ನೀರಿನ ಸಮಸ್ಯೆ

ಮಹದಾಯಿ ಹೋರಾಟದಲ್ಲಿ ಭಾಗಿ: ಜಿ.ಮಾದೇಗೌಡ

‘ಮಹದಾಯಿ ಯೋಜನೆ ಅನುಷ್ಠಾನಕ್ಕಾಗಿ ಪ್ರಧಾನಿ ಕಚೇರಿ ಎದುರು ಹೋರಾಟ ನಡೆಸಬೇಕು. ನವಲಗುಂದ, ನರಗುಂದದಲ್ಲಿ ಚಳವಳಿ ಮಾಡಿದರೆ ಏನೂ ಪ್ರಯೋಜನವಾಗದು. ಎಲ್ಲರೂ ದೆಹಲಿಯಲ್ಲಿ ಕಚೇರಿಗಳಿಗೆ ಘೇರಾವ್‌ ಹಾಕಬೇಕು, ನಾನೂ ಬರುತ್ತೇನೆ. ಪ್ರಧಾನಮಂತ್ರಿ ಕೂಡಲೇ ಮಧ್ಯಪ್ರವೇಶ ಮಾಡಿ ಸಮಸ್ಯೆಯನ್ನು ಶೀಘ್ರ ಬಗೆಹರಿಸಬೇಕು. –ಜಿ.ಮಾದೇಗೌಡ

ಜಿ.ಮಾದೇಗೌಡ

ಮಂಡ್ಯ: ‘ಮಹದಾಯಿ ಯೋಜನೆ ಅನುಷ್ಠಾನಕ್ಕಾಗಿ ಉತ್ತರ ಕರ್ನಾಟಕದ ನರಗುಂದ, ನವಲಗುಂದದಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಭಾಗಿಯಾಗಿ ಹೋರಾಟಗಾರರಿಗೆ ಉತ್ಸಾಹ ತುಂಬುತ್ತೇನೆ’ ಎಂದು ಕಾವೇರಿ ನೀರಾವರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ಹೇಳಿದರು.

ಕರ್ನಾಟಕ ನವನಿರ್ಮಾಣ ಸೇನೆ ಕಾರ್ಯಕರ್ತರು ಬುಧವಾರ ಮಹದಾಯಿ ಹೋರಾಟದಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.

‘ನಾನು ಹಲವು ಚಳವಳಿಯಲ್ಲಿ ಭಾಗವಹಿಸಿದ್ದೇನೆ. ಸಾತಂತ್ರ್ಯ ಚಳವಳಿಯಿಂದ ಕಾವೇರಿ ಚಳವಳಿ, ರಾಜ್ಯ ಏಕೀಕರಣ ಹೋರಾಟದಲ್ಲಿ ಭಾಗವಹಿಸಿದ್ದೇನೆ. ಈಗ ಮಹದಾಯಿ ಹೋರಾಟದಲ್ಲೂ ಸಂತೋಷದಿಂದ ಪಾಲ್ಗೊಳ್ಳುತ್ತೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯನಿಂದ ಪ್ರಧಾನಮಂತ್ರಿವರೆಗೂ ಎಲ್ಲರೂ ಜನರಿಗೆ ನ್ಯಾಯ ಕೊಡಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ. ಮಹದಾಯಿ ಹೋರಾಟದಲ್ಲಿ ಪಾಲ್ಗೊಳ್ಳಲು ಶೀಘ್ರ ದಿನಾಂಕ ನಿಗದಿ ಮಾಡುತ್ತೇನೆ’ ಎಂದು ಹೇಳಿದರು.

