ಕೇಂದ್ರಕ್ಕೆ ಸುಶೀಲ್‌ ಮೋದಿ ಸಲಹೆ

‘ಇ–ವೇ ಬಿಲ್‌ ದೋಷಮುಕ್ತವಾಗಿರಲಿ’

ಫೆಬ್ರುವರಿ1 ರಿಂದ ರಾಜ್ಯಗಳ ಮಧ್ಯೆ ಸರಕು ಸಾಗಿಸುವಾಗಇ–ವೇ ಬಿಲ್‌ ಇಟ್ಟುಕೊಳ್ಳಬೇಕಿದೆ. ಇದಕ್ಕೆ ಅನುಕೂಲ ಆಗುವಂತೆ ದೋಷಮುಕ್ತ ಇ–ವೇ ಬಿಲ್‌ ವ್ಯವಸ್ಥೆ ಹಾಗೂ 24 ಗಂಟೆಯೂ ಕಾರ್ಯನಿರ್ವಹಿಸುವ ಸಹಾಯವಾಣಿ ಜಾರಿಗೆ ತರುವಂತೆಯೂ ಸರ್ಕಾರವನ್ನು ಒತ್ತಾಯಿಸಿದ್ದಾರೆ.

‘ಇ–ವೇ ಬಿಲ್‌ ದೋಷಮುಕ್ತವಾಗಿರಲಿ’

ನವದೆಹಲಿ: ‘ಇ–ವೇ ಬಿಲ್‌ ಜಾರಿಗೊಳಿಸುವುದಕ್ಕೂ ಮುನ್ನ ಅದು ತಾಂತ್ರಿಕ ದೋಷಗಳಿಂದ ಮುಕ್ತವಾಗಿದೆ ಎನ್ನುವುದನ್ನು ಖಾತರಿಪಡಿಸಿಕೊಳ್ಳುವ ಅಗತ್ಯವಿದೆ’ ಎಂದು ಬಿಹಾರದ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಹೇಳಿದ್ದಾರೆ.

ಫೆಬ್ರುವರಿ1 ರಿಂದ ರಾಜ್ಯಗಳ ಮಧ್ಯೆ ಸರಕು ಸಾಗಿಸುವಾಗಇ–ವೇ ಬಿಲ್‌ ಇಟ್ಟುಕೊಳ್ಳಬೇಕಿದೆ. ಇದಕ್ಕೆ ಅನುಕೂಲ ಆಗುವಂತೆ ದೋಷಮುಕ್ತ ಇ–ವೇ ಬಿಲ್‌ ವ್ಯವಸ್ಥೆ ಹಾಗೂ 24 ಗಂಟೆಯೂ ಕಾರ್ಯನಿರ್ವಹಿಸುವ ಸಹಾಯವಾಣಿ ಜಾರಿಗೆ ತರುವಂತೆಯೂ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ವ್ಯವಸ್ಥೆಯ ಕುರಿತು ಕೇಂದ್ರ ಹಣಕಾಸು ಕಾರ್ಯದರ್ಶಿ ಹಸ್ಮುಖ್‌ ಆಧಿಯಾಗೆ ಪತ್ರ ಬರೆದಿರುವ ಅವರು ‘ಇ–ವೇ ಬಿಲ್ ಪಡೆಯುಲು ಮತ್ತು ಪರಿಶೀಲನೆಗೆ ಒಂದು ಏಕರೂಪದ ಮಾನದಂಡ ರೂಪಿಸುವ ಅಗತ್ಯವಿದೆ. ವ್ಯವಸ್ಥೆಯನ್ನು ಜಾರಿಗೊಳಿಸುವ ಮುನ್ನ ಅದರಲ್ಲಿ ಯಾವುದೇ ಸಮಸ್ಯೆಗಳು ಉದ್ಭವಿಸದಂತೆ ಪರಿಶೀಲಿಸುವ ಅಗತ್ಯವಿದೆ’ ಎಂದು ಪತ್ರದಲ್ಲಿ ಹೇಳಿದ್ದಾರೆ.

‘ಇ–ವೇ ಬಿಲ್‌ಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಜಿಎಸ್‌ಟಿ ಮಂಡಳಿ ಅಥವಾ ರೆವಿನ್ಯೂ ಇಲಾಖೆಯ ನೋಡಲ್‌ ಅಧಿಕಾರಿಯನ್ನು ನೇಮಿಸಲಾಗಿದೆ’ ಎಂದೂ ಅವರು ತಿಳಿಸಿದ್ದಾರೆ.

‘ಒಮ್ಮೆ ಈ ವ್ಯವಸ್ಥೆ ಜಾರಿಗೆ ಬಂದರೆ ತೆರಿಗೆ ತಪ್ಪಿಸುವ ಪ್ರವೃತ್ತಿಗೆ ಕಡಿವಾಣ ಬೀಳಲಿದೆ. ₹ 50,000 ಮೌಲ್ಯದ ಸರಕುಗಳು ಎಲ್ಲಿಗೆ ಸಾಗುತ್ತಿದೆ ಎನ್ನುವ ಮಾಹಿತಿ ಸರ್ಕಾರಕ್ಕೆ ಬಹಳ ಸರಳವಾಗಿ ಲಭ್ಯವಾಗುತ್ತದೆ’ ಎಂದು ಸುಶೀಲ್ ಹೇಳಿದ್ದಾರೆ.

