ಗ್ರಾಮೀಣ ಪ್ರದೇಶಗಳಿಗೆ ಶಿಕ್ಷಕರ ವರ್ಗಾವಣೆ

... ಹಾಸಿ ಕೊಟ್ಟಂತೆ!

ಕೆಲಸ ಮಾಡದವರನ್ನು ಸೇವೆಯಿಂದ ವಜಾಗೊಳಿಸುವುದು ಬಿಟ್ಟು ಗ್ರಾಮಗಳಿಗೆ ಅಟ್ಟಿದರೆ ವ್ಯವಸ್ಥೆ ಸರಿಯಾಗುತ್ತದೆಯೇ? ಸರ್ಕಾರವೇ ಪರೋಕ್ಷವಾಗಿ ‘ನೀವು ಹೋಗಿ ಹಳ್ಳಿಗಳಲ್ಲಿ ಏನು ಬೇಕಾದರೂ ಮಾಡಿಕೊಳ್ಳಿ, ನಡೆಯುತ್ತದೆ’ ಎಂದಂತಾಯಿತಲ್ಲವೇ? ನಿದ್ದೆ ಬರುವವನಿಗೆ ಹಾಸಿ ಕೊಟ್ಟಂತೆ.

ಸರಿಯಾಗಿ ಪಾಠ ಮಾಡದ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಗ್ರಾಮೀಣ ಪ್ರದೇಶಗಳಿಗೆ ವರ್ಗಾವಣೆ ಮಾಡಲು ಗಂಭೀರ ಚಿಂತನೆ ಮಾಡುತ್ತಿದೆಯಂತೆ ಸರ್ಕಾರ (ಪ್ರ.ವಾ., ಜ.3).

ಕೆಲಸ ಮಾಡದವರನ್ನು ಸೇವೆಯಿಂದ ವಜಾಗೊಳಿಸುವುದು ಬಿಟ್ಟು ಗ್ರಾಮಗಳಿಗೆ ಅಟ್ಟಿದರೆ ವ್ಯವಸ್ಥೆ ಸರಿಯಾಗುತ್ತದೆಯೇ? ಸರ್ಕಾರವೇ ಪರೋಕ್ಷವಾಗಿ ‘ನೀವು ಹೋಗಿ ಹಳ್ಳಿಗಳಲ್ಲಿ ಏನು ಬೇಕಾದರೂ ಮಾಡಿಕೊಳ್ಳಿ, ನಡೆಯುತ್ತದೆ’ ಎಂದಂತಾಯಿತಲ್ಲವೇ? ನಿದ್ದೆ ಬರುವವನಿಗೆ ಹಾಸಿ ಕೊಟ್ಟಂತೆ. ಕೆಲಸ ಮಾಡದವರು ಕಣ್ಗಾವಲು ವ್ಯವಸ್ಥೆಯಿಂದ ದೂರವಿದ್ದು, ಇನ್ನೂ ಚೆನ್ನಾಗಿ ಗೊರಕೆ ಹೊಡೆಯುವರೆಂಬ ಪರಿಜ್ಞಾನ ಬೇಡವೇ?

ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ಕೊಡುವುದು ಶಿಕ್ಷಕರ ಕೆಲಸ. ಪೇಟೆಯ ಮಕ್ಕಳಿಗೆ ಮಾತ್ರ ಅದು ಸರಿಯಾಗಿ ಸಿಗಬೇಕು, ಗ್ರಾಮೀಣ ಮಕ್ಕಳು ಹೇಗಿದ್ದರೂ ನಡೆಯುತ್ತದೆ ಎಂಬುದು ಸರ್ಕಾರದ ಚಿಂತನೆಯೇ? ಸರ್ಕಾರಿ ಪ್ರಾಯೋಜಿತ ಈ ತರಹದ ಅಸಮಾನತೆಯನ್ನು ಗ್ರಾಮೀಣ ಭಾಗದ ಜನರು ಪ್ರತಿಭಟಿಸಬೇಕಾಗಿದೆ. ಎಲ್ಲಾ ಸರ್ಕಾರಗಳೂ ಗ್ರಾಮೀಣ ಭಾಗದ ಜನರನ್ನು ನಿರ್ಲಕ್ಷಿಸುತ್ತಾ ಬಂದಿವೆ.