‘ಮಹದಾಯಿ ಯೋಜನೆ ಅನುಷ್ಠಾನಕ್ಕಾಗಿ ಪ್ರಧಾನಿ ಕಚೇರಿ ಎದುರು ಹೋರಾಟ ನಡೆಸಬೇಕು. ನವಲಗುಂದ, ನರಗುಂದದಲ್ಲಿ ಚಳವಳಿ ಮಾಡಿದರೆ ಏನೂ ಪ್ರಯೋಜನವಾಗದು. ಎಲ್ಲರೂ ದೆಹಲಿಯಲ್ಲಿ ಕಚೇರಿಗಳಿಗೆ ಘೇರಾವ್‌ ಹಾಕಬೇಕು, ನಾನೂ ಬರುತ್ತೇನೆ. ಪ್ರಧಾನಮಂತ್ರಿ ಕೂಡಲೇ ಮಧ್ಯಪ್ರವೇಶ ಮಾಡಿ ಸಮಸ್ಯೆಯನ್ನು ಶೀಘ್ರ ಬಗೆಹರಿಸಬೇಕು. ಇಲ್ಲದಿದ್ದರೆ ರಾಜೀನಾಮೆ ಕೊಟ್ಟು ಹೋಗಲಿ. ಅವರಿಗೆ ಅಧಿಕಾರ ಇದೆ. ಮೂರು ರಾಜ್ಯದ ಮುಖ್ಯಮಂತ್ರಿಗಳನ್ನು ಕೂರಿಸಿ ಮಾತನಾಡಿ ನ್ಯಾಯ ಒದಗಿಸಬೇಕು. ಕೇಂದ್ರ ಸರ್ಕಾರದಲ್ಲಿರುವ ನಮ್ಮ ರಾಜ್ಯದ ಮಂತ್ರಿಗಳು, ಸಂಸದರು ಮಹದಾಯಿ ವಿಚಾರವಾಗಿ ಧ್ವನಿ ಎತ್ತಬೇಕು. ಇದು ಬರೀ ಜನರ ಸಮಸ್ಯೆಯಾಗಿಲ್ಲ. ನಮ್ಮ ರಾಜ್ಯದ ಸಮಸ್ಯೆಯಾಗಿದೆ’ ಎಂದು ಹೇಳಿದರು.

Comments
ಈ ವಿಭಾಗದಿಂದ ಇನ್ನಷ್ಟು
ಹನಿಟ್ರ್ಯಾಪ್: ಯುವತಿಯರು ಸೇರಿ 6 ಜನರ ಬಂಧನ

ಮಂಗಳೂರು
ಹನಿಟ್ರ್ಯಾಪ್: ಯುವತಿಯರು ಸೇರಿ 6 ಜನರ ಬಂಧನ

23 Mar, 2018

ಧಾರವಾಡ
ಐಟಿ ದಾಳಿಗೆ ಹೆದರುವುದಿಲ್ಲ ಸಚಿವ ವಿನಯ ಕುಲಕರ್ಣಿ

ಚುನಾವಣೆ ಸಮೀಪಿಸುತ್ತಿದ್ದಂತೆಯೇ ನನ್ನ ಹಾಗೂ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಅವರಿಗೆ ಸೇರಿದ ಆಸ್ತಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಲಿದ್ದಾರೆ ಎಂದು ಹಲವು...

23 Mar, 2018

ಬೆಂಗಳೂರು
ಮತದಾನ ತಡೆ ಮನವಿ ತಿರಸ್ಕೃತ

‘ರಾಜ್ಯಸಭೆಗೆ ಇದೇ 23ರಂದು ನಡೆಯಲಿರುವ ಚುನಾವಣೆಯಲ್ಲಿ ಜೆಡಿಎಸ್‌ನ ಏಳು ಬಂಡಾಯ ಶಾಸಕರು ಮತ ಚಲಾಯಿಸಲು ಅವಕಾಶ ನೀಡಬಾರದು’ ಎಂಬ ಮೂಡಿಗೆರೆ ಶಾಸಕ ಬಿ.ಬಿ.ನಿಂಗಯ್ಯ ಹಾಗೂ...

23 Mar, 2018

24 ಸ್ಥಳಗಳ ಮೇಲೆ ದಾಳಿ: ಮುಂದುವರಿದ ಶೋಧ
ತುಮಕೂರು ಎ.ಸಿ 24 ಸೈಟ್‌ಗಳ ಒಡೆಯ!

ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ದಾಳಿಗೆ ಒಳಗಾಗಿರುವ ತುಮಕೂರು ಉಪವಿಭಾಗಾಧಿಕಾರಿ ತಿಪ್ಪೇಸ್ವಾಮಿ 24 ನಿವೇಶನಗಳ ಒಡೆಯ! ಬೆಂಗಳೂರಿನಲ್ಲಿ ಒಂದು ಫ್ಲ್ಯಾಟ್‌, ಚಿತ್ರದುರ್ಗದಲ್ಲಿ ಎರಡು ಮನೆಗಳು...

23 Mar, 2018
ಚಿಮ್ಮನಕಟ್ಟಿ ಮನೆ ಎದುರು ಮಹಿಳೆ ಆತ್ಮಹತ್ಯೆ

ಮಗನಿಗೆ ಕೆಲಸ ಕೊಡದೇ ಶಾಸಕರ ಸಂಬಂಧಿಗೆ ಕೊಟ್ಟ ಆರೋಪ
ಚಿಮ್ಮನಕಟ್ಟಿ ಮನೆ ಎದುರು ಮಹಿಳೆ ಆತ್ಮಹತ್ಯೆ

23 Mar, 2018