ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

150 ಜನರ ಸ್ವಚ್ಛತಾ ಸೇವೆ, ಪೊಲೀಸ್‌ ಠಾಣೆಯಲ್ಲಿ ಉಪಾಹಾರ

Last Updated 8 ಜನವರಿ 2018, 5:10 IST
ಅಕ್ಷರ ಗಾತ್ರ

ಮಂಗಳೂರು: ನಾಲ್ಕನೇ ಹಂತದ ರಾಮಕೃಷ್ಣ ಮಿಷನ್ ಸ್ವಚ್ಛ ಮಂಗ ಳೂರು ಅಭಿಯಾನದ 10ನೇ ವಾರದ ಸ್ವಚ್ಛತಾ ಕಾರ್ಯಕ್ರಮ ಭಾನುವಾರ ಕದ್ರಿಯಲ್ಲಿರುವ ವೀರ ಯೋಧರ ಸ್ಮಾರಕದ ಎದುರುಗಡೆ ಹಮ್ಮಿಕೊಳ್ಳಲಾಗಿತ್ತು.

ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಉಪಸ್ಥಿತಿ ಯಲ್ಲಿ ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಹಾಗೂ ವೈದ್ಯರಾದ ಡಾ. ಜೀವರಾಜ್ ಸೊರಕೆ ಅಭಿಯಾನಕ್ಕೆ ಹಸಿರು ನಿಶಾನೆ ತೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಥಮ್‌, ‘ರಾಮಕೃಷ್ಣ ಮಿಷನ್ನಿನ ಕಾರ್ಯ ಇಡೀ ದೇಶಕ್ಕೆ ಮಾದರಿ ಯಾಗುವಂತದ್ದು. ಇದು ಕೇವಲ ದಕ್ಷಿಣ ಕನ್ನಡ ಜಿಲ್ಲೆಗೆ ಸೀಮಿತವಾಗದೇ ಕರ್ನಾಟಕದಾದ್ಯಂತ ಪಸರಿಸಬೇಕು. ಬಾಹ್ಯ ಶುಚಿತ್ವದಂತೆ ಮನಸ್ಸನ್ನು ಹಸನುಗೊಳಿಸುವ ‘ಸ್ವಚ್ಛ ಮನಸ್ಸು’ ಕಾರ್ಯಕ್ರಮ ರಾಮಕೃಷ್ಣ ಮಿಷನ್ನಿನಿಂದ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ. ಪ್ರಧಾನಿಯವರ ಕನಸು ಇಲ್ಲಿ ನನಸಾ ಗುತ್ತಿದೆ ಎಂದರು.

ಡಾ. ಜೀವರಾಜ್ ಸೊರಕೆ ಮಾತ ನಾಡಿ ‘ಮೂರುವರೆ ವರ್ಷಗಳಿಂದ ಈ ಅಭಿಯಾನ ನಿರಂತರವಾಗಿ ನಡೆದು ಕೊಂಡು ಬಂದು ಜನಮಾನಸವನ್ನು ಮುಟ್ಟಿ ಜನಜಾಗೃತಿ ಉಂಟುಮಾಡುವಲ್ಲಿ ಯಶಸ್ವಿಯಾಗಿದೆ. ಇದರ ಹಿಂದಿನ ಪರಿಶ್ರಮ ಅಪಾರವಾದುದು’ ಎಂದರು.

ಸ್ವಚ್ಛತಾ ಅಭಿಯಾನದ ಮಾರ್ಗದರ್ಶಿ, ಶಾಸಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಚಾಲಕ ಸ್ವಾಮಿ ಏಕಗಮ್ಯಾನಂದಜಿ ಸ್ವಾಗತಿಸಿ ವಂದಿಸಿದರು.

