ಮಹಾರಾಷ್ಟ್ರ ಬಹುತೇಕ ಬಂದ್‌

ಮುಂಬೈ ಸಂಪೂರ್ಣ ಸ್ತಬ್ಧ: ಜನಜೀವನ ಅಸ್ತವ್ಯಸ್ತ

ಮಹಾರಾಷ್ಟ್ರದ ಇತರ ಭಾಗಗಳಲ್ಲಿಯೂ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಮರಾಠಾವಾಡ ಭಾಗದಲ್ಲಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯದ ಕೆಲವೆಡೆ ಪರಿಸ್ಥಿತಿ ಈಗಲೂ ಬಿಗುವಿನಿಂದ ಕೂಡಿದೆ ಎಂದು ಪೊಲೀಸರು ಹೇಳಿದ್ದಾರೆ.

ದಲಿತ ಸಂಘಟನೆಗಳು ಮಹಾರಾಷ್ಟ್ರ ಬಂದ್‌ಗೆ ಕರೆ ನೀಡಿದ್ದರಿಂದ ಛತ್ರಪತಿ ಶಿವಾಜಿ ಟರ್ಮಿನಲ್‌ ಬುಧವಾರ ಬಿಕೋ ಎನ್ನುತ್ತಿತ್ತು ಪಿಟಿಐ ಚಿತ್ರ

ಮುಂಬೈ: ಭೀಮಾ–ಕೋರೆಂಗಾವ್‌ ಯುದ್ಧದ 200ನೇ ವಿಜಯೋತ್ಸವ ಸಂದರ್ಭದಲ್ಲಿ ನಡೆದ ಹಿಂಸಾಚಾರ ಖಂಡಿಸಿ ದಲಿತ, ಎಡಪಂಥೀಯ ಮತ್ತು ಪ್ರಗತಿಪರ ಸಂಘಟನೆಗಳು ಬುಧವಾರ ಕರೆ ನೀಡಿದ್ದ ಮಹಾರಾಷ್ಟ್ರ ಬಂದ್‌ಗೆ ದೇಶದ ವಾಣಿಜ್ಯ ರಾಜಧಾನಿ ಮುಂಬೈ ಸಂಪೂರ್ಣ ಸ್ತಬ್ಧಗೊಂಡಿತ್ತು.

ಮಹಾರಾಷ್ಟ್ರದ ಇತರ ಭಾಗಗಳಲ್ಲಿಯೂ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಮರಾಠಾವಾಡ ಭಾಗದಲ್ಲಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯದ ಕೆಲವೆಡೆ ಪರಿಸ್ಥಿತಿ ಈಗಲೂ ಬಿಗುವಿನಿಂದ ಕೂಡಿದೆ ಎಂದು ಪೊಲೀಸರು ಹೇಳಿದ್ದಾರೆ.

ಬಂದ್‌ ವಾಪಸ್‌: ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಮೊಮ್ಮಗ ಹಾಗೂ ಭಾರಿಪಾ ಬಹುಜನ ಮಹಾಸಂಘದ ಮುಖಂಡ ಪ್ರಕಾಶ್‌ ಅಂಬೇಡ್ಕರ್‌ ಅವರು ಬಂದ್‌ ಕೈಬಿಟ್ಟಿರುವುದಾಗಿ ಸಂಜೆ 4.30ಕ್ಕೆ ಘೋಷಿಸಿದರು.ಅಷ್ಟು ಹೊತ್ತಿಗಾಗಲೇ ಬಂದ್‌ ಬಹುತೇಕ ಯಶಸ್ವಿಯಾಗಿತ್ತು. ರಾಜ್ಯದ ಶೇ 50ರಷ್ಟು ಜನರು ಬಂದ್‌ನಲ್ಲಿ ಭಾಗವಹಿಸಿದ್ದು, ಯಶಸ್ವಿಯಾಗಿದೆ ಎಂದು ತಿಳಿಸಿದರು. ಪ್ರಕಾಶ್‌ ಅಂಬೇಡ್ಕರ್‌ ಈ ಬಂದ್‌ಗೆ ಕರೆ ನೀಡಿದ್ದರು.

