ಶೋಭಾ ಡ್ರೀಮ್‌ ಎಕರ್ಸ್‌ ವಿರುದ್ಧ ಕ್ರಮಕ್ಕೆ ಆಗ್ರಹ

ಕಾರ್ಮಿಕರ ಕುಟುಂಬಗಳಿಗೆ ತಲಾ ₹25 ಲಕ್ಷ ಪರಿಹಾರ ನೀಡಲು ಒತ್ತಾಯ

ಕರ್ನಾಟಕ ವರ್ಕರ್ಸ್‌ ಯೂನಿಯನ್‌ನ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಟ್ಟಡ ಕಾರ್ಮಿಕರು, ಶೋಭಾ ಡ್ರೀಮ್‌ ಎಕರ್ಸ್‌ ಆಡಳಿತ ಮಂಡಳಿಯ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶವ್ಯಕ್ತಪಡಿಸಿದರು.

ಬೆಂಗಳೂರು: ವರ್ತೂರು ಬಳಿಯ ಶೋಭಾ ಡ್ರೀಮ್‌ ಎಕರ್ಸ್‌ ವಸತಿ ಸಮುಚ್ಚಯದ ಕಾರ್ಮಿಕರ ಕಾಲೊನಿಯಲ್ಲಿ ಕಲುಷಿತ ನೀರು ಸೇವಿಸಿ ಮೃತಪಟ್ಟವರ ಕುಟುಂಬಸ್ಥರಿಗೆ ತಲಾ ₹ 25 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ನೂರಾರು ಕಾರ್ಮಿಕರು ಪುರಭವನದ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.

ಕರ್ನಾಟಕ ವರ್ಕರ್ಸ್‌ ಯೂನಿಯನ್‌ನ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಟ್ಟಡ ಕಾರ್ಮಿಕರು, ಶೋಭಾ ಡ್ರೀಮ್‌ ಎಕರ್ಸ್‌ ಆಡಳಿತ ಮಂಡಳಿಯ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶವ್ಯಕ್ತಪಡಿಸಿದರು.

ಯೂನಿಯನ್‌ನ ಜಂಟಿ ಕಾರ್ಯದರ್ಶಿ ಆರ್.ಡಿ.ಮೆಲ್ಕಿಯಾರ್, ‘ಮೂಲಸೌಕರ್ಯಗಳನ್ನು ಒದಗಿಸದೆ ಕಾರ್ಮಿಕರ ಜೀವನದ ಜತೆ ಆ ವಸತಿ ಸಮುಚ್ಚಯದ ಬಿಲ್ಡರ್‌ಗಳು ಚೆಲ್ಲಾಟವಾಡಿದ್ದಾರೆ. ಅವರ ನಿರ್ಲಕ್ಷ್ಯದಿಂದ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ. ಹೀಗಾಗಿ, ಅವರ ವಿರುದ್ಧ ಕಾರ್ಮಿಕ ಇಲಾಖೆಯು ಕ್ರಮ
ಕೈಗೊಳ್ಳಬೇಕು’ ಎಂದರು.

ಅಂತರ ರಾಜ್ಯ ವಲಸೆ ಕಾರ್ಮಿಕರ ನಿಬಂಧನೆಗಳನ್ನು ಇಲಾಖೆಯು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿಲ್ಲ. ರಾಜ್ಯದಲ್ಲಿರುವ ಬಹುತೇಕ ವಲಸೆ ಕಾರ್ಮಿಕರು ಇಲಾಖೆಯಲ್ಲಿ ನೋಂದಾಯಿಸಿಕೊಂಡಿಲ್ಲ. ಹೀಗಾಗಿ, ಸೆಸ್‌ ರೂಪದಲ್ಲಿ ಇಲಾಖೆಯು ಸಂಗ್ರಹಿಸುವ ಕಟ್ಟಡಗಳ ನಿರ್ಮಾಣ ವೆಚ್ಚದಶೇ 1ರಷ್ಟು ಹಣದ ಪ್ರತಿಫಲ ಕಾರ್ಮಿಕರಿಗೆ ಸಿಗುತ್ತಿಲ್ಲ ಎಂದರು.

ಸುರಕ್ಷಿತ ವಾತಾವರಣದಲ್ಲಿಕಾರ್ಮಿಕರು ಕೆಲಸ ಮಾಡುತ್ತಿಲ್ಲ. ಇದರಿಂದ ಅವರು ಅನಾರೋಗ್ಯಕ್ಕೆ ತುತ್ತಾಗಿ ಜೀವಬಿಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಅವರಿಗೆ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಸಹ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಪಿಂಚಣಿ, ಭವಿಷ್ಯನಿಧಿ ಸೇರಿದಂತೆ ಕಾರ್ಮಿಕರ ಕುಟುಂಬಕ್ಕೂ ಯಾವುದೇ ಭದ್ರತೆ ಇಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು
ಕೆರೆಯ ಒಡಲೊಳಗೆ ಅಗೆದಷ್ಟು ಬೆಂಕಿ

ಬೆಂಗಳೂರು
ಕೆರೆಯ ಒಡಲೊಳಗೆ ಅಗೆದಷ್ಟು ಬೆಂಕಿ

21 Jan, 2018
ಈಗಲೂ ಅವ್ಯವಸ್ಥೆಯ ಆಗರ: ವಿಜ್ಞಾನಿ ಟೀಕೆ

ಬೆಂಗಳೂರು
ಈಗಲೂ ಅವ್ಯವಸ್ಥೆಯ ಆಗರ: ವಿಜ್ಞಾನಿ ಟೀಕೆ

21 Jan, 2018
 ಸಮನ್ವಯ ಕೊರತೆ: ನಲುಗುತ್ತಿದೆ ಜಲಮೂಲ

ಬೆಳ್ಳಂದೂರು ಕೆರೆಗೆ ಬೆಂಕಿ
ಸಮನ್ವಯ ಕೊರತೆ: ನಲುಗುತ್ತಿದೆ ಜಲಮೂಲ

21 Jan, 2018
ಬೆಳ್ಳಂದೂರು ಕೆರೆ: ಆರಿದ ಬೆಂಕಿ, ನಿಲ್ಲದ ಹೊಗೆ

28 ಗಂಟೆ ಕಾರ್ಯಾಚರಣೆ
ಬೆಳ್ಳಂದೂರು ಕೆರೆ: ಆರಿದ ಬೆಂಕಿ, ನಿಲ್ಲದ ಹೊಗೆ

21 Jan, 2018
ಎನ್‌ಪಿಎಸ್ ಹಿಂಪಡೆಯಲು  ಸರ್ಕಾರಿ ನೌಕರರ ಒತ್ತಾಯ

ಪ್ರತಿಭಟನೆ
ಎನ್‌ಪಿಎಸ್ ಹಿಂಪಡೆಯಲು ಸರ್ಕಾರಿ ನೌಕರರ ಒತ್ತಾಯ

21 Jan, 2018