ಶಹಾಪುರ

ಅಕ್ರಮ ಮರಳು ಸಾಗಣೆ ತಡೆಗೆ ಹೋರಾಟ

ಕೃಷ್ಣಾ ನದಿ ಪಾತ್ರದಲ್ಲಿ ನಿಸರ್ಗದ ಸಂಪತ್ತು ಮರಳನ್ನು (ಉಸುಕು) ರಕ್ಷಿಸಲು ತಾಲ್ಲೂಕಿನ ಕೊಳ್ಳೂರ ಗ್ರಾಮದ ಸಾಮಾಜಿಕ ಕಾರ್ಯಕರ್ತ ಹಣಮಂತ ಭಂಗಿ ಕಾನೂನು ಹೋರಾಟ ನಡೆಸಿದ್ದಾರೆ.

ಶಹಾಪುರ ತಾಲ್ಲೂಕಿನ ಕೃಷ್ಣಾ ನದಿಯಲ್ಲಿ ಜೆಸಿಬಿ ಮೂಲಕ ಮರಳು ತುಂಬುತ್ತಿರುವುದು (ಸಂಗ್ರಹ ಚಿತ್ರ)

ಶಹಾಪುರ: ಕೃಷ್ಣಾ ನದಿ ಪಾತ್ರದಲ್ಲಿ ನಿಸರ್ಗದ ಸಂಪತ್ತು ಮರಳನ್ನು (ಉಸುಕು) ರಕ್ಷಿಸಲು ತಾಲ್ಲೂಕಿನ ಕೊಳ್ಳೂರ ಗ್ರಾಮದ ಸಾಮಾಜಿಕ ಕಾರ್ಯಕರ್ತ ಹಣಮಂತ ಭಂಗಿ ಕಾನೂನು ಹೋರಾಟ ನಡೆಸಿದ್ದಾರೆ.

‘ಯಾದಗಿರಿ ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ನಿರಂತರವಾಗಿ ನಡೆಯುತ್ತಿದೆ. ಸರ್ಕಾರಿ ಅಧಿಕಾರಿಗಳು ಹಣ ಪಡೆದು ಮರಳು ತುಂಬಿದ ಲಾರಿಗಳನ್ನು ಚೆಕ್‌ಪೋಸ್ಟ್ ಮೂಲಕವೇ ಬಿಡುತ್ತಿದ್ದಾರೆ. ನಿಸರ್ಗದ ಸಂಪತ್ತು ಉಳಿಸುವಂತೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿರುವೆ.

ಈಚೆಗೆ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ.ರಮೇಶ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶಕುಮಾರ ಅವರಿದ್ದ ವಿಭಾಗೀಯ ಪೀಠವು ಚೆಕ್‌ಪೋಸ್ಟ್‌ಗಳಲ್ಲಿ ಪ್ರಾಮಾ ಣಿಕ ಅಧಿಕಾರಿಗಳನ್ನು ನಿಯೋಜಿಸಿದರೆ ಮಾತ್ರ ರಾಜ್ಯದಲ್ಲಿ ಅಕ್ರಮ ಮರಳು ಸಾಗಣೆ ದಂಧೆ ತಡೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದೆ’ ಎಂದು ಅರ್ಜಿದಾರ ಹಣಮಂತ ಭಂಗಿ ತಿಳಿಸಿದರು.

‘ಸುರಪುರ, ಶಹಾಪುರ ತಾಲ್ಲೂಕಿನಲ್ಲಿ ಮತ್ತು ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಕೃಷ್ಣಾ ನದಿ ಪಾತ್ರದಲ್ಲಿ ಆಯಾ ಗ್ರಾಮಸ್ಥರ ಜೊತೆಗೂಡಿ ಕೆಲ ವ್ಯಕ್ತಿಗಳು ಪೊಲೀಸರು, ರಾಜಕೀಯ ಮುಖಂಡರು, ಜನಪ್ರತಿನಿಧಿಗಳು ಶಾಮೀಲಾಗಿ ನದಿಯಲ್ಲಿ ಜೆಸಿಬಿ ಬಳಸಿ ಮರಳನ್ನು ಲಾರಿಯಲ್ಲಿ ತುಂಬುತ್ತಿದ್ದಾರೆ.

ಇದರ ತಡೆಗೆ ಮಾಹಿತಿ ಹಕ್ಕು ಕಾಯ್ದೆಯನ್ನು ಸದ್ಬಳಕೆ ಮಾಡಿಕೊಂಡು ದಾಖಲೆಗಳನ್ನು ಸಂಗ್ರಹಿಸಿದೆ. ಜೀವದ ಹಂಗು ತೊರೆದು ನದಿಯಲ್ಲಿ ಮರಳು ತುಂಬುವ ಚಿತ್ರವನ್ನು ತೆಗೆದು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದೆ. ಆದರೆ, ಪ್ರಯೋಜನವಾಗಲಿಲ್ಲ. ಬದಲಿಗೆ ನನಗೇ ಗದರಿಸಿ ಕಳುಹಿಸಿದರು. ಇದರಿಂದ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ತಾತ್ಕಾಲಿಕವಾಗಿ ಯಶಸ್ವಿಯಾಗಿರುವೆ’ ಎನ್ನುತ್ತಾರೆ ಅವರು.

2ನೇ ಅರ್ಜಿ: ‘2014ರಲ್ಲಿ ಹೈಕೋರ್ಟ್‌ನಲ್ಲಿ ಮರಳು ಗಣಿಗಾರಿಕೆ ತಡೆಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದೆ. ಮರಳು ನಿರ್ವಹಣಾ ಸಮಿತಿ ಅಧ್ಯಕ್ಷರಾಗಿದ್ದ ಅಂದಿನ ಜಿಲ್ಲಾಧಿಕಾರಿ ಮನೋಜ್ ಜೈನ್ ಅವರು ಮರಳು ಸಾಗಣೆ ತಡೆಗಟ್ಟದಿದ್ದಾಗ ನ್ಯಾಯಾಂಗ ನಿಂದನಾ ಅರ್ಜಿಯನ್ನು ಸಲ್ಲಿಸಿದೆ. ಆಗ ಜಿಲ್ಲಾಧಿಕಾರಿ ಕ್ಷಮಾಪಣೆ ಕೋರಿಕೆಯ ಪತ್ರ ನೀಡಿದ್ದರು. ಕೆಲ ದಿನದಲ್ಲಿ ಅವರು ವರ್ಗವಾದರು’ ಎಂದು ನೆನಪಿಸುತ್ತಾರೆ ಹಣಮಂತ ಭಂಗಿ.

‘ಸಾರ್ವಜನಿಕ ಸ್ವತ್ತು ಹಾಗೂ ಹಿತಾಸಕ್ತಿಯನ್ನು ಕಾಪಾಡಲು ಪ್ರತಿಭಟನೆ, ರಸ್ತೆತಡೆ ಹಾಗೂ ಜನ ಸಂಘಟನೆಯ ಅಗತ್ಯವಿಲ್ಲ. ನಮ್ಮ ಹೋರಾಟ ಸತ್ಯ ಹಾಗೂ ನ್ಯಾಯದ ಹಾದಿಯಲ್ಲಿ ಇದ್ದರೆ ಎಂತಹ ಸಮಸ್ಯೆಯನ್ನೂ ಎದುರಿಸಲು ಸಾಧ್ಯ. ಹೋರಾಟಕ್ಕೆ ಹೆಚ್ಚು ಓದು ಅಗತ್ಯವಿಲ್ಲ. ನಾನು ಕೇವಲ 6ನೇ ತರಗತಿ ಅಭ್ಯಾಸ ಮಾಡಿದ್ದೇನೆ’ ಎನ್ನುತ್ತಾರೆ ಅವರು.

* * 

ಮರಳು ಗಣಿಗಾರಿಕೆ ತಡೆ ಹೋರಾಟಕ್ಕೆ ಕೆಲ ದುಷ್ಟಶಕ್ತಿಗಳು ಜೀವ ಬೆದರಿಕೆ <br/>ಹಾಕುತ್ತಿವೆ. ಬೆದರಿಕೆಗೆ ಬಗ್ಗದೆ ನಿರಂತರ ಹೋರಾಟ ಮುಂದುವರೆಸಿರುವೆ.
ಹಣಮಂತ ಭಂಗಿ
ಸಾಮಾಜಿಕ ಕಾರ್ಯಕರ್ತ

 

Comments
ಈ ವಿಭಾಗದಿಂದ ಇನ್ನಷ್ಟು
ಮಲ್ಲಯ್ಯನ ಜಾತ್ರೆಯಲ್ಲಿ ಖರೀದಿ ಜೋರು

ಯಾದಗಿರಿ
ಮಲ್ಲಯ್ಯನ ಜಾತ್ರೆಯಲ್ಲಿ ಖರೀದಿ ಜೋರು

16 Jan, 2018
ರೈತರಿಗೆ ವರದಾನ ಸಮಗ್ರ ಕೃಷಿ ಪದ್ಧತಿ

ಶಹಾಪುರ
ರೈತರಿಗೆ ವರದಾನ ಸಮಗ್ರ ಕೃಷಿ ಪದ್ಧತಿ

16 Jan, 2018
ಪರಿಹಾರ ಕಾಣದ ದೈನಂದಿನ ಸಮಸ್ಯೆಗಳು

ಯಾದಗಿರಿ
ಪರಿಹಾರ ಕಾಣದ ದೈನಂದಿನ ಸಮಸ್ಯೆಗಳು

15 Jan, 2018
50 ಕ್ವಿಂಟಲ್‌ ಭಾರ ಎಳೆದ ಎತ್ತುಗಳು

ಕಕ್ಕೇರಾ
50 ಕ್ವಿಂಟಲ್‌ ಭಾರ ಎಳೆದ ಎತ್ತುಗಳು

15 Jan, 2018

ಯಾದಗಿರಿ
ಸಂಕ್ರಾಂತಿ ರೈತರಿಗೆ ಸುಗ್ಗಿಯ ಹಿಗ್ಗು ತರಲಿ

‘ರೈತರು ಸದೃಢವಾಗಿದ್ದರೆ ನಾಡು, ಸಮಾಜ ಸುಖಿಯಾಗಿರುತ್ತದೆ. ರೈತರ ಬದುಕಿನ ಬೆಳಕಾಗಿ ಈ ಹಬ್ಬ ಸಂಭ್ರಮವನ್ನು ತರುವಂತಾಗಲಿ. ರೈತರು ಉತ್ತಿ ಬಿತ್ತಿ ಬೆಳೆದ ಫಸಲನ್ನು ರಾಶಿ...

15 Jan, 2018