ಬೆಂಗಳೂರು

ನಗದು, 1.19 ಕೆ.ಜಿ ಚಿನ್ನಾಭರಣ ಕಳವು

ಜ.1ರಂದು ಕುಟುಂಬಸ್ಥರ ಜತೆಗೆ ಅವರು ಮೈಸೂರಿಗೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದ್ದನ್ನು ತಿಳಿದ ಕಳ್ಳರು, ಹಿಂಬದಿ ಕಿಟಕಿಯ ಗ್ರಿಲ್ಸ್‌ ಕತ್ತರಿಸಿ ಒಳ ನುಗ್ಗಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಬೆಂಗಳೂರು: ಆರ್‌.ಟಿ.ನಗರದ ಸುಲ್ತಾನ್‌ಪಾಳ್ಯದ ಮುಖ್ಯರಸ್ತೆ ಬಳಿಯ ಕೃಷ್ಣಪ್ಪ ಎಂಬುವರ ಮನೆಗೆ ಹೊಸ ವರ್ಷದಂದು ನುಗ್ಗಿದ ದುಷ್ಕರ್ಮಿಗಳು, ಬೀರು
ವಿನಲ್ಲಿದ್ದ ₹10,000 ನಗದುಹಾಗೂ 1.19 ಕೆ.ಜಿ ಚಿನ್ನಾಭರಣಗಳನ್ನು ಕದ್ದೊಯ್ದಿದ್ದಾರೆ.

ಜ.1ರಂದು ಕುಟುಂಬಸ್ಥರ ಜತೆಗೆ ಅವರು ಮೈಸೂರಿಗೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದ್ದನ್ನು ತಿಳಿದ ಕಳ್ಳರು, ಹಿಂಬದಿ ಕಿಟಕಿಯ ಗ್ರಿಲ್ಸ್‌ ಕತ್ತರಿಸಿ ಒಳ ನುಗ್ಗಿದ್ದಾರೆ ಎಂದು ಪೊಲೀಸರು ತಿಳಿಸಿದರು.

‘ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸುತ್ತಮುತ್ತಲ ಸಿ.ಸಿ.ಟಿ.ವಿ ಕ್ಯಾಮೆರಾಗಳಲ್ಲಿ ದಾಖಲಾದ ದೃಶ್ಯಗಳನ್ನು ವಶಕ್ಕೆ ಪಡೆದಿ
ದ್ದೇವೆ. ಕಳ್ಳರ ಪತ್ತೆಗೆ ಪ್ರತ್ಯೇಕ ತಂಡ ರಚಿಸಿದ್ದೇವೆ’ ಎಂದು ಮಾಹಿತಿ ನೀಡಿದ್ದಾರೆ.

ಸೆಕ್ಯೂರಿಟಿ ಗಾರ್ಡ್‌ ಮೇಲೆ ಸಂಶಯ: ಮೈಸೂರಿಗೆ ಹೋಗುವ ನಿಮಿತ್ತ ಮನೆಯ ಕಾವಲಿಗೆಂದು ಎರಡು ದಿನಗಳ ಮಟ್ಟಿಗೆ ನೇಪಾಳದ ಗೋವಿಂದು (22) ಎಂಬಾತನನ್ನು ಕೃಷ್ಣಪ್ಪ ಕೆಲಸಕ್ಕೆ ಇಟ್ಟುಕೊಂಡಿದ್ದರು.

‘ಮನೆಗೆ ಹಿಂದಿರುಗಿದಾಗ ಆತ ನಾಪತ್ತೆಯಾಗಿದ್ದ. ಆತನ ಮೊಬೈಲ್ ಸಹ ಸ್ವಿಚ್ಡ್ ಆಫ್ ಆಗಿದೆ. ಹೀಗಾಗಿ, ಆತನೇ ಕಳ್ಳತನ ಮಾಡಿರಬಹುದು’ ಎಂದು ಕೃಷ್ಣಪ್ಪ ಅನುಮಾನ ವ್ಯಕ್ತಪಡಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಸೋಮಣ್ಣನಿಗೆ ಆಶ್ರಯ: ದಂಪತಿ ಬಂಧನ

ಆಶ್ರಯ ನೀಡಿದ್ದ ಆರೋಪ
ಸೋಮಣ್ಣನಿಗೆ ಆಶ್ರಯ: ದಂಪತಿ ಬಂಧನ

22 Apr, 2018
ಜ್ಯೋತಿಷ ನೆಪದಲ್ಲಿ ಅತ್ಯಾಚಾರ

ಆರೋಪಿ ಬಂಧನ
ಜ್ಯೋತಿಷ ನೆಪದಲ್ಲಿ ಅತ್ಯಾಚಾರ

22 Apr, 2018

ಪ್ರಕರಣ ದಾಖಲು
ಕೆಪಿಎಸ್‌ಸಿ ಸದಸ್ಯರ ಬ್ರೀಫ್‌ಕೇಸ್‌ ಕಳವು

ಕರ್ನಾಟಕ ಲೋಕಸೇವಾ ಅಯೋಗದ(ಕೆಪಿಎಸ್‌ಸಿ) ಸದಸ್ಯರ ಕಾರು ಚಾಲಕನ ಗಮನ ಬೇರೆಡೆ ಸೆಳೆದು, ಅದರಲ್ಲಿದ್ದ ಬ್ರೀಫ್‌ಕೇಸ್‌ ಕಳವು ಮಾಡಿದ ಪ್ರಕರಣ ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿ ನಡೆದಿದೆ. ...

22 Apr, 2018

ಕ್ಯಾಸ್ಟಿಂಗ್‌ ಕೌಚ್ ಪ್ರಕರಣ
ನಟಿ ಕವಿತಾಗೆ ಕೊಲೆ ಬೆದರಿಕೆ; ದೂರು

ತೆಲುಗು ಚಿತ್ರರಂಗದಲ್ಲಿರುವ ಕ್ಯಾಸ್ಟಿಂಗ್‌ ಕೌಚ್ ಸಂಬಂಧ ನಟಿ ಶ್ರೀರೆಡ್ಡಿ ನಡೆಸಿದ್ದ ಅರೆನಗ್ನ ಪ್ರತಿಭಟನೆ ವಿರೋಧಿಸಿದ್ದ ನಟಿ ಕವಿತಾ ರಾಧೇಶ್ಯಾಮ್ ಅವರಿಗೆ ಅಪರಿಚಿತರು ಜೀವ ಬೆದರಿಕೆವೊಡ್ಡಿದ್ದಾರೆ. ...

22 Apr, 2018
23 ಯುವತಿಯರ ವಂಚಿಸಿದ್ದವನ ಬಂಧನ

ಜೆ.ಸಿ.ನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ
23 ಯುವತಿಯರ ವಂಚಿಸಿದ್ದವನ ಬಂಧನ

22 Apr, 2018