ಸಚಿವ ರೈ ರಾಜೀನಾಮೆಗೆ ಆಗ್ರಹ

ತಾಲಿಬಾನಿಗಳ ಜತೆ ಕಾಂಗ್ರೆಸ್‌ ಒಪ್ಪಂದ

ಹಿಂದುತ್ವವನ್ನು ಗುತ್ತಿಗೆ ಪಡೆದಿದ್ದಾರೆಯೇ ಎಂದು ಪ್ರಶ್ನಿಸುವ ಯಾರೊಬ್ಬರೂ ದೀಪಕ್‌ ರಾವ್‌ ಶವವನ್ನು ಇಟ್ಟಿದ್ದ ಸ್ಥಳಕ್ಕೆ ಬಂದಿಲ್ಲ. ಇದರಿಂದ ಕಾಂಗ್ರೆಸ್ಸಿನವರು ತಾಲಿಬಾನಿಗಳನ್ನು ಗುತ್ತಿಗೆ ಪಡೆದಿರುವುದು ಸ್ಪಷ್ಟವಾಗುತ್ತದೆ. –ಸಿ.ಟಿ. ರವಿ

ಸಿ.ಟಿ. ರವಿ

ಮಂಗಳೂರು: ಕಾಂಗ್ರೆಸ್ಸಿಗರು ತಾಲಿಬಾನಿಗಳ ಜತೆ ಒಳಒಪ್ಪಂದ ಮಾಡಿಕೊಂಡಿದ್ದು, ಅವರ ಕುಮ್ಮಕ್ಕಿನಿಂದಲೇ ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಗಳು ನಿರಂತರವಾಗಿ ನಡೆಯುತ್ತಿವೆ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆರೋಪಿಸಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ರಮಾನಾಥ ರೈ ಅವರು ಅಲ್ಲಾಹುವಿನ ಕೃಪೆಯಿಂದಲೇ ಆರು ಬಾರಿ ಶಾಸಕರಾಗಿದ್ದಾರೆ. ಅವರ ಪ್ರಚೋದಿತ ಹೇಳಿಕೆಗಳು, ಪರೋಕ್ಷ ಬೆಂಬಲದಿಂದ ಹತ್ಯೆಗಳ ಸರಣಿ ಮುಂದುವರಿಯುತ್ತಿವೆ. ಕೂಡಲೇ ಸಚಿವ ರೈ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಹಿಂದುತ್ವವನ್ನು ಗುತ್ತಿಗೆ ಪಡೆದಿದ್ದಾರೆಯೇ ಎಂದು ಪ್ರಶ್ನಿಸುವ ಯಾರೊಬ್ಬರೂ ದೀಪಕ್‌ ರಾವ್‌ ಶವವನ್ನು ಇಟ್ಟಿದ್ದ ಸ್ಥಳಕ್ಕೆ ಬಂದಿಲ್ಲ. ಇದರಿಂದ ಕಾಂಗ್ರೆಸ್ಸಿನವರು ತಾಲಿಬಾನಿಗಳನ್ನು ಗುತ್ತಿಗೆ ಪಡೆದಿರುವುದು ಸ್ಪಷ್ಟವಾಗುತ್ತದೆ ಎಂದರು.

ದೀಪಕ್‌ ರಾವ್‌ ಕುಟುಂಬಕ್ಕೆ ಕನಿಷ್ಠ ₹25 ಲಕ್ಷ ಪರಿಹಾರ ನೀಡಬೇಕು. ದೀಪಕ್‌ ರಾವ್‌ ಸೇರಿದಂತೆ ರಾಜ್ಯದಲ್ಲಿ ನಡೆದಿರುವ ಹಿಂದೂ ಕಾರ್ಯಕರ್ತರ ಹತ್ಯೆ ಪ್ರಕರಣವನ್ನು ಎನ್‌ಐಎಗೆ ವಹಿಸಬೇಕು. ಹಿಂದೂ ಕಾರ್ಯಕರ್ತರನ್ನು ಕಳೆದುಕೊಳ್ಳುತ್ತ ಸುಮ್ಮನೆ ಕೂರುವುದಿಲ್ಲ. ಬೇಡಿಕೆ ಈಡೇರುವವರೆಗೆ ರಾಜ್ಯವ್ಯಾಪಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು
ಲಿಂಗಾಯತ ಧರ್ಮಕ್ಕೆ ಶಿಫಾರಸು: ಸಿದ್ಧಗಂಗಾ ಮಠ ಸ್ವಾಗತ

ತುಮಕೂರು
ಲಿಂಗಾಯತ ಧರ್ಮಕ್ಕೆ ಶಿಫಾರಸು: ಸಿದ್ಧಗಂಗಾ ಮಠ ಸ್ವಾಗತ

21 Mar, 2018
ಸ್ಪೀಕರ್‌ಗೆ ಹೈಕೋರ್ಟ್‌ ಪ್ರಶ್ನೆ

ತೀರ್ಪು ಕಾಯ್ದಿಟ್ಟುಕೊಂಡು ಏನು ಮಾಡುತ್ತಾರೆ
ಸ್ಪೀಕರ್‌ಗೆ ಹೈಕೋರ್ಟ್‌ ಪ್ರಶ್ನೆ

21 Mar, 2018
ನಾರಾಯಣ ಗುರು ಸ್ಮರಣೆ

ಕರಾವಳಿಯಲ್ಲಿ ಕಾಂಗ್ರೆಸ್‌ನಿಂದ ಜನಾಶೀರ್ವಾದ ಯಾತ್ರೆ
ನಾರಾಯಣ ಗುರು ಸ್ಮರಣೆ

21 Mar, 2018
ಪರ– ವಿರೋಧಕ್ಕೆ ಜಾಲತಾಣ ವೇದಿಕೆ

ವೈರಲ್ ಪೋಸ್ಟ್
ಪರ– ವಿರೋಧಕ್ಕೆ ಜಾಲತಾಣ ವೇದಿಕೆ

21 Mar, 2018

ಅಲ್ಪಸಂಖ್ಯಾತ ಧರ್ಮದ ಮಾನ್ಯತೆ
ಗೃಹ ಸಚಿವಾಲಯದಿಂದ ಶಿಫಾರಸು ಪರಿಶೀಲನೆ

ಲಿಂಗಾಯತ ಮತ್ತು ವೀರಶೈವ ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಅಲ್ಪಸಂಖ್ಯಾತ ಧರ್ಮದ ಮಾನ್ಯತೆ ನೀಡುವಂತೆ ಕರ್ನಾಟಕ ಸರ್ಕಾರ ಕಳುಹಿಸಿರುವ ಶಿಫಾರಸು ಕೇಂದ್ರ ಗೃಹ ಸಚಿವಾಲಯಕ್ಕೆ ಪರಿಶೀಲನೆಗೆ...

21 Mar, 2018