ಲಿಂಗಾಯತ ಧರ್ಮದ ಹೋರಾಟ

ಶಾಲಾ ಪ್ರಮಾಣ ಪತ್ರದಲ್ಲಿ ಏನಿದೆ ನೋಡಿ: ಯಡಿಯೂರಪ್ಪಗೆ ಬಸವರಾಜ ಹೊರಟ್ಟಿ ಸವಾಲು

ಸಮಾಜದ ಯುವಕರಿಗೆ ಉದ್ಯೋಗದ ವಿಷಯದಲ್ಲಿ ಅನ್ಯಾಯವಾಗುತ್ತಿದೆ. ಇದನ್ನು ಸರಿಪಡಿಸಲು ಹೋರಾಟ ಮಾಡಲಾಗುತ್ತಿದೆ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶ ಇಲ್ಲ. –ಬಸವರಾಜ ಹೊರಟ್ಟಿ

ಬಿ.ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಹೊರಟ್ಟಿ

ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ‘ವೀರಶೈವ ಲಿಂಗಾಯತರ ಬಗ್ಗೆ ಏಳು ತಿಂಗಳ ಬಳಿಕ ಮೊದಲ ಬಾರಿಗೆ ಬಾಯಿಬಿಟ್ಟಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಕ್ರಮವನ್ನು ಸ್ವಾಗತಿಸುತ್ತೇನೆ. ಆದರೆ, ಅವರ ಶಾಲಾ ಪ್ರಮಾಣ ಪತ್ರದಲ್ಲಿ ವೀರಶೈವ ಇದೆಯೋ ಅಥವಾ ಲಿಂಗಾಯತ ಎಂದು ಬರೆದಿದೆಯೋ ಎನ್ನುವುದನ್ನು ಸ್ಪಷ್ಟಪಡಿಸಲಿ’ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಸವಾಲು ಹಾಕಿದರು.

ಜೆಡಿಎಸ್ ಕಾರ್ಯಕರ್ತರ ಸಭೆ ಬಳಿಕ ಅವರು ಬುಧವಾರ ಸುದ್ದಿಗಾರರ ಜತೆ ಮಾತನಾಡಿದರು.

‘ವೀರಶೈವ ಎನ್ನುವುದು ಯಾವಾಗ ಬಂತು. ಇದನ್ನು ಯಾರು ಮತ್ತು ಏಕೆ ಮಾಡಿದ್ದಾರೆ ಎನ್ನುವುದನ್ನು ಯಡಿಯೂರಪ್ಪ ಹೇಳಬೇಕು. ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಕೊಡಿಸಿದರೆ ಅವರ ಹಿಂದೆ ನಾವು ಹೋಗುತ್ತೇವೆ. ಇಲ್ಲದಿದ್ದರೆ ಅವರು ಧಾರ್ಮಿಕವಾಗಿ ನಮ್ಮ ಹಿಂದೆ ಬರಲಿ’ ಎಂದು ಅವರು ಸಲಹೆ ನೀಡಿದರು.

‘ಸಮಾಜದ ಯುವಕರಿಗೆ ಉದ್ಯೋಗದ ವಿಷಯದಲ್ಲಿ ಅನ್ಯಾಯವಾಗುತ್ತಿದೆ. ಇದನ್ನು ಸರಿಪಡಿಸಲು ಹೋರಾಟ ಮಾಡಲಾಗುತ್ತಿದೆ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

‘ಸಮಾಜದ ಎಲ್ಲ ಸ್ವಾಮೀಜಿಗಳು ಒಂದಾಗಿ ಈ ಸಮಸ್ಯೆ ಬಗೆಹರಿಸಿದರೆ ನಮ್ಮದೇನು ಅಭ್ಯಂತರ ಇಲ್ಲ. ಸಮಾಜ ಇಂದು ಈ ಸ್ಥಿತಿಗೆ ಬರಲು ಕೆಲ ಸ್ವಾಮೀಜಿಗಳೇ ಕಾರಣ’ ಎಂದು ಅವರು ಟೀಕಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು
ಕೊಪ್ಪಳದಿಂದ ಅಮರೇಶ್‌ಗೆ ಬಿಜೆಪಿ ಬಿ.ಫಾರಂ

ಈಗಾಗಲೇ ನಾಮಪತ್ರ ಸಲ್ಲಿಸಿರುವ ಸಿ.ವಿ.ಚಂದ್ರಶೇಖರ
ಕೊಪ್ಪಳದಿಂದ ಅಮರೇಶ್‌ಗೆ ಬಿಜೆಪಿ ಬಿ.ಫಾರಂ

23 Apr, 2018
ಮಂಡ್ಯದಿಂದ 'ಐದು ರೂಪಾಯಿ ವೈದ್ಯ' ಡಾ.ಎಸ್.ಸಿ.ಶಂಕರೇಗೌಡ ಪಕ್ಷೇತರ ಅಭ್ಯರ್ಥಿ

ಕರ್ನಾಟಕ ವಿಧಾನಸಭೆ ಚುನಾವಣೆ 2018
ಮಂಡ್ಯದಿಂದ 'ಐದು ರೂಪಾಯಿ ವೈದ್ಯ' ಡಾ.ಎಸ್.ಸಿ.ಶಂಕರೇಗೌಡ ಪಕ್ಷೇತರ ಅಭ್ಯರ್ಥಿ

23 Apr, 2018
ಬಿಜೆಪಿ ನಾಲ್ಕನೇ ಪಟ್ಟಿ ಬಿಡುಗಡೆ: ಯಶವಂತಪುರದಿಂದ ಜಗ್ಗೇಶ್‌, ಕನಕಪುರದಿಂದ ನಂದಿನಿ ಗೌಡ

ಇನ್ನೂ 4 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಇಲ್ಲ
ಬಿಜೆಪಿ ನಾಲ್ಕನೇ ಪಟ್ಟಿ ಬಿಡುಗಡೆ: ಯಶವಂತಪುರದಿಂದ ಜಗ್ಗೇಶ್‌, ಕನಕಪುರದಿಂದ ನಂದಿನಿ ಗೌಡ

23 Apr, 2018
ಹಾಸನದ ಹಿಮ್ಸ್‌ನಲ್ಲಿ ಮಗು ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ

ನವಜಾತ ಶಿಶು ಘಟಕ
ಹಾಸನದ ಹಿಮ್ಸ್‌ನಲ್ಲಿ ಮಗು ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ

23 Apr, 2018

ದಾವಣಗೆರೆ
ವೃದ್ಧನಿಂದ ದುಷ್ಕೃತ್ಯ

ಆರು ವರ್ಷದ ಬಾಲಕಿಯ ಮೇಲೆ ವೃದ್ಧನೊಬ್ಬ ನಗರದಲ್ಲಿ ಈಚೆಗೆ ಅತ್ಯಾಚಾರ ನಡೆಸಿದ್ದು, ಈ ಬಗ್ಗೆ ಇಲ್ಲಿನ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಭಾನುವಾರ ಪೋಕ್ಸೊ ಕಾಯ್ದೆಯಡಿ...

22 Apr, 2018