ನಗರಗಳಲ್ಲಿ ಹಲವಾರು ವರ್ಷಗಳು ಓಡಿ, ಹಾಳಾಗಿ ಗುಜರಿಗೆ ಸೇರಬೇಕಾದಂಥ ಬಸ್ಸುಗಳನ್ನು ಗ್ರಾಮೀಣ ಭಾಗಕ್ಕೆ ಕಳುಹಿಸಲಾಗುತ್ತದೆ. ಬೆಂಗಳೂರಿನ ಕಸ, ಕೊಳಕುಗಳನ್ನು ತಂದು ಪಕ್ಕದ ಹಳ್ಳಿಗಳಲ್ಲಿ ಸುರಿಯಲಾಗುತ್ತದೆ. ಇಂಥ ಹತ್ತು ಹಲವು ಉದಾಹರಣೆಗಳಿವೆ. ವ್ಯವಸ್ಥೆಯ ದ್ವಂದ್ವ ನೀತಿ ಇದೇ ಅಲ್ಲವೇ?

–ಡಾ. ಮನೋಜ ಗೋಡಬೋಲೆ, ಉಜಿರೆ

 

Comments
ಈ ವಿಭಾಗದಿಂದ ಇನ್ನಷ್ಟು

ವಾಚಕರವಾಣಿ
ಅಜ್ಞಾನದ ಪ್ರದರ್ಶನ!

‘ಪ್ರಕಾಶ್‌ ರೈ ಮಾತನಾಡಿದ್ದ ಸ್ಥಳ ಸ್ವಚ್ಛತೆ’ (ಪ್ರ.ವಾ., ಜ.16) ವರದಿ ಓದಿ ಬೇಸರ ವೆನಿಸಿತು. ಇಂದಿನ ತಂತ್ರಜ್ಞಾನ ಯುಗದಲ್ಲೂ ಇಂತಹ ಅರ್ಥವಿಲ್ಲದ ಕಾರ್ಯಕ್ರಮಗಳು ನಡೆಯುತ್ತಿರುವುದು...

17 Jan, 2018

ವಾಚಕರವಾಣಿ
ಅಳಲು ಕೇಳಿಸದೇ?

ಸರ್ಕಾರದ ವಿವಿಧ ಆರೋಗ್ಯ ಯೋಜನೆಗಳಡಿ, 12 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಶುಶ್ರೂಷಕರ ಅಳಲು ಸರ್ಕಾರಕ್ಕೆ ಏಕೆ ಕೇಳಿಸುತ್ತಿಲ್ಲ?

17 Jan, 2018

ವಾಚಕರವಾಣಿ
ಅರ್ಥಪೂರ್ಣ...

ಇತ್ತೀಚೆಗೆ ಸುಪ್ರೀಂ ಕೋರ್ಟ್‌ನ ನಾಲ್ಕು ಮಂದಿ ನ್ಯಾಯಮೂರ್ತಿಗಳ ಸಾಂಕೇತಿಕ ಪ್ರತಿಭಟನೆ ಭಾರತದ ಜನಸಾಮಾನ್ಯರ ಮುಂದೆ ನಾನಾ ಪ್ರಶ್ನೆಗಳನ್ನು ಇಟ್ಟಿದೆ. ಇದಕ್ಕೆ ಸಂಬಂಧಿಸಿದಂತೆ ಎ.ನಾರಾಯಣ ಅವರು...

17 Jan, 2018

ವಾಚಕರವಾಣಿ
ನಿಯಂತ್ರಣ ಅಗತ್ಯ

ಮಂಗಳೂರಿನ ಕಾಲೇಜೊಂದರ ವಿದ್ಯಾರ್ಥಿನಿಯರು, ರಸ್ತೆಯಲ್ಲೇ ಡ್ಯಾನ್ಸ್ ಮಾಡಿ ಕೆಲವು ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತಗೊಳಿಸಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ.

17 Jan, 2018

ವಾಚಕರವಾಣಿ
‘ರಾಜಕಾರಣ’

ಇವರು ಹೋದಲ್ಲೇ ಅವರ ಪ್ರಚಾರ! ಇವರು ಹೇಳಿದ್ದರಲ್ಲಿ

17 Jan, 2018