ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ಕನಿಷ್ಠ ಬೆಂಬಲ ಬೆಲೆಯೂ ಸಿಗುತ್ತಿಲ್ಲ : ಕೃಷಿ ಸಚಿವ ರಾಧಾಮೋಹನ್‌ ಸಿಂಗ್‌

Last Updated 5 ಜನವರಿ 2018, 12:23 IST
ಅಕ್ಷರ ಗಾತ್ರ

ನವದೆಹಲಿ: ‘ದೇಶದಲ್ಲಿನ ರೈತರು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಸಿಗುತ್ತಿಲ್ಲ. ಅವರಿಗೆ ಸೂಕ್ತ ಪ್ರತಿಫಲವನ್ನು ಒದಗಿಸಲು ಪ್ರಯತ್ನಿಸುತ್ತಿದ್ದೇವೆ’ ಎಂದು ಕೇಂದ್ರ ಕೃಷಿಸಚಿವ ರಾಧಾಮೋಹನ್‌ ಸಿಂಗ್‌ ಹೇಳಿದರು.

ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಅವರು, ‘ದೆಹಲಿಯಿಂದ ಕೊಲ್ಕತ್ತಾದವರೆಗಿನ ಹಲವಾರು ಪ್ರದೇಶಗಳನ್ನು ನಾನು ಸುತ್ತಾಡಿದ್ದೇನೆ. ಈ ಪ್ರದೇಶದ ರೈತರು ಬೆಳೆದ ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆಯೂ ಸಿಗುತ್ತಿಲ್ಲ. ಅದನ್ನು ತಲುಪಿಸುವ ಜವಾಬ್ದಾರಿ ಹೊತ್ತಿರುವ ರಾಜ್ಯಗಳ ಕಾರ್ಯವೈಖರಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ’ ಎಂದರು.

‘ಗೋಧಿ ಮತ್ತು ಭತ್ತವನ್ನು ಹೊರತುಪಡಿಸಿ, ಈಗಾಗಲೇ ಉಳಿದ ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಘೋಷಿಸಿದ್ದೇವೆ. ಬೆಂಬಲ ಬೆಲೆಗಿಂತಲು ಬೆಲೆಗಳು ಕೆಳಗಿಳಿದಾಗ ಸರ್ಕಾರವೇ ಧಾನ್ಯಗಳನ್ನು ಖರೀದಿಸಲಿದೆ. ಧಾನ್ಯಗಳ ಖರೀದಿಗೆ ರಾಜ್ಯಗಳಿಂದ ಪ್ರಸ್ತಾವನೆ ಬಂದರೆ, ಕೇಂದ್ರವೆ ಖರೀದಿಗೆ ಅನುದಾನ ನೀಡಲಿದೆ. ಹೀಗೆ ಖರೀದಿಸಿ 8 ಲಕ್ಷ ಮೆಟ್ರಿಕ್‌ ಟನ್‌ಗಿಂತ ಹೆಚ್ಚಿನ ದ್ವಿದಳ ಧಾನ್ಯ ಹಾಗೂ ಹತ್ತಿಯನ್ನು ಸಂಗ್ರಹಿಸಲಾಗಿದೆ’ ಎಂದರು.

‘ಯುರೋಪಿನ ರಾಷ್ಟ್ರಗಳು ನಮ್ಮ ದೇಶ ಮಾವಿನ ಆಮದಿಗೆ ತಡೆಹಿಡಿದಿದ್ದವು. ಸರ್ಕಾರ ತೆಗೆದುಕೊಂಡ ಕ್ರಮಗಳ ಬಳಿಕ ಮಾವಿನ ರಫ್ತು ಮತ್ತೆ ಆರಂಭವಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT