್ಗದರ್ಶನದಲ್ಲಿ ಎನ್‌ಟಿಆರ್‌ ದೇಹ ಹುರಿಗಟ್ಟಿಸುತ್ತಿದ್ದಾರೆ. ಚಿತ್ರದಲ್ಲಿ ಎನ್‌ಟಿಆರ್‌ ಸಿಕ್ಸ್‌ ಪ್ಯಾಕ್ ತೋರಿಸುವ ದೃಶ್ಯಗಳೂ ಇವೆ ಎಂದು ಹೇಳಲಾಗುತ್ತಿದೆ.

‘ನಾನಕು ಪ್ರೇಮತೋ’, ‘ಜನತಾ ಗ್ಯಾರೇಜ್’ ಮತ್ತು ‘ಜೈ ಲವ ಕುಶ’ ಮೂಲಕ ಮೂರು ಸತತ ಹಿಟ್‌ ಚಿತ್ರಗಳನ್ನು ನೀಡಿರುವ ಎನ್‌ಟಿಆರ್‌ಗೆ ತ್ರಿವಿಕ್ರಮ್ ಗರಡಿಯಲ್ಲಿ ಇದು ಮೊದಲ ಸಿನಿಮಾ. ಪವನ್‌ ಕಲ್ಯಾಣ್ ಅಭಿನಯದ ‘ಅಜ್ಞಾತವಾಸಿ’ಯ ನಾಯಕಿ ಅನು ಎಮ್ಯಾನ್ಯುಯಲ್ ಅವರನ್ನೇ ತ್ರಿವಿಕ್ರಮ್ ನಾಯಕಿ ಪಟ್ಟಕ್ಕೆ ಆರಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

Comments
ಈ ವಿಭಾಗದಿಂದ ಇನ್ನಷ್ಟು
ಹೃದಯಗಳ ಭಾಷೆ

ನಗರದ ಅತಿಥಿ
ಹೃದಯಗಳ ಭಾಷೆ

22 Jan, 2018
‘ಬಜಾರ್‌’ನಲ್ಲಿ ಪಾರಿವಾಳಗಳ ಬೆಟ್ಟಿಂಗ್

ಸಿನಿಹನಿ
‘ಬಜಾರ್‌’ನಲ್ಲಿ ಪಾರಿವಾಳಗಳ ಬೆಟ್ಟಿಂಗ್

22 Jan, 2018
ಐವರು ಹೆಂಡತಿಯರ ಥಕಧಿಮಿತ

ಸಿನಿಹನಿ
ಐವರು ಹೆಂಡತಿಯರ ಥಕಧಿಮಿತ

22 Jan, 2018
ಕಪ್ಪು ಲೋಕಕ್ಕೆ ದೊಂದಿ ಬೆಳಕು

ನಾ ಕಂಡ ಬದುಕು
ಕಪ್ಪು ಲೋಕಕ್ಕೆ ದೊಂದಿ ಬೆಳಕು

22 Jan, 2018
‘ಬ್ರಹ್ಮಾಸ್ತ್ರ’ದ ಬೆಡಗಿ ದೀಪಾ

ಕಿರುತೆರೆ
‘ಬ್ರಹ್ಮಾಸ್ತ್ರ’ದ ಬೆಡಗಿ ದೀಪಾ

22 Jan, 2018