ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಒಪ್ಪಿಗೆ

ಝೋಜಿಲಾ ಸುರಂಗ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ; ₹6,809 ಕೋಟಿ ವೆಚ್ಚ

₹6,809 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವ ಈ ಸುರಂಗವು ಶ್ರೀನಗರ, ಕಾರ್ಗಿಲ್‌ ಮತ್ತು ಲೆಹ್‌ಗೆ ಸಂಪರ್ಕ ಕಲ್ಪಿಸುತ್ತದೆ. ಏಳು ವರ್ಷಗಳಲ್ಲಿ ಈ ಸುರಂಗ ನಿರ್ಮಿಸಲು ಉದ್ದೇಶಿಸಲಾಗಿದೆ. ಚಳಿಗಾಲದಲ್ಲಿ ಭಾರಿ ಹಿಮಪಾತದಿಂದಾಗಿ ಈ ಮೂರು ಸ್ಥಳಗಳಿಗೆ ಸಂಪರ್ಕ ಕಡಿತಗೊಳ್ಳುತ್ತದೆ. ಹೀಗಾಗಿ, ಈ ಸುರಂಗ ಮಾರ್ಗ ನಿರ್ಮಿಸಲು ಉದ್ದೇಶಿಸಲಾಗಿದೆ.

ಝೋಜಿಲಾ ಪಾಸ್‌

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಝೋಜಿಲಾ ಪಾಸ್‌ ಸುರಂಗ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

₹6,809 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವ ಈ ಸುರಂಗವು ಶ್ರೀನಗರ, ಕಾರ್ಗಿಲ್‌ ಮತ್ತು ಲೆಹ್‌ಗೆ ಸಂಪರ್ಕ ಕಲ್ಪಿಸುತ್ತದೆ. ಏಳು ವರ್ಷಗಳಲ್ಲಿ ಈ ಸುರಂಗ ನಿರ್ಮಿಸಲು ಉದ್ದೇಶಿಸಲಾಗಿದೆ. ಚಳಿಗಾಲದಲ್ಲಿ ಭಾರಿ ಹಿಮಪಾತದಿಂದಾಗಿ ಈ ಮೂರು ಸ್ಥಳಗಳಿಗೆ ಸಂಪರ್ಕ ಕಡಿತಗೊಳ್ಳುತ್ತದೆ. ಹೀಗಾಗಿ, ಈ ಸುರಂಗ ಮಾರ್ಗ ನಿರ್ಮಿಸಲು ಉದ್ದೇಶಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸುರಂಗ ನಿರ್ಮಿಸುವ ಯೋಜನೆಗೆ ಬುಧವಾರ ಒಪ್ಪಿಗೆ ನೀಡಿದೆ.

14.15 ಕಿಲೋ ಮೀಟರ್‌ ಉದ್ದದ ನಾಲ್ಕು ಪಥದ ಒಂದೇ ಸುರಂಗ ಮಾರ್ಗವನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈ ಯೋಜನೆಯನ್ನು ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಮೂಲಕ ಅನುಷ್ಠಾನಗೊಳಿಸಲಿದೆ.

ಈ ಸುರಂಗ ಮಾರ್ಗವು ಎಲ್ಲ ಋತುಗಳಲ್ಲಿ ಶ್ರೀನಗರ, ಕಾರ್ಗಿಲ್‌ ಮತ್ತು ಲೆಹ್‌ಗೆ ಸಂಪರ್ಕ ಕಲ್ಪಿಸುವ ಜತೆಗೆ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಈ ಪ್ರದೇಶದಲ್ಲಿ ಬದಲಾವಣೆ ತರಲಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ.

ಶ್ರೀನಗರ–ಕಾರ್ಗಿಲ್‌–ಲೆಹ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ 11,516 ಅಡಿ ಎತ್ತರದಲ್ಲಿ ಝೋಜಿಲಾ ಪಾಸ್‌ ಇದೆ. ಹಿಮಪಾತದ ಕಾರಣಕ್ಕೆ ಚಳಿಗಾಲದಲ್ಲಿ ಈ ಮಾರ್ಗವನ್ನು ಮುಚ್ಚಲಾಗುತ್ತದೆ. ಈ ಯೋಜನೆ ನಿರ್ಮಾಣದ ಹಂತದಲ್ಲಿ ಸ್ಥಳೀಯವಾಗಿ ಹೊಸದಾಗಿ ಉದ್ಯೋಗ ಸೃಷ್ಟಿಸಲಿದೆ. ಜತೆಗೆ ಯೋಜನೆ ಸಂಪೂರ್ಣವಾಗಿ ಮುಕ್ತಾಯವಾದ ಬಳಿಕ ಸ್ಥಳೀಯ ವ್ಯಾಪಾರಿಗಳಿಗೆ ರಾಷ್ಟ್ರೀಯ ಮಾರುಕಟ್ಟೆ ಜತೆ ಸುಲಭವಾಗಿ ಸಂಪರ್ಕ ದೊರೆ
ಯಲಿದೆ ಎಂದು ಸಚಿವಾಲಯ ತಿಳಿಸಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಫೆ.21ರಂದು ಪಕ್ಷದ ಹೆಸರು ಘೋಷಣೆ :  ಕಮಲ್ ಹಾಸನ್

ರಾಜ್ಯದಾದ್ಯಂತ ಪ್ರವಾಸ
ಫೆ.21ರಂದು ಪಕ್ಷದ ಹೆಸರು ಘೋಷಣೆ : ಕಮಲ್ ಹಾಸನ್

17 Jan, 2018
ಅಹಮದಾಬಾದ್ ತಲುಪಿದ ಇಸ್ರೇಲ್‌ ಪ್ರಧಾನಿ ಬೆಂಜಾಮಿನ್‌ ನೆತನ್ಯಾಹು ದಂಪತಿ

ಮೋದಿಯಿಂದ ಅದ್ದೂರಿ ಸ್ವಾಗತ
ಅಹಮದಾಬಾದ್ ತಲುಪಿದ ಇಸ್ರೇಲ್‌ ಪ್ರಧಾನಿ ಬೆಂಜಾಮಿನ್‌ ನೆತನ್ಯಾಹು ದಂಪತಿ

17 Jan, 2018
ಹಜ್ ಯಾತ್ರೆಗೆ ಸಹಾಯಧನ ಇಲ್ಲ

ಮುಕ್ತಾರ್ ಅಬ್ಬಾಸ್ ನಖ್ವಿ
ಹಜ್ ಯಾತ್ರೆಗೆ ಸಹಾಯಧನ ಇಲ್ಲ

17 Jan, 2018
ಸಾಕ್ಷಿಯನ್ನು ಖರೀದಿಸಿಲ್ಲ

ಗೋವಾ ಆರೋಪಕ್ಕೆ ಕರ್ನಾಟಕ ತಿರುಗೇಟು
ಸಾಕ್ಷಿಯನ್ನು ಖರೀದಿಸಿಲ್ಲ

17 Jan, 2018
ಹತ್ಯೆಗೆ ಸಂಚು: ತೊಗಾಡಿಯಾ

ಸ್ವತಂತ್ರ ತನಿಖೆಗೆ ಕಾಂಗ್ರೆಸ್‌ ಆಗ್ರಹ
ಹತ್ಯೆಗೆ ಸಂಚು: ತೊಗಾಡಿಯಾ

17 Jan, 2018