ಸ್ವಚ್ಛತಾ ಕಾರ್ಯ: ಸುಮಾರು 150 ಜನ ಸ್ವಯಂಸೇವಕರು ನಾಲ್ಕು ತಂಡಗಳಲ್ಲಿ ಕೆಲಸ ಶುರುಮಾಡಿದರು. ಸರ್ಕ್ಯೂಟ್‌ ಹೌಸ್‌ನ ಮುಂಭಾಗದ ವೃತ್ತವನ್ನು ಪ್ರಾಧ್ಯಾಪಕ ಶೇಷಪ್ಪ ಅಮೀನ್ ಸೇರಿ ದಂತೆ 30 ಜನ ಕಸ ತೆಗೆದು ಸ್ವಚ್ಛ ಮಾಡಿದರು. ಉದಯ ಕೆ. ಪಿ. ಹಾಗೂ ಕಮಲಾಕ್ಷ ಪೈ ಮಾರ್ಗದರ್ಶನದಲ್ಲಿ ಸಂತ ಅಲೋಶಿಯಸ್ ಸಹಾಯ ತಂಡದ ವಿದ್ಯಾರ್ಥಿಗಳು ಬಸ್ ನಿಲ್ದಾಣದ ಸುತ್ತ ಮುತ್ತ ಬೆಳೆದಿದ್ದ ಹುಲ್ಲು ಕತ್ತರಿಸಿ ಕಸ ಹೆಕ್ಕಿ ಸ್ವಚ್ಛ ಮಾಡಿದರು.

ವಿವೇಕಾನಂದ ಶೆಣೈ ಹಾಗೂ ಯುವ ಕಾರ್ಯಕರ್ತರು ಬಸ್ ನಿಲ್ದಾಣದ ಮೇಲ್ಚಾವಣೆಯನ್ನು ನೀರಿನಿಂದ ತೊಳೆದು ಸುಂದರಗೊಳಿಸಿದರು. ಮಹ್ಮದ್ ಶಮೀಮ ಹಾಗೂ ಮಸಾ ಹೀರೊ ಸಹಿತ ಅನೇಕ ಹಿರಿಯರು ವಿಭಜಕಗಳಲ್ಲಿದ್ದ ತ್ಯಾಜ್ಯ ಹುಲ್ಲು ತೆಗೆದು ಗುಡಿಸಿದರು. ಎಂ.ಆರ್. ವಾಸುದೇವ ಮಾರ್ಗದರ್ಶನದಲ್ಲಿ ಕದ್ರಿ ಪರಿಸರದ ಮನೆಮನೆಗೆ ತೆರಳಿ ಸಾರ್ವಜನಿಕರಿಗೆ ಸ್ವಚ್ಛತೆಯ ಕರಪತ್ರ ನೀಡಿ ಅರಿವು ಮೂಡಿಸಲು ಪ್ರಯತ್ನಿಸಲಾಯಿತು.

ಮುಂದುವರೆದ ಕಾರ್ಯ: ಹಿಂದಿನ ವಾರ ಕರಂಗಲ್ಪಾಡಿ ಮಾರುಕಟ್ಟೆ ಬಳಿ ಸ್ವಚ್ಛತೆ ಮಾಡಲಾಗಿತ್ತು. ಅಲ್ಲಿ ನುರಿತ ಕಾರ್ಮಿಕರ ಸಹಾಯದಿಂದ ಗೋಡೆಗೆ ಸಾರಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ ಬರಹ ಹಾಗೂ ಹೂ ಗಿಡಗಳನ್ನು ನೆಟ್ಟು ಮತ್ತಷ್ಟು ಅಂದವಾಗಿಸಲು ಪ್ರಯತ್ನಿಸಲಾಗುತ್ತಿದೆ. ಅಭಿಯಾನದ ಮುಖ್ಯ ಸಂಯೊಜಕ ದಿಲ್ ರಾಜ್ ಆಳ್ವ ಮಾರ್ಗದರ್ಶಿಸಿದರು.

ವಿಠಲ್ ದಾಸ್ ಪ್ರಭು, ಕಿಶೋರ್ ಕುಮಾರ್ ಪುತ್ತೂರು, ಸುಜಿತ್ ಪ್ರತಾಪ್, ಅಕ್ಷಿತ್ ಅತ್ತಾವರ್, ಸೌರಜ್ ಮಂಗಳೂರು, ಮೆಹಬೂಬ್ ಸಾಬ್ ಸೇರಿದಂತೆ ಅನೇಕರು ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಎಲ್ಲ ಕಾರ್ಯಕರ್ತರಿಗೆ ಕದ್ರಿ ಪೊಲೀಸ್‌ ಠಾಣೆಯ ಆವರಣದಲ್ಲಿ ಉಪಾ ಹಾರದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮಗಳಿಗೆ ಎಂಆರ್‌ಪಿಎಲ್‌ ಪ್ರಾಯೋಜಕತ್ವ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT