ಮಗುವಿನ ಮೇಲೆ ಅತ್ಯಾಚಾರ ಪ್ರಕರಣ

ಅತ್ಯಾಚಾರಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಅನಾರೋಗ್ಯದಿಂದ ಬಳಲುತ್ತಿದ್ದ ಪೋಷಕರು ಮಗುವಿನ ಆರೈಕೆಯ ಹೊಣೆಯನ್ನು ಹುಸೇನ್‌ಗೆ ವಹಿಸಿದ್ದರು. ಬೆಂಗಳೂರು– ಮೈಸೂರು ರಸ್ತೆಯ ಕಂಟ್ರಿ ಕ್ಲಬ್‌ ಹಿಂಭಾಗದ ಗುಡಿಸಲಿನಲ್ಲಿ 2015ರ ಅ.30ರಂದು ಮಗು ಕೊಲೆಯಾಗಿತ್ತು. ಅನುಮಾನ ವ್ಯಕ್ತಪಡಿಸಿದ ಪೋಷಕರು ಮೇಟಗಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಸಾಂದರ್ಭಿಕ ಚಿತ್ರ

ಮೈಸೂರು: ಎರಡೂವರೆ ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿ ಕತ್ತುಹಿಸುಕಿ ಕೊಲೆ ಮಾಡಿದ ಸದ್ದಾಂ ಹುಸೇನ್‌ (30) ಎಂಬಾತನಿಗೆ ಪೋಕ್ಸೊ ವಿಶೇಷ ನ್ಯಾಯಾಲಯ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಬುಧವಾರ ಆದೇಶ ನೀಡಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ ಪೋಷಕರು ಮಗುವಿನ ಆರೈಕೆಯ ಹೊಣೆಯನ್ನು ಹುಸೇನ್‌ಗೆ ವಹಿಸಿದ್ದರು. ಬೆಂಗಳೂರು– ಮೈಸೂರು ರಸ್ತೆಯ ಕಂಟ್ರಿ ಕ್ಲಬ್‌ ಹಿಂಭಾಗದ ಗುಡಿಸಲಿನಲ್ಲಿ 2015ರ ಅ.30ರಂದು ಮಗು ಕೊಲೆಯಾಗಿತ್ತು. ಅನುಮಾನ ವ್ಯಕ್ತಪಡಿಸಿದ ಪೋಷಕರು ಮೇಟಗಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.

‘ಮಗುವಿನ ಮೈಮೇಲೆ ಗಾಯಗಳಾಗಿದ್ದವು. ಗುಪ್ತಾಂಗದಲ್ಲಿ ರಕ್ತ ವಸರುತಿತ್ತು. ಇದನ್ನು ಗಮನಿಸಿದ ನೆರೆಹೊರೆಯವರು ಮಗುವಿನ ತಂದೆಗೆ ಮಾಹಿತಿ ನೀಡಿದ್ದರು. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯಡಿ (ಪೋಕ್ಸೊ) ಪ್ರಕರಣ ದಾಖಲಾಗಿತ್ತು. ಅತ್ಯಾಚಾರ ನಡೆದಿರುವುದನ್ನು ವೈದ್ಯಕೀಯ ವರದಿ ದೃಢಪಡಿಸಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶ ವಿ.ಎಂ.ಪಾವಲೆ ಈ ಆದೇಶ ನೀಡಿದ್ದಾರೆ’ ಎಂದು ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್ ಬಿ.ಸಿ.ಶಿವರುದ್ರಸ್ವಾಮಿ ತಿಳಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಲಿಂಗಾಯತ ಧರ್ಮಕ್ಕೆ ಶಿಫಾರಸು: ಸಿದ್ಧಗಂಗಾ ಮಠ ಸ್ವಾಗತ

ತುಮಕೂರು
ಲಿಂಗಾಯತ ಧರ್ಮಕ್ಕೆ ಶಿಫಾರಸು: ಸಿದ್ಧಗಂಗಾ ಮಠ ಸ್ವಾಗತ

21 Mar, 2018
ಸ್ಪೀಕರ್‌ಗೆ ಹೈಕೋರ್ಟ್‌ ಪ್ರಶ್ನೆ

ತೀರ್ಪು ಕಾಯ್ದಿಟ್ಟುಕೊಂಡು ಏನು ಮಾಡುತ್ತಾರೆ
ಸ್ಪೀಕರ್‌ಗೆ ಹೈಕೋರ್ಟ್‌ ಪ್ರಶ್ನೆ

21 Mar, 2018
ನಾರಾಯಣ ಗುರು ಸ್ಮರಣೆ

ಕರಾವಳಿಯಲ್ಲಿ ಕಾಂಗ್ರೆಸ್‌ನಿಂದ ಜನಾಶೀರ್ವಾದ ಯಾತ್ರೆ
ನಾರಾಯಣ ಗುರು ಸ್ಮರಣೆ

21 Mar, 2018
ಪರ– ವಿರೋಧಕ್ಕೆ ಜಾಲತಾಣ ವೇದಿಕೆ

ವೈರಲ್ ಪೋಸ್ಟ್
ಪರ– ವಿರೋಧಕ್ಕೆ ಜಾಲತಾಣ ವೇದಿಕೆ

21 Mar, 2018

ಅಲ್ಪಸಂಖ್ಯಾತ ಧರ್ಮದ ಮಾನ್ಯತೆ
ಗೃಹ ಸಚಿವಾಲಯದಿಂದ ಶಿಫಾರಸು ಪರಿಶೀಲನೆ

ಲಿಂಗಾಯತ ಮತ್ತು ವೀರಶೈವ ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಅಲ್ಪಸಂಖ್ಯಾತ ಧರ್ಮದ ಮಾನ್ಯತೆ ನೀಡುವಂತೆ ಕರ್ನಾಟಕ ಸರ್ಕಾರ ಕಳುಹಿಸಿರುವ ಶಿಫಾರಸು ಕೇಂದ್ರ ಗೃಹ ಸಚಿವಾಲಯಕ್ಕೆ ಪರಿಶೀಲನೆಗೆ...

21 Mar, 2018