ನವದೆಹಲಿ

ವಿಮಾನದಲ್ಲೇ ಪೈಲಟ್‌ಗಳ ಜಟಾಪಟಿ

ಈ ವಿಮಾನದಲ್ಲಿ 324 ಪ್ರಯಾಣಿಕರು ಮತ್ತು 14 ಸಿಬ್ಬಂದಿ ಇದ್ದರು. ವಿಮಾನ ಹಾರಾಟದ ಸಂದರ್ಭದಲ್ಲಿ ವಿಮಾನದ ಕಮಾಂಡರ್‌ ಅವರು ಮಹಿಳಾ ಪೈಲಟ್‌ ಕಪಾಳಕ್ಕೆ ಬಾರಿಸಿದ್ದಾರೆ. ಇದರಿಂದ, ಆಕ್ರೋಶಗೊಂಡ ಮಹಿಳಾ ಪೈಲಟ್‌ ಅಳುತ್ತಾ ಕಾಕ್‌ಪಿಟ್‌ನಿಂದ ಹೊರಗೆ ಬಂದಿದ್ದಾರೆ.

ನವದೆಹಲಿ: ಲಂಡನ್‌ನಿಂದ ಮುಂಬೈಗೆ ತೆರಳುತ್ತಿದ್ದ ಜೆಟ್‌ಏರ್‌ವೇಸ್‌ ವಿಮಾನದಲ್ಲಿ ಇಬ್ಬರು ಪೈಲಟ್‌ಗಳು ಜಟಾಪಟಿ ನಡೆಸಿದ ಪ್ರಸಂಗ ನಡೆದಿದೆ.

ಈ ವಿಮಾನದಲ್ಲಿ 324 ಪ್ರಯಾಣಿಕರು ಮತ್ತು 14 ಸಿಬ್ಬಂದಿ ಇದ್ದರು. ವಿಮಾನ ಹಾರಾಟದ ಸಂದರ್ಭದಲ್ಲಿ ವಿಮಾನದ ಕಮಾಂಡರ್‌ ಅವರು ಮಹಿಳಾ ಪೈಲಟ್‌ ಕಪಾಳಕ್ಕೆ ಬಾರಿಸಿದ್ದಾರೆ. ಇದರಿಂದ, ಆಕ್ರೋಶಗೊಂಡ ಮಹಿಳಾ ಪೈಲಟ್‌ ಅಳುತ್ತಾ ಕಾಕ್‌ಪಿಟ್‌ನಿಂದ ಹೊರಗೆ ಬಂದಿದ್ದಾರೆ. ಬಳಿಕ, ಸಿಬ್ಬಂದಿ ಮನವಿ ಮೇರೆಗೆ ವಾಪಸ್‌ ತೆರಳಿದ್ದಾರೆ.

ಮಹಿಳಾ ಪೈಲಟ್‌ ಹೊರಗೆ ಇದ್ದಾಗ ಕಮಾಂಡರ್‌ ಸಹ ಹೊರಗೆ ಬಂದು ಮನವೊಲಿಸುವ ಪ್ರಯತ್ನ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಘಟನೆಗಾಗಿ ಇಬ್ಬರು ಪೈಲಟ್‌ಗಳು ವಿಮಾನ ಚಾಲನೆ ಮಾಡದಂತೆ ನಿರ್ಬಂಧ ವಿಧಿಸಲಾಗಿದೆ. ‘ಪೈಲಟ್‌ಗಳ ನಡುವೆ ತಪ್ಪು ತಿಳಿವಳಿಕೆ ಉಂಟಾಗಿದೆ. ತಕ್ಷಣ ಸೌಹಾರ್ದಯುತವಾಗಿ ಪ್ರಕರಣ ಇತ್ಯರ್ಥಗೊಳಿಸಲಾಗಿದೆ.’ ಎಂದು ಜೆಟ್‌ಏರ್‌ವೇಸ್‌ ತಿಳಿಸಿದೆ.

Comments
ಈ ವಿಭಾಗದಿಂದ ಇನ್ನಷ್ಟು
4 ವರ್ಷಗಳ ಹಿಂದೆ 2 ತಿಂಗಳ ಮಗು ಕೊಂದಿದ್ದ ತಾಯಿ; ಈಗ 8 ತಿಂಗಳ ಮಗುವಿನ ಶಿರಚ್ಛೇದ

ಮಾನಸಿಕ ಅಸ್ವಸ್ಥೆ?
4 ವರ್ಷಗಳ ಹಿಂದೆ 2 ತಿಂಗಳ ಮಗು ಕೊಂದಿದ್ದ ತಾಯಿ; ಈಗ 8 ತಿಂಗಳ ಮಗುವಿನ ಶಿರಚ್ಛೇದ

21 Apr, 2018
ನರೋಡಾ ಪಾಟಿಯಾ ಪ್ರಕರಣದಲ್ಲಿ ಮಾಯಾಬೆನ್‌ ಕೊಡ್ನಾನಿ ಖುಲಾಸೆ: ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಾಧ್ಯತೆ

ಅಹಮದಾಬಾದ್‌
ನರೋಡಾ ಪಾಟಿಯಾ ಪ್ರಕರಣದಲ್ಲಿ ಮಾಯಾಬೆನ್‌ ಕೊಡ್ನಾನಿ ಖುಲಾಸೆ: ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಾಧ್ಯತೆ

21 Apr, 2018
ಸೂರತ್‌ ಅತ್ಯಾಚಾರ ಪ್ರಕರಣ: ರಾಜಸ್ಥಾನದ ಮೂಲದ ಆರೋಪಿ ಬಂಧನ

ಅಹಮದಾಬಾದ್‌
ಸೂರತ್‌ ಅತ್ಯಾಚಾರ ಪ್ರಕರಣ: ರಾಜಸ್ಥಾನದ ಮೂಲದ ಆರೋಪಿ ಬಂಧನ

21 Apr, 2018
ಮಾಯಾ ಕೊಡ್ನಾನಿ ಖುಲಾಸೆ

ನರೋಡಾ ಪಾಟಿಯಾ ಗಲಭೆ ಪ್ರಕರಣ
ಮಾಯಾ ಕೊಡ್ನಾನಿ ಖುಲಾಸೆ

21 Apr, 2018
ಫೇಸ್‌ಬುಕ್‌ನಲ್ಲಿ ಯೋಗಿ ಆದಿತ್ಯನಾಥ ಅತಿ ಹೆಚ್ಚು ಜನಪ್ರಿಯ ಮುಖ್ಯಮಂತ್ರಿ

ಫೇಸ್‌ಬುಕ್‌ ಕ್ರಮಾಂಕ ಪಟ್ಟಿಯಲ್ಲಿ ಮೊದಲ ಸ್ಥಾನ
ಫೇಸ್‌ಬುಕ್‌ನಲ್ಲಿ ಯೋಗಿ ಆದಿತ್ಯನಾಥ ಅತಿ ಹೆಚ್ಚು ಜನಪ್ರಿಯ ಮುಖ್ಯಮಂತ್ರಿ

21 Apr, 2018