ಏನಿದು ಇ–ವೇ ಬಿಲ್‌ ? ಜಿಎಸ್‌ಟಿಯಲ್ಲಿ, ಸರಕುಗಳನ್ನು ರಾಜ್ಯದ ಒಳಗೆ ಮತ್ತು ರಾಜ್ಯದಿಂದ ರಾಜ್ಯಕ್ಕೆ ಸಾಗಿಸಲು ಇ–ವೇ ಬಿಲ್ ವ್ಯವಸ್ಥೆ ರೂಪಿಸಲಾಗಿದೆ.

₹50 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ಸರಕುಗಳನ್ನು 10 ಕಿ.ಮೀ ಆಚೆಗೆ ಸಾಗಿಸುವ ಮುಂಚೆಯೇ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ. ಸರಕು ಸಾಗಿಸುವ ದೂರ ಆಧರಿಸಿ ಬಿಲ್‌ನ ಸಿಂಧುತ್ವ ಜಾರಿಯಲ್ಲಿ ಇರುತ್ತದೆ. ಸರಕು ಸಾಗಿಸುವ ದೂರ ಆಧರಿಸಿ 1ರಿಂದ 20 ದಿನಗಳವರೆಗೆ ಸಿಂಧುತ್ವ ಹೊಂದಿರುವ ಇ–ವೇ ಬಿಲ್‌ಗಳನ್ನು ಜಿಎಸ್‌ಟಿಎನ್‌ ವಿತರಿಸಲಿದೆ.

ಸರಕುಗಳನ್ನು ಸಾಗಿಸುವವರು ತಮ್ಮ ಜತೆ ಸರಕುಪಟ್ಟಿ, ಪೂರೈಕೆ ಬಿಲ್‌ ಅಥವಾ ಇ–ವೇ ಬಿಲ್‌ ಹೊಂದಿರಬೇಕು. ತೆರಿಗೆ ಅಧಿಕಾರಿಗಳು ಮಾರ್ಗಮಧ್ಯೆ ತಪಾಸಣೆ ನಡೆಸುವ ಅಧಿಕಾರ ಹೊಂದಿರುತ್ತಾರೆ.

Comments
ಈ ವಿಭಾಗದಿಂದ ಇನ್ನಷ್ಟು
ವರ್ತಕರಿಗೆ ಶುಲ್ಕರಹಿತ ‘ಪೇಟಿಎಂ ಕ್ಯೂಆರ್‌’

ಬೆಂಗಳೂರು
ವರ್ತಕರಿಗೆ ಶುಲ್ಕರಹಿತ ‘ಪೇಟಿಎಂ ಕ್ಯೂಆರ್‌’

23 Jan, 2018
2ನೇ ಪೀಳಿಗೆಯ ಔಡಿ ಕ್ಯೂ5 ಬಿಡುಗಡೆ

ಬೆಲೆ ₹ 53.25 ಲಕ್ಷ
2ನೇ ಪೀಳಿಗೆಯ ಔಡಿ ಕ್ಯೂ5 ಬಿಡುಗಡೆ

23 Jan, 2018

ನವದೆಹಲಿ
ಅಶೋಕ್ ಲೇಲ್ಯಾಂಡ್ ₹ 400 ಕೋಟಿ ಹೂಡಿಕೆ

ಲಘು ವಾಣಿಜ್ಯ ವಾಹನಗಳ ರಫ್ತು ವಹಿವಾಟು ವಿಸ್ತರಣೆಗಾಗಿ ಅಶೋಕ್‌ ಲೇಲ್ಯಾಂಡ್‌ ಕಂಪನಿ ₹400 ಕೋಟಿ ಹೂಡಿಕೆ ಮಾಡಲು ನಿರ್ಧರಿಸಿದೆ. ಸದ್ಯ ಈ ವಾಹನಗಳ ರಫ್ತು...

23 Jan, 2018

ಶೇ 100ರಷ್ಟು ವಿದೇಶಿ ನೇರ ಹೂಡಿಕೆ
ಖಾಸಗಿ ಬ್ಯಾಂಕ್‌ಗಳಲ್ಲಿ ಭಿನ್ನಾಭಿಪ್ರಾಯ

ಖಾಸಗಿ ಬ್ಯಾಂಕ್‌ಗಳಲ್ಲಿ ಶೇ 100 ರಷ್ಟು ವಿದೇಶಿ ನೇರ ಹೂಡಿಕೆಗೆ (ಎಫ್‌ಡಿಯ) ಅವಕಾಶ ಕಲ್ಪಿಸುವ ಕೇಂದ್ರ ಸರ್ಕಾರದ ಉದ್ದೇಶಿತ ಪ್ರಸ್ತಾವನೆಯ ಬಗ್ಗೆ ಭಿನ್ನ ಅಭಿಪ್ರಾಯ...

23 Jan, 2018

ನವದೆಹಲಿ
ವಿಮಾನದಲ್ಲಿ ಮೊಬೈಲ್‌ ಬಳಕೆ ಟ್ರಾಯ್‌ ಶಿಫಾರಸು

ವಿಮಾನದಲ್ಲಿ ಗ್ರಾಹಕರಿಗೆ ಮೊಬೈಲ್‌ ಮತ್ತು ಅಂತರ್ಜಾಲ ಸೇವೆಗಳ ಬಳಕೆಗೆ ಅವಕಾಶ ನೀಡುವಂತೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್‌) ಶಿಫಾರಸು ಮಾಡಿದೆ.

23 Jan, 2018