ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರನ್ನು ಸೆಳೆಯುತ್ತಿದ್ದಾಳೆ ‘ಮದುಮಗಳು’

Last Updated 3 ಜನವರಿ 2018, 19:30 IST
ಅಕ್ಷರ ಗಾತ್ರ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಾಂಸ್ಕೃತಿಕ ಕನಸಿನಂತಿರುವ ಕಲಾಗ್ರಾಮವೀಗ ರಂಗಪ್ರೇಮಿಗಳಿಂದ ತುಂಬಿತುಳುಕುತ್ತಿದೆ. ರಾಜ್ಯದ ಭೌಗೋಳಿಕ ಮತ್ತು ಸಾಂಸ್ಕೃತಿಕ ವೈಭವಗಳ ನೆಲೆಯಾದ ವೇದಿಕೆಯಲ್ಲೀಗ ಮದುಮಗಳ ಸಂಭ್ರಮ. ರಾಷ್ಟ್ರೀಯ ನಾಟಕ ಶಾಲೆ ಡಿ.29ರಿಂದ ನಗರದ ಕಲಾಗ್ರಾಮದಲ್ಲಿ ಆಯೋಜಿಸಿರುವ ರಸಋಷಿ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿ ಆಧರಿತ ನಾಟಕ ಪ್ರದರ್ಶನ ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧೆಡೆಗಳಿಂದ ಜನಸಾಗರ ಹರಿದು ಬರುತ್ತಿದೆ.

ರಂಗಾಸಕ್ತರು ಹಾಗೂ ಸಾಹಿತ್ಯಾಸಕ್ತರ ಸಂಗಮಕ್ಕೆ ರಂಗಮಂದಿರ ಸಾಕ್ಷಿಯಾಗಿದೆ. ಮೈಸೂರಿನ ರಂಗಾಯಣದಿಂದ ಆರಂಭವಾದ ರಂಗಪಯಣ ಕಲಾಗ್ರಾಮದಲ್ಲಿ ಈಗಾಗಲೇ 60 ಪ್ರದರ್ಶನಗಳನ್ನು ಪೂರೈಸಿದ್ದರೂ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗಿಲ್ಲ. ಚಳಿಯ ನಡುವೆಯೂ ಮದುಮಗಳ ಬೆಚ್ಚನೆಯ ಭಾವದಲ್ಲಿ ಬಂಧಿಯಾಗಲು ಕಲಾಸಕ್ತರು ಕಾತರಿದಿಂದ ಕಲಾಗ್ರಾಮಕ್ಕೆ ದಾಂಗುಡಿ ಇಡುತ್ತಿದ್ದಾರೆ.

ಕನ್ನಡ ನಾಟಕ ಪರಂಪರೆ ಕೇವಲ ಒಳಾಂಗಣದ ರಂಗಮಂದಿರಗಳ ಚೌಕಟ್ಟಿನಲ್ಲಿ ಬಂಧಿಯಾಗಿ ಏಕತಾನತೆನಿಂದ ನಲುಗಿದ್ದಾಗ ರಂಗಭೂಮಿಗೆ ಹೊಸ ಭಾಷ್ಯ ಬರೆದ ನಾಟಕ ‘ಮಲೆಗಳಲ್ಲಿ ಮದುಮಗಳು’. ರಂಗಪ್ರಯೋಗದಲ್ಲಿ ಪಾಶ್ಚಾತ್ಯ ಮಾದರಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಕುತೂಹಲಕ್ಕೆ ಕಾರಣವಾಗಿತ್ತು. ಕಲಾಗ್ರಾಮದಲ್ಲಿನ ಕೆರೆಯಂಗಳರಂಗ, ಬಿದಿರುಮೆಳೆರಂಗ, ಬಯಲುರಂಗ ಮತ್ತು ಹೊಂಗೆರಂಗದಲ್ಲಿ ಮದುಮಗಳು ನಲಿಯುತ್ತಿದ್ದಾಳೆ.

ರಾತ್ರಿ 8.30ಕ್ಕೆ ಆರಂಭವಾಗುವ ನಾಟಕ ಮುಂಜಾನೆ 5.30ಕ್ಕೆ ಮುಗಿಯುತ್ತದೆ. ಪ್ರತಿ ಸೋಮವಾರ ಬುಧವಾರ, ಶುಕ್ರವಾರ ಹಾಗೂ ಶನಿವಾರ ಪ್ರದರ್ಶನಗೊಳ್ಳುತ್ತಿರುವ ನಾಟಕವನ್ನು ಕಲಾಸಕ್ತರು ಆರಂಭದಿಂದ ಅಂತ್ಯದವರೆಗೂ ಅದೇ ಆಸಕ್ತಿಯಿಂದ ವೀಕ್ಷಿಸುತ್ತಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT