ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾ.ಅಂಬೇಡ್ಕರ್ ಭವನ ಉದ್ಘಾಟನೆ 8ರಂದು

Last Updated 8 ಜನವರಿ 2018, 6:07 IST
ಅಕ್ಷರ ಗಾತ್ರ

ಸಿಂದಗಿ: ಡಾ.ಬಿ.ಆರ್.ಅಂಬೇಡ್ಕರ್ ಭವನ ಇದೇ 8 ರಂದು ನಗರದಲ್ಲಿ ಲೋಕಾರ್ಪಣೆಯಾಗಲಿದೆ. ದೀಕ್ಷಾಭೂಮಿ, ಸಾಮೂಹಿಕ ಬೌದ್ಧ ಧರ್ಮ ಸ್ವೀಕಾರ ಸಮಾರಂಭ ನಡೆದ ಸ್ಥಳದಲ್ಲಿಯೇ ಅಂಬೇಡ್ಕರ್ ಭವನ ನಿರ್ಮಾಣದ ಸಂಕಲ್ಪ ಯಶಸ್ವಿಯಾಗಿವುದಕ್ಕೆ ಅಪಾರ ಸಂತಸ ತಂದಿದೆ ಎಂದು ಅಂಬೇಡ್ಕರ್ ಭವನದ ನಿರ್ಮಾಣದ ರೂವಾರಿ, ಪುರಸಭೆ ಸದಸ್ಯ ರಾಜಶೇಖರ ಕೂಚಬಾಳ ಹೇಳಿದರು.

ಭಾನುವಾರ ಇಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು ಭವನದ ನೀಲನಕ್ಷೆ 2008 ರಲ್ಲಿ ನಿರ್ಮಾಣಗೊಂಡು 2009 ರಲ್ಲಿ ಭವನ ನಿರ್ಮಾಣದ ಭೂಮಿಪೂಜೆ ನೆರವೇರಿತು. ಪುರಸಭೆ ಅನುದಾನದಲ್ಲಿ ಸಣ್ಣ ಪ್ರಮಾಣದಲ್ಲಿ ನಿರ್ಮಿಸಲು ಉದ್ದೇಶಿಸಿದ ಭವನ 2012 ರಲ್ಲಿ ಶಾಸಕ ರಮೇಶ ಭೂಸನೂರ ಅವರ ಪ್ರಾಮಾಣಿಕ ಪ್ರಯತ್ನದ ಫಲವಾಗಿ ಸಮಾಜ ಕಲ್ಯಾಣ ಇಲಾಖೆಯಿಂದ ₹ 25 ಲಕ್ಷದ ಬದಲಾಗಿ ₹ 1ಕೋಟಿ ಮಂಜೂರುಗೊಂಡಿದ್ದರಿಂದ ನಮಗೆ ಆನೆಬಲ ಬಂದಂತಾಯಿತು ಎಂದರು.

ನಿರ್ಮಿತಿ ಕೇಂದ್ರಕ್ಕೆ ನಿರ್ಮಾಣದ ಕಾರ್ಯ ವಹಿಸಿಕೊಡಲಾಯಿತು. ಭವನದ ನಿರ್ಮಾಣಕ್ಕಾಗಿ 2009ರಿಂದ 2017 ರವರೆಗೆ ನಾ ಪಟ್ಟ ಕಷ್ಟ, ನೋವು ಹಾಗೇ ಜನರ ಅಪಹಾಸ್ಯದ ಮಾತುಗಳು ಕೇಳಿಕೊಂಡು ತಾಳ್ಮೆಯಿಂದ ಸುಂದರವಾದ ಭವನ ನಿರ್ಮಾಣ ಮಾಡಲಾಗಿದೆ. ಭವನ ಅತ್ಯಂತ ಉತ್ಕೃಷ್ಟವಾಗಿ ನಿರ್ಮಾಣಗೊಳ್ಳಲು ದಲಿತ ಯುವಕರು ಸಲ್ಲಿಸಿದ ಸೇವಾ ಕಾರ್ಯ ಸ್ಮರಣೀಯ ಎಂದು ವಿವರಿಸಿದರು.

ಇನ್ನೂ ಶುದ್ಧ ಕುಡಿಯುವ ನೀರು, ವಿದ್ಯುತ್ ಟ್ರಾನ್ಸ್ ಫರ್ಮರ್, ಪೀಠೋಪಕರಣಗಳ ಕಾರ್ಯ ಆಗಬೇಕಿದೆ. ಈ ಸಂದರ್ಭದಲ್ಲಿ ಶಾಸಕ ಭೂಸನೂರ ಅವರಿಗೆ ಸಮಸ್ತ ದಲಿತ ಬಂಧುಗಳ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಭವನದ ಉದ್ಘಾಟನೆಯನ್ನು ಜ. 8 ರಂದು ಬೆಳಿಗ್ಗೆ 10–30 ಕ್ಕೆ ನೆರವೇರಿಸುವರು.ಶಾಸಕ ರಮೇಶ ಭೂಸನೂರ ಅಧ್ಯಕ್ಷತೆ ವಹಿಸಿಕೊಳ್ಳುವರು. ಜನಪ್ರತಿನಿಧಿಗಳು ಪಾಲ್ಗೊಳ್ಳುವರು ಎಂದು ತಿಳಿಸಿದರು.‌ ಪ್ರತಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯ ಬಿ.ಆರ್.ಯಂಟಮಾನ, ಶ್ರೀಕಾಂತ ಸೋಮಜಾಳ, ಶಿವಾನಂದ ಆಲಮೇಲ, ಸಂದೀಪ ಚೌರ, ಶ್ರೀಕಾಂತ ಬಿಜಾಪುರ ಇದ್ದರು.

ಹಿಂದೂ–ಮುಸ್ಲಿಂ ಗಲಾಟೆ ಅಲ್ಲ: ಆಕ್ರೋಶ ಅಷ್ಟೇ ನಗರದಲ್ಲಿ ಶನಿವಾರ ದಲಿತ ಸಂಘಟನೆಗಳು ಭೀಮಾ ಕೋರೆಗಾಂವ್‌ದಲ್ಲಿ ಸಂಭವಿಸಿದ ಹಿಂಸಾಚಾರ ಖಂಡಿಸಿ ನಡೆಸಿದ ಪ್ರತಿಭಟನಾ ಮೆರವಣಿಗೆ ಸಂದರ್ಭದಲ್ಲಿ ಶ್ರೀರಾಮ ಸೇನಾ ಕಾರ್ಯಾಲಯದ ಮೇಲೆ ಕಲ್ಲು ತೂರಾಟ ನಡೆದಿರುವುದು ಖಂಡನೀಯ. ಈ ಘಟನೆಗೆ ದಲಿತ ಸಂಘಟನೆಗಳೇ ಹೊಣೆ. ಆದರೆ ಇದು ಹಿಂದೂ–ಮುಸ್ಲಿಂ ಗಲಾಟೆ ಅಲ್ಲ. ಬ್ರಾಹ್ಮಣಶಾಹಿಗಳ ವಿರುದ್ಧದ ಆಕ್ರೋಶದ ಪ್ರತೀಕವಾಗಿದೆ ಎಂದರು.

ದಲಿತರ ಸಹಕಾರಕ್ಕೆ ಬರುತ್ತಿರುವ ಮುಸ್ಲಿಂರನ್ನು ದೂರಿಕರಿಸುವ ರೀತಿಯಲ್ಲಿ ಬಿಂಬಿಸುವುದು ಸರಿಯಲ್ಲ. ಕೋಮು ಗಲಭೆಗೆ ಶ್ರೀರಾಮ ಸೇನೆ ಪ್ರಚೋದಿಸಿದರೆ ಅದನ್ನು ಎದುರಿಸಲು ಭೀಮಸೇನೆ ಸಿದ್ಧವಾಗಿರುತ್ತದೆ. ಶ್ರೀರಾಮಸೇನೆಯಲ್ಲೂ ದಲಿತರಿದ್ದಾರೆ ಎಂಬುದು ನೆನಪಿನಲ್ಲಿರಲಿ ಎಂದು ಪುರಸಭೆ ಸದಸ್ಯ ರಾಜಶೇಖರ ಕೂಚಬಾಳ ಎಚ್ಚರಿಸಿದರು. ಭೀಮಾ ಕೋರೆಗಾಂವ್ ಹಿಂಸಾಚಾರ ಖಂಡಿಸಿ ಸಿಂದಗಿಯಲ್ಲಿ ಹಿಂದೂ ಸಂಘಟನೆಗಳು ಬೆಂಬಲಿಸದೇ ಇರುವುದು ವಿಷಾದಕರ ಎಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT