ಪಾವಗಡ

ಸಮಾವೇಶಕ್ಕೆ ಬರದ ಸಿದ್ಧತೆ

ಪಟ್ಟಣದಲ್ಲಿ ಸೋಮವಾರ ನಡೆಯಲಿರುವ ಮನೆ ಮನೆಗೆ ಕುಮಾರಣ್ಣ ಉದ್ಘಾಟನಾ ಕಾರ್ಯಕ್ರಮ ಹಾಗೂ ಯುವ ಜನತಾದಳ ಬೃಹತ್ ಸಮಾವೇಶಕ್ಕೆ ಗುರುಭವನ ಮೈದಾನದ ಬಳಿ ಭಾನುವಾರ ಸಿದ್ಧತೆ ನಡೆಸಲಾಯಿತು.

ಪಾವಗಡ: ಪಟ್ಟಣದಲ್ಲಿ ಸೋಮವಾರ ನಡೆಯಲಿರುವ ಮನೆ ಮನೆಗೆ ಕುಮಾರಣ್ಣ ಉದ್ಘಾಟನಾ ಕಾರ್ಯಕ್ರಮ ಹಾಗೂ ಯುವ ಜನತಾದಳ ಬೃಹತ್ ಸಮಾವೇಶಕ್ಕೆ ಗುರುಭವನ ಮೈದಾನದ ಬಳಿ ಭಾನುವಾರ ಸಿದ್ಧತೆ ನಡೆಸಲಾಯಿತು.

ಯುವ ಜನತಾ ದಳ ಕಾರ್ಯಕರ್ತರು ಹಮ್ಮಿಕೊಂಡಿರುವ ಬೈಕ್ ರ‍್ಯಾಲಿಗೆ ಜೆಡಿಎಸ್ ಯುವ ರಾಜ್ಯ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಚಾಲನೆ ನೀಡಲಿದ್ದಾರೆ. ಮನೆ ಮನೆಗೆ ಕುಮಾರಣ್ಣ ಕಾರ್ಯಕ್ರಮವನ್ನು ಜೆಡಿಎಸ್‌ ರಾಷ್ಟ್ರ ಘಟಕದ ಅಧ್ಯಕ್ಷ ಎಚ್.ಡಿ.ದೇವೇಗೌಡ ಉದ್ಘಾಟಿಸಲಿದ್ದಾರೆ.

ಚಿತ್ರ ನಟ ನಿಖಿಲ್‌ಗೌಡ, ಪ್ರಜ್ವಲ್ ರೇವಣ್ಣ, ಜಿಲ್ಲೆಯ ಜೆಡಿಎಸ್ ಶಾಸಕರಾದ ಸುಧಾಕರ್ ಲಾಲ್, ಶ್ರೀನಿವಾಸ್, ಎಂ.ಟಿ.ಕೃಷ್ಣಪ್ಪ, ಸುರೇಶ್ ಬಾಬು, ನಾಗರಾಜಯ್ಯ, ವಿಧಾನ ಪರಿಷತ್ ಸದಸ್ಯ ಕಾಂತರಾಜು, ರಮೇಶಬಾಬು, ಚೌಡರೆಡ್ಡಿ ತೂಪಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ರಾಜ್ಯ ಘಟಕದ ಉಪಾಧ್ಯಕ್ಷ ತಿಮ್ಮಾರೆಡ್ಡಿ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಆರ್.ಸಿ.ಅಂಜಿನಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಬಲರಾಮರೆಡ್ಡಿ, ಯುವ ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ ಚೌಧರಿ, ಮಹಿಳಾ ಘಟಕದ ಅಧ್ಯಕ್ಷೆ ಅಂಬಿಕ ರಮೇಶ್, ಸಂಘಟನಾ ಕಾರ್ಯದರ್ಶಿ ಎನ್.ಎ.ಈರಣ್ಣ, ಉಪಾಧ್ಯಕ್ಷ ಚಂದ್ರಶೇಖರ್, ಪುರಸಭೆ ಅಧ್ಯಕ್ಷೆ ಸುಮಾ ಅನಿಲ್, ಪುರಸಭೆ ಸದಸ್ಯರು, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿರುವರು ಎಂದು ಶಾಸಕ ಕೆ.ಎಂ.ತಿಮ್ಮರಾಯಪ್ಪ ತಿಳಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಇದ್ದು ಇಲ್ಲದಂತಾದ  ₹ 6 ಕೋಟಿ ಮೊತ್ತದ ಸ್ಕೈ ವಾಕ್‌

ತುಮಕೂರು
ಇದ್ದು ಇಲ್ಲದಂತಾದ ₹ 6 ಕೋಟಿ ಮೊತ್ತದ ಸ್ಕೈ ವಾಕ್‌

16 Jan, 2018

ಚಿಕ್ಕನಾಯಕನಹಳ್ಳಿ
ಸಿಗದ ಸಂಬಳ; ಪೌರಕಾರ್ಮಿಕರ ಧರಣಿ

‘ನೀರು ಸರಬರಾಜುದಾರರಿಗೆ 9 ತಿಂಗಳಿನಿಂದ, ವಾಹನ ಚಾಲಕರಿಗೆ 8 ತಿಂಗಳಿನಿಂದ ಮತ್ತು ಸಫಾಯಿ ಕರ್ಮಚಾರಿಗಳಿಗೆ 2 ತಿಂಗಳಿನಿಂದ ಸಂಬಳ ನೀಡಿಲ್ಲ’ ಎಂದು ಪೌರ ಕಾರ್ಮಿಕರು...

15 Jan, 2018
ಪಾಲಿಕೆ ಸೌಲಭ್ಯ ಮರೀಚಿಕೆ: ನಿವಾಸಿಗಳ ಕನವರಿಕೆ

ತುಮಕೂರು
ಪಾಲಿಕೆ ಸೌಲಭ್ಯ ಮರೀಚಿಕೆ: ನಿವಾಸಿಗಳ ಕನವರಿಕೆ

15 Jan, 2018
ಕ್ಯಾಮೇನಹಳ್ಳಿಯಲ್ಲಿ ದನಗಳ ಜಾತ್ರೆ ಪ್ರಾರಂಭ

ಕೊರಟಗೆರೆ
ಕ್ಯಾಮೇನಹಳ್ಳಿಯಲ್ಲಿ ದನಗಳ ಜಾತ್ರೆ ಪ್ರಾರಂಭ

14 Jan, 2018
ಸಂಕ್ರಾಂತಿಗೆ ಎಲ್ಲೆಡೆ ಸಡಗರದ ಸಿದ್ಧತೆ

ತುಮಕೂರು
ಸಂಕ್ರಾಂತಿಗೆ ಎಲ್ಲೆಡೆ ಸಡಗರದ ಸಿದ್ಧತೆ

14 Jan, 2018