ಮುಖ್ಯಾಂಶಗಳು

* 250ಕ್ಕೂ ಹೆಚ್ಚು ದಲಿತ, ಪ್ರಗತಿಪರ ಸಂಘಟನೆಗಳ ಬೆಂಬಲ

* ಮುಂಬೈ ನಗರದಲ್ಲಿ 21 ಸಾವಿರ ಪೊಲೀಸರ ನಿಯೋಜನೆ

* ಮುಂಬೈ ಮಹಾನಗರ ಸಾರಿಗೆ ಸಂಸ್ಥೆಗೆ ಸೇರಿದ 31 ಬೆಸ್ಟ್‌ ಬಸ್‌ ಜಖಂ

* ಎಲ್ಲೆಡೆ ಹಾರಾಡಿದ ನೀಲಿ ಧ್ವಜಗಳು, ಬೈಕ್‌ ರ‍್ಯಾಲಿ

Comments
ಈ ವಿಭಾಗದಿಂದ ಇನ್ನಷ್ಟು
ಬಿಜೆಪಿಗೆ ಯಶವಂತ ಸಿನ್ಹಾ ಗುಡ್ ಬೈ

ರಾಜಕೀಯದಿಂದ ಸನ್ಯಾಸ
ಬಿಜೆಪಿಗೆ ಯಶವಂತ ಸಿನ್ಹಾ ಗುಡ್ ಬೈ

21 Apr, 2018
ಸಿಜೆಐ ವಿರುದ್ಧ ವಾಗ್ದಂಡನೆ ನೋಟಿಸ್‌: ಸಾಮಾಜಿಕ ಮಾಧ್ಯಮಗಳಲ್ಲಿ ಪರ–ವಿರೋಧ ಚರ್ಚೆ

ಟ್ವಿಟರ್‌ನಲ್ಲಿ #IndiaStandsWithCJI ಟ್ರೆಂಡ್‌
ಸಿಜೆಐ ವಿರುದ್ಧ ವಾಗ್ದಂಡನೆ ನೋಟಿಸ್‌: ಸಾಮಾಜಿಕ ಮಾಧ್ಯಮಗಳಲ್ಲಿ ಪರ–ವಿರೋಧ ಚರ್ಚೆ

21 Apr, 2018
ಮಾವೋವಾದಿ– ಸಿಆರ್‌ಪಿಎಫ್‌ ಗುಂಡಿನ ಕಾಳಗ: ಅಧಿಕಾರಿ ಹುತಾತ್ಮ

ರಾಯ್‌ಪುರ
ಮಾವೋವಾದಿ– ಸಿಆರ್‌ಪಿಎಫ್‌ ಗುಂಡಿನ ಕಾಳಗ: ಅಧಿಕಾರಿ ಹುತಾತ್ಮ

21 Apr, 2018
ಮದುವೆಯಾಗಲು ಪರೋಲ್‌ ಕೇಳಿದ್ದ ಅಬು ಸಲೇಂ ಅರ್ಜಿ ತಿರಸ್ಕೃತ

ಮುಂಬೈ ಸ್ಫೋಟದ ರೂವಾರಿ
ಮದುವೆಯಾಗಲು ಪರೋಲ್‌ ಕೇಳಿದ್ದ ಅಬು ಸಲೇಂ ಅರ್ಜಿ ತಿರಸ್ಕೃತ

21 Apr, 2018
ಹೆತ್ತವರ ಜತೆ ನಿದ್ರಿಸುತ್ತಿದ್ದ 8 ತಿಂಗಳ ಮಗುವನ್ನು ಅಪಹರಿಸಿ ಅತ್ಯಾಚಾರ ಮಾಡಿ ಕೊಲೆ

ಇಂದೋರ್‍‍ ಅತ್ಯಾಚಾರ ಪ್ರಕರಣ
ಹೆತ್ತವರ ಜತೆ ನಿದ್ರಿಸುತ್ತಿದ್ದ 8 ತಿಂಗಳ ಮಗುವನ್ನು ಅಪಹರಿಸಿ ಅತ್ಯಾಚಾರ ಮಾಡಿ ಕೊಲೆ

21 Apr